
ಸಂಜೆವಾಣಿ ವಾರ್ತೆ
ಪಿರಿಯಾಪಟ್ಟಣ: ಸೆ.06:- ಕಳೆದ ಒಂದು ವರ್ಷದಿಂದ ಸರಾಗವಾಗಿ ನಡೆಯುತ್ತಿದ್ದ ತಾಲೂಕಿನ ಪೆÇೀನಾಡಹಳ್ಳಿ ಹಾಲು ಸರಬರಾಜು ಕೇಂದ್ರವನ್ನು ಇಂದು ಬೆಳಗ್ಗೆ ಏಕಾಏಕಿ ಪೆÇಲೀಸರ ಮಧ್ಯ ಪ್ರವೇಶದಲ್ಲಿ ಒಕ್ಕೂಟದ ಅಧಿಕಾರಿಗಳು ತಡೆ ಮಾಡಿದ್ದಕ್ಕೆ ಆಕ್ರೋಶಗೊಂಡ ಗ್ರಾಮಸ್ಥರು ತಂದಿದ್ದ ಹಾಲನ್ನು ಗ್ರಾಮದ ಬಸವೇಶ್ವರ ಪ್ರತಿಮೆಗೆ ಸುರಿದು ಆಕ್ರೋಶ ವ್ಯಕ್ತಪಡಿಸಿದ ಘಟನೆ ತಾಲೂಕಿನ ಪೂನಾಡ ಹಳ್ಳಿ ಗ್ರಾಮದಲ್ಲಿ ಇಂದು ಬೆಳಗ್ಗೆ ನಡೆಯಿತು.
ಈ ಸಂದರ್ಭದಲ್ಲಿ ಜೆಡಿಎಸ್ ಮುಖಂಡ ಹಾಗೂ ಗ್ರಾಮದ ಹಾಲು ಉತ್ಪಾದಕ ಅಶೋಕ್ ಮಾತನಾಡಿ ಈ ಹಿಂದೆ ಗ್ರಾಮದಲ್ಲಿ ಹಲವಾರು ವರ್ಷಗಳಿಂದ ಮೂಲ ಹಾಲು ಉತ್ಪಾದಕ ಸಹಕಾರ ಸಂಘ ಕಾರ್ಯನಿರ್ವಹಿಸುತ್ತಿದ್ದು ಈ ಸಂಘದಲ್ಲಿ ಕಾರ್ಯದರ್ಶಿ ಹಾಗೂ ಹಾಲು ಪರೀಕ್ಷಕ ಇಬ್ಬರು ಸೇರಿಕೊಂಡು ಲಕ್ಷಾಂತರ ರೂಗಳ ಆ
ಆವ್ಯವಾರ ನಡೆಸಿದ್ದು ಇದರ ಬಗ್ಗೆ ನಾವು ಒಕ್ಕೂಟದ ಎಂ ಡಿ ಹಾಗೂ ಸೂಪರ್ವೈಸರ್ ಗಳಿಗೆ ದೂರು ದಾಖಲಿಸಿ ಅವರನ್ನು ವಜಾ ಗೊಳಿಸಲು ಮನವಿ ಮಾಡಿದ್ದೆವು. ಆದರೂ ಅಧಿಕಾರಿಗಳು ಹಾಗೂ ಒಕ್ಕೂಟ ಅವರ ಬಗ್ಗೆ ಯಾವುದೇ ಕ್ರಮ ಕೈಗೊಳ್ಳದ ಹಿನ್ನೆಲೆಯಲ್ಲಿ ನಾವುಗಳೇ ಈ ಡೈರಿಯಿಂದ ಹೊರ ಬಂದು ಪ್ರತ್ಯೇಕವಾದ ನೂತನ ಡೈರಿಯನ್ನು ಒಕ್ಕೂಟದ ನಿರ್ದೇಶನದಂತೆ ನೋಂದಾಯಿಸಿಕೊಂಡು ಒಂದು ವರ್ಷಗಳಿಂದ ನಡೆಸಿಕೊಂಡು ಬಂದಿದ್ದು ಸರಿ ಅಷ್ಟೇ ಆದರೆ ಇಂದು ಏಕಾಏಕಿ ಶಾಸಕ ಕೆ. ವೆಂಕಟೇಶ್ ರಾಜಕೀಯ ದ್ವೇಷದಿಂದ ಒಕ್ಕೂಟದ ಮೇಲೆ ಒತ್ತಡ ಏರಿ ಈ ನೂತನ ಹಾಲು ಸರಬರಾಜು ಕೇಂದ್ರವನ್ನು ಪೆÇಲೀಸರ ಸಮಕ್ಷಮದಲ್ಲಿ ತಡೆಹಿಡಿದಿದ್ದು ಶಾಸಕರ ರಾಜಕೀಯ ದುರಡಳಿತಕ್ಕೆ ಸಾಕ್ಷಿಯಾಗಿದೆ ಶಾಸಕರು ಇನ್ನು ಮುಂದೆ ರಾಜಕೀಯ ದ್ವೇಷ ಸಾಧಿಸದೆ ತಾಲೂಕಿನಲ್ಲಿ ಶಾಂತಿ ಸಾಮರಸ್ಯಕ್ಕೆ ಒತ್ತು ನೀಡಬೇಕು ಇಲ್ಲದಿದ್ದರೆ ಇವರ ವಿರುದ್ಧ ಪ್ರತಿಭಟನೆ ಅನಿವಾರ್ಯ ಎಂದು ಎಚ್ಚರಿಸಿದರು.
ಶಾಸಕ ಹಾಗೂ ಸಚಿವ ಕೆ ವೆಂಕಟೇಶ್. ಹಾಗೂ ಪುತ್ರ ನಿತಿನ್ ವಿರುದ್ಧ ಧಿಕ್ಕಾರ ಕೂಗಿದ ಗ್ರಾಮಸ್ಥರು ಒಂದು ವರ್ಷದಿಂದ ಸರಾಗವಾಗಿ ನಡೆಯುತ್ತಿದ್ದ ಹಾಲು ಸರಬರಾಜು ಕೇಂದ್ರಕ್ಕೆ ಏಕಾಏಕಿ ಒಂದು ಕಿಲೋಮೀಟರ್ ಅಂತರದ ನಿಯಮವನ್ನು ಕಾರಣ ಕೊಟ್ಟು ತಡೆ ಹಿಡಿದಿರುವುದು ಶಾಸಕರ ರಾಜಕೀಯ ದುರುದ್ದೇಶ ಎಂದು ಗ್ರಾಮದ ಮಹಿಳೆಯರು ಹಾಗೂ ಗ್ರಾಮಸ್ಥರು ಶಾಸಕರ ವಿರುದ್ಧ ಧಿಕ್ಕಾರವನ್ನು ಕೂಗಿ ಪ್ರತಿಭಟಿಸಿದರು.
ಗ್ರಾಮದಲ್ಲಿ ಬೆಳಗಿನಿಂದಲೂ ಪೆÇಲೀಸ್ ಬಿಗಿಬಂದೋಬಸ್ ಏರ್ಪಡಿಸಲಾಗಿತ್ತು ಈ ವೇಳೆಯಲ್ಲಿ ಹಾಲು ಸರಬರಾಜು ಕೇಂದ್ರದ ಅಧ್ಯಕ್ಷ ಕರಿಗೌಡ ಉಪಾಧ್ಯಕ್ಷ ನಾಗೇಶ್ ಕಾರ್ಯದರ್ಶಿ ಕುಮಾರ್ ಹಾಗೂ ಗ್ರಾಮದ ಮುಖಂಡರಾದ ಜಲೇಂದ್ರ ಅಶೋಕ್ . ಗೋವಿಂದರಾಜು. ಮಂಜಯ್ಯ. ರತ್ನಮ್ಮ. ವೆಂಕಟೇಶ್. ರೇವಣ್ಣ .ಮಣಿಯಮ್ಮ. ಮಂಜುಳಾ. ಸಾಕಮ್ಮ .ಸೇರಿದಂತೆ ನೂರಾರು ಗ್ರಾಮಸ್ಥರು ಹಾಜರಿದ್ದರು