ಪೂಜ್ಯ ಶ್ರೀ ಬಸವರಾಜಪ್ಪ ಅಪ್ಪಾಜಿ ದೈವಾಧೀನ

ಕಲಬುರಗಿ;ಎ.20: ಶ್ರೀ ಶರಣಬಸವೇಶ್ವರ ಸಂಸ್ಥಾನದ 7ನೇ ಪೀಠಾಧಿಪತಿ ಪರಮ ಪೂಜ್ಯ ಲಿಂಗೈಕ್ಯ ದೊಡ್ಡಪ್ಪ ಅಪ್ಪಾಜಿಯವರ ಎರಡನೆಯ ಪುತ್ರ ಪ್ರಸಿದ್ಧ ದಾನಿಗಳು ಮತ್ತು ಗೌರವಾನ್ವಿತರು, ಸಮಾಜ ಸೇವಕರು ಪರಮ ಪೂಜ್ಯ ಶ್ರೀ ಬಸವರಾಜಪ್ಪ ಅಪ್ಪಾಜಿಯವರು ದೀರ್ಘಕಾಲದ ಅನಾರೋಗ್ಯ ಮತ್ತು ವಯೋಸಹಜ ಸಮಸ್ಯೆಗಳಿಂದಾಗಿ ಮಂಗಳವಾರ ದೈವಾಧೀನರಾಗಿದ್ದಾರೆ.

ಶರಣಬಸವೇಶ್ವರ ಸಮಸ್ಥಾನದ 8ನೇ ಪೀಠಾಧಿಪತಿ ಮಹಾದಾಸೋಹಿ ಪರಮ ಪೂಜ್ಯ ಡಾ. ಶರಣಬಸವಪ್ಪ ಅಪ್ಪಾಜಿಯವರ ಕಿರಿಯ ಸಹೋದರಾದ ಪೂಜ್ಯ ಶ್ರೀ ಬಸವರಾಜಪ್ಪ ಅಪ್ಪಾಜಿಯವರು ಉತ್ಸಾಹಿ ಕೃಷಿಕರಾಗಿದ್ದರು ಹಾಗೂ ಅವರ ಕೊನೆಯ ಉಸಿರಿನವರೆಗೂ ಕೃಷಿ ಕಾರ್ಯದಲ್ಲಿ ಸಂತೋಷ ಕಂಡುಕೊಂಡಿದ್ದರು. ಕೇವಲ ಮೂರು ದಿನಗಳ ಹಿಂದೆ( ಏಪ್ರಿಲ್ 17) ಇವರ ಪ್ರೀತಿಯ ಪತ್ನಿ ಮಾತೋಶ್ರೀ ನಳಿನಿ ತಾಯಿಯವರು ದೈವಾಧೀನರಾಗಿದ್ದರು. ಅವರು ಮರಣ ಹೊಂದಿದ್ದ ತಮ್ಮ ಪೂರ್ವಜರ ಮನೆಯಲ್ಲಿಯೇ ಇವರೂ ಕೊನೆಯುಸಿರೆಳೆದಿದ್ದಾರೆ.

ಪೂಜ್ಯ ಅಪ್ಪಾಜಿ ಎಲ್ಲಾ ಸಾಮಾಜಿಕ ಚಟುವಟಿಕೆಗಳಲ್ಲಿ ಸಕ್ರಿಯವಾಗಿ ಪಾಲ್ಗೊಂಡಿದ್ದರು. ಕೆಲವು ವರ್ಷಗಳ ಕಾಲ ವಿಶ್ವ ಹಿಂದೂ ಪರಿಷತ್‍ನ ಕಲಬುರಗಿ ಘಟಕದ ಜಿಲ್ಲಾಧ್ಯಕ್ಷರಾಗಿದ್ದರು. ಅವರ ಆರೋಗ್ಯ ವಿಫಲತೆಯಿಂದಾಗಿ ಅದನ್ನು ಕೈ ಬಿಟ್ಟಿದರು. ಇವರು ಇಬ್ಬರು ಪುತ್ರರು ಮತ್ತು ಐದು ಹೆಣ್ಣುಮಕ್ಕಳನ್ನು ಹಾಗೂ ಶರಣಬಸವೇಶ್ವರ ಸಂಸ್ಥಾನದ ಅಪಾರ ಭಕ್ತರನ್ನು ಅಗಲಿದ್ದಾರೆ.

ಪೂಜ್ಯ ಡಾ. ಶರಣಬಸವಪ್ಪ ಅಪ್ಪಾಜಿ ತಮ್ಮ ಕಿರಿಯ ಸಹೋದರರÀ ಸಾವಿನ ಬಗ್ಗೆ ಆಘಾತ ವ್ಯಕ್ತಪಡಿಸಿದರು. ಮಾತೋಶ್ರಿ ನಳಿನಿ ತಾಯಿಯರ ಸಾವಿನ ಆಘಾತದಿಂದ ಎಲ್ಲರೂ ಹೊರಬರುವ ಮೊದಲೇ, ಅವರ ಧರ್ಮಪತಿ ಶ್ರೀ ಬಸವರಾಜಪ್ಪ ಅಪ್ಪಾಜಿ ಅವರು ಕೊನೆಯುಸಿರೆಳೆದಿರುವುದು ತುಂಬಾ ನೋವಿನ ಸಂಗತಿ. ತಮ್ಮ ಸಹೋದರನ್ನು ಕಳೆದುಕೊಂಡ ಶರಣಬಸವೇಶ್ವರ ಸಂಸ್ಥಾನದ ಲಕ್ಷಾಂತರ ಭಕ್ತರಿಗೆ ದೊಡ್ಡ ನಷ್ಟವಾಗಿದೆ ಎಂದು ಸಂತಾಪ ಸೂಚಿಸಿದರು. ಏಪ್ರಿಲ್ 02 ರಂದು ಜರುಗಿದ್ದ ಶ್ರೀ ಶರಣಬಸವೇಶ್ವರ ರಥೋತ್ಸವದ ಸಂದರ್ಭದಲ್ಲಿ ತಮ್ಮ ಸಹೋದರನ್ನು ಭೇಟಿಯಾದ ಕ್ಷಣವನ್ನು ನೆನಪಿಸಿಕೊಂಡರು.

ಪೂಜ್ಯ ಬಸವರಾಜಪ್ಪ ಅಪ್ಪಾಜಿ ಅವರ ನಿಧನಕ್ಕೆ ಸಂತಾಪಿಸಿದ್ದ ಮಾತೋಶ್ರೀ ಡಾ.ದಾಕ್ಷಾಯಿಣಿ ಅವ್ವಾಜಿ, ಅಗತ್ಯವಿರುವರಿಗೆ ಸದಾ ಅವರ ಕೈ ಸಹಾಯಕ್ಕಾಗಿ ಸಿದ್ಧವಿರುತ್ತಿತ್ತು. ದೊಡ್ಡ ದಾನಿಯನ್ನು ಕಳೆದುಕೊಂಡಿದ್ದರಿಂದ ಸಮಾಜಕ್ಕೆ ನಷ್ಟ ಉಂಟಾಗಿದೆ ಎಂದರು. ಶ್ರೀ ಶರಣಬಸವೇಶ್ವರ ವಿದ್ಯಾವರ್ಧಕ ಸಂಘದ ಕಾರ್ಯದರ್ಶಿ ಶ್ರೀ ಬಸವರಾಜ್ ದೇಶಮುಖ, ಶರಣಬಸವ ವಿಶ್ವವಿದ್ಯಾಲಯದ ಉಪಕುಲಪತಿ ಡಾ.ನಿರಂಜನ್ ವಿ ನಿಷ್ಠಿ, ವಿಶ್ವವಿದ್ಯಾಲಯದ ಸಮ ಕುಲಪತಿ ಪೆÇ್ರ.ವಿ.ಡಿ. ಮೈತ್ರಿ ಮತ್ತು ಎನ್.ಎಸ್. ದೇವರಕಲ್, ವಿವಿ ಕುಲಸಚಿವ ಡಾ. ಅನಿಲಕುಮಾರ ಜಿ. ಬಿಡವೆ, ಮೌಲ್ಯಮಾಪನ ಕುಲಸಚಿವ ಡಾ.ಲಿಂಗರಾಜ ಶಾಸ್ತ್ರಿ, ಡೀನ್ ಡಾ.ಲಕ್ಷ್ಮಿ ಪಾಟೀಲ ಮಾಕಾ ಮತ್ತು ಡಾ. ಬಸವರಾಜ ಮಠಪತಿ ಪೂಜ್ಯ ಬಸವರಾಜಪ್ಪ ಅಪ್ಪಾಜಿಯವರ ನಿಧನಕ್ಕೆ ಸಂತಾಪ ಸೂಚಿಸಿದ್ದಾರೆ.

ಶ್ರೀ ಬಸವರಾಜಪ್ಪ ಅಪ್ಪಾಜಿ ಅವರ ನಿಧನಕ್ಕೆ ಶರಣಬಸವ ವಿಶ್ವವಿದ್ಯಾಲಯ ಸಂತಾಪ ಸೂಚಿಸಿ ಮಂಗಳವಾರ ರಜೆ ಘೋಷಿಸಿ ಎಲ್ಲಾ ತರಗತಿಗಳನ್ನು ಅಮಾನತುಗೊಳಿಸಿದೆ.