ಪೂರಾ ರಘುರೆಡ್ಡಿಗೆ ಕಠಿಣ ಶಿಕ್ಷೆಗೆ ದಲಿತ ಪರ ಸಂಘಟನೆ ಒಕ್ಕೂಟ ಆಗ್ರಹ

ತೆಲಂಗಣದಲ್ಲಿ ಅಂಬೇಡ್ಕರ್ ಮೂರ್ತಿ ಧ್ವಂಸ
ಮಾನ್ವಿ.ನ.೦೪. ತೆಲಂಗಾಣ ರಾಜ್ಯದ ಗದ್ವಾಲ್ ಜಿಲ್ಲೆಯ ದರೂರು ಮಂಡಲದ ರೇವುಲಪಲ್ಲಿ ಗ್ರಾಮದಲ್ಲಿ ಬಾಬಾ ಸಾಹೇಬ ಅಂಬೇಡ್ಕರ್ ಮೂರ್ತಿ ಧ್ವಂಸಗೊಳಿಸಿರುವುದನ್ನು ಖಂಡಿಸಿ ತಹಸೀಲ್ದಾರರ ಮೂಲಕ ರಾಷ್ಟ್ರಪತಿ ಹಾಗೂ ತೆಲಂಗಾಣ ಮುಖ್ಯಮಂತ್ರಿಗೆ ದಲಿತಪರ ಸಂಘಟನೆಗಳಿಂದ ಮನವಿ ಪತ್ರ ಸಲ್ಲಿಸಿದರು.
ಮಾನ್ವಿ ದಲಿತಪರ ಸಂಘಟನೆಗಳ ಒಕ್ಕೂಟ ತೆಲಂಗಾಣ ರಾಜ್ಯದ ಗದ್ವಾಲ್ ಜಿಲ್ಲೆಯ ದರೂರು ಮಂಡಲದ ರೇವುಲಪಲ್ಲಿ ಗ್ರಾಮದಲ್ಲಿ ಬಾಬಾ ಸಾಹೇಬ ಅಂಬೇಡ್ಕರ್ ಅವರ ಮೂರ್ತಿ ದ್ವಂಸಗೊಳಿಸಿರುವುದ ಅದೇ ಗ್ರಾಮಕ್ಕೆ ಸೇರಿದ ಪೂರಾ ರಘುರೆಡ್ಡಿ ಎನ್ನುವರು ಸಂವಿಧಾನಶಿಲ್ಪಿಗೆ ಮಾಡಿದ ಅವಮಾನವಲ್ಲ, ಇಡೀ ಮಾನವ ಕುಲಕ್ಕೆ ಮಾಡಿದ ಅಪಮಾನವಾಗಿದೆ, ಇಂತಹ ಘಟನೆಗಳು ನಿರಂತರವಾಗಿ ನಡೆಯುತ್ತಿದ್ದರೂ ದೇಶದ ವಿವಿಧ ರಾಜ್ಯಗಳಲ್ಲಿ ಒಂದಲ್ಲ ಒಂದು ರೀತಿಯಿಂದ ಬಾಬಾ ಸಾಹೇಬ ಅಂಬೇಡ್ಕ ಮೂರ್ತಿಯನ್ನು ದ್ವಂಸಗೊಳಿಸುವುದು, ಅಪಮಾನಿಸುವುದರ ಜೊತೆಗೆ ಪರಿಶಿಷ್ಟರ ಹಕ್ಕುಗಳನ್ನು ಬಲಿಕೊಡಲಾಗುತ್ತಿದೆ, ಪ್ರಜಾಪ್ರಭುತ್ವದ ಆಡಳಿತ ವ್ಯವಸ್ಥೆಯಲ್ಲಿ ಆಡಳಿತ ನಡೆಸುವ ಕೇಂದ್ರದ ಬಿಜೆಪಿ ಸರ್ಕಾರ ಹಾಗೂ ತೆಲಂಗಾಣ ರಾಜ್ಯದ ಟಿ.ಆರ್.ಎಸ್. ಸರ್ಕಾರಗಳು ಇಂತಹ ದುರ್ಘಟನೆಗಳನ್ನು ತಡೆಯುವಲ್ಲಿ ಸಂಪೂರ್ಣವಾಗಿ ವಿಫಲವಾಗಿರುವುದು ಕಂಡುಬಂದಿರುತ್ತದೆ ದೇಶದಲ್ಲಿ ದಲಿತರ ಮೇಲೆ ದೌರ್ಜನ್ಯಗಳು, ಅಪಮಾನಗಳು, ಅಸ್ಪೃಶ್ಯತೆ ಆಚರಣೆಯಂತಹ ಘಟನೆಗಳು ಮರುಕಳಿಸುತ್ತಿದ್ದರೂ ನಮ್ಮನ್ನು ಆಳುವ ಸರ್ಕಾರಗಳು ಸಂಪೂರ್ಣ ನಿರ್ಲಕ್ಷವಹಿಸಿರುತ್ತವೆ. ತಾವುಗಳು ಸದರಿ ಘಟನೆಯನ್ನು ಗಂಭೀರವಾಗಿ ಪರಿಗಣಿಸಿ ಸ್ಥಳೀಯ ಜಿಲ್ಲಾಡಳಿತ ವ್ಯವಸ್ಥೆಗೆ ಕಟ್ಟುನಿಟ್ಟಿನ ಕ್ರಮಕೈಗೊಳ್ಳುವಂತೆ ಸೂಚಿಸಬೇಕು. ತಕ್ಷಣವೇ ರೇವುದಲ್ಲಿ ಗ್ರಾಮದಲ್ಲಿ ಬಾಬಾ ಸಾಹೇಬರ್ ಮೂರ್ತಿಯನ್ನು ಧ್ವಂಸಗೊಳಿಸಿದ ಆರೋಪಿಗೆ ಕಠಿಣ ಶಿಕ್ಷೆ ವಿಧಿಸಬೇಕೆಂದು ಕೇಂದ್ರ ಮತ್ತು ತೆಲಂಗಾಣ ರಾಜ್ಯ ಸರ್ಕಾರಕ್ಕೆ ಆಗ್ರಹಿಸುತ್ತೇವೆ.
ಈ ಸಂದರ್ಭದಲ್ಲಿ ಪ್ರಭುರಾಜ್ ಕೊಡ್ಲಿ,ಶಿವರಾಜ್ ಉಮಳಿಹೊಸಮರು, ನರಸಪ್ಪ ಜೂಕೂರು, ಅಶೋಕ್ ನಿಲಗಲ್, ಹನುಮಂತ ಸೀಕಲ್, ಲಕ್ಷ್ಮಣ್ ಜಾನೇಕಲ್, ಕೆ ನಾಗಲಿಂಗ ಸ್ವಾಮಿ, ಶರಣಪ್ಪ ಬಲ್ಲಟಗಿ, ಅಯ್ಯಪ್ಪ ನಾಯಕ ನಲಗಮದಿನ್ನಿ, ಹನುಮೇಶ ನಾಯಕ ಮಲ್ಲಿನಮಡಗು, ಶಿವರಾಜ್ ಡೋಣಮರಡಿ, ನಾಗರಾಜ್ ಮಾನ್ವಿ, ಲಾಲಪ್ಪ ನಾಯಕ ಕುರುಡಿ, ವೆಂಕಟೇಶ್ ನಾಯಕ್ ಕುರುಡಿ, ಸುಧಾಕರ್, ಮರಿಸ್ವಾಮಿ ಅಮರಾವತಿ, ಗಣೇಶ ಕುರಡಿ, ಈರಣ್ಣ ಕುರಡಿ, ಕಾಮೇಶ ಮಾನ್ವಿ, ನರಸಿಂಹಲು ಇತರರು ಇದ್ದರು.