ಪೂರ್ಣಚಂದ್ರ ತೇಜಸ್ವಿರ ಪುಸ್ತಕ ಕರ್ವಾಲೋ ಕಾರ್ಯಕ್ರಮ

ಕೋಲಾರ,ಡಿ.೨೬: ಪ್ರಕೃತಿಯ ವಿಸ್ಮಯ ಮತ್ತು ವಿಜ್ಞಾನದ ಹುಡುಕಾಟವೇ ಪೂರ್ಣಚಂದ್ರ ತೇಜಸ್ವಿ ಅವರ ಕರ್ವಾಲೋ ಕಾದಂಬರಿಯ ಆಶಯ ಎಂದು ಬೆಂಗಳೂರು ಉತ್ತರ ವಿವಿ ಪ್ರಾಧ್ಯಾಪಕಿ ಡಾ. ನಾಗಮಣಿ ಹೇಳಿದರು.
ನಗರದ ಪತ್ರಕರ್ತರ ಭವನದಲ್ಲಿ ನಡೆದ ಓದುಗ ಕೇಳುಗ ನಮ್ಮ ನಡೆ ತಿಂಗಳ ಕಾರ್ಯಕ್ರಮದ ಪೂರ್ಣಚಂದ್ರ ತೇಜಸ್ವಿ ಯವರ ಪುಸ್ತಕ ಕರ್ವಾಲೋ ಬಗ್ಗೆ ಮಾತನಾಡಿ, ಇಡೀ ಕಾದಂಬರಿ ಪರಿಸರ ಪ್ರಜ್ಞೆಯನ್ನು ಮೂಡಿಸುತ್ತದೆ ಆರತಿ ಕ್ಯಾತ ಕುತೂಹಲದ ಕೇಂದ್ರ ಬಿಂದುವಾಗಿದ್ದು ಮನುಷ್ಯನ ಆಲೋಚನೆಗೆ ಸಿಲುಕದ ಪ್ರಕೃತಿಯ ಸಂಕೇತ ಹಾರುವ ಓತಿಕೇತ ವಾಗಿರುತ್ತದೆ ಎಂದು ತಿಳಿಸಿದರಲ್ಲದೆ ಕಾದಂಬರಿಯ ಉದ್ದಕ್ಕೂ ಬರುವ ಪಾತ್ರಗಳು ಸಹಜ ಜೀವನದ ಸಾಂಕೇತಿಕವಾಗಿ ನಿಲ್ಲುತ್ತವೆ ಎಂದರು.
ಕಾದಂಬರಿಯು ಪರಿಸರ ಪ್ರಜ್ಞೆಯನ್ನು ಮೂಡಿಸುತ್ತದೆ. ನಮ್ಮ ಸುತ್ತಮುತ್ತಲೂ ನಮ್ಮ ದುರಾಸೆಗಳಿಗೆ ಬಲಿಯಾಗುತ್ತಿರುವ ಪರಿಸರವನ್ನು ಗಮನಿಸಿದಾಗ ಕಾದಂಬರಿಯ ಪರಿಸರ ನಮ್ಮನ್ನು ಎಚ್ಚರಿಸುತ್ತದೆ ಎಂದು ಅಭಿಪ್ರಾಯಪಟ್ಟರು.
ಈ ಸಂದರ್ಭದಲ್ಲಿ ತೇಜಸ್ವಿಯವರ ಮತ್ತು ಕಾದಂಬರಿಯ ನಾಯಕರಾದ ಕರ್ವಾಲೋ ಜೊತೆಗೆ ಸಂಗಾತಿಯಾಗಿದ್ದ ಬೆಮಲ್ ನಿವೃತ್ತ ನೌಕರರಾದ ಅಲಿಕ್ ಅನುಭವಗಳನ್ನು ಹಂಚಿಕೊಂಡರು. ಸಮುದಾಯ ರಾಜ್ಯ ಅಧ್ಯಕ್ಷ ಅಚ್ಯುತ್ ಮಾತನಾಡಿ, ಇಡೀ ಕಾದಂಬರಿ ಸಹಜ ಬರವಣಿಗೆ ಮತ್ತು ಸಹಜ ಜೀವನವನ್ನು ತೋರಿಸಿ ಕೊಡುತ್ತದೆ ಎಂದರಲ್ಲದೆ ಪ್ರಕೃತಿಯ ಮುಂದೆ ಮನುಷ್ಯ ಬಹಳ ಕುಬ್ಜ ಎಂದು ತಿಳಿಸಿ, ನಮ್ಮ ಸುತ್ತಮುತ್ತಲಿರುವ ಸಹ ಜೀವಿಗಳ ಜೊತೆ ನಮ್ಮ ಬದುಕು ಕಟ್ಟಿಕೊಳ್ಳಲು ಕರ್ವಾಲೋ ಕಾದಂಬರಿ ಪೂರಕವಾಗಿರುತ್ತದೆ ಎಂದು ಅಭಿಪ್ರಾಯಪಟ್ಟರು.
ಕಾರ್ಯಕ್ರಮದ ಶೀರ್ಷಿಕೆಯೇ ನಮ್ಮ ನಡೆಯನ್ನು ರೂಪಿಸುತ್ತದೆ ಎಂದು ತಿಳಿಸಿದರು.
ಕಾದಂಬರಿಯ ಬಗ್ಗೆ ಸಂವಾದದಲ್ಲಿ ತೊಡಗಿಸಿಕೊಂಡವರು ಜೆಜಿ. ನಾಗರಾಜ್, ಟಿ .ಕೆ. ನಟರಾಜ್ ,ಪುರುಷೋತ್ತಮ್ ರಾವ್ , ಬಾಗೇಪಲ್ಲಿ ಕೃಷ್ಣಮೂರ್ತಿ, ರಾಧಾಮಣಿ, ಮಂಜುಳ, ಸುಬ್ಬಲಕ್ಷ್ಮಿ ವೆಂಕಟ ಲಕ್ಷ್ಮಿ, ಇಂಚರ ನಾರಾಯಣಸ್ವಾಮಿ, ರವೀಂದ್ರಸಿಂಗ್. ಹಮಾ.ರಾಮಚಂದ್ರ ಇದ್ದರು.