ಪೂಜ್ಯ ಡಾ ಬಸವಲಿಂಗ ಅವಧೂತರ ಹುಟ್ಟು ಹಬ್ಬ: 44 ಜನರಿಂದ ರಕ್ತದಾನ

ಚಿಂಚೋಳಿ,ಜು.29- ತಾಲೂಕಿನ ದೇಗಲಮಡಿ ಗ್ರಾಮದ ನಡೆದಾಡುವ ದೇವರೆಂದು ಪ್ರಸಿದ್ಧರಾದ ಪೂಜ್ಯ ಶ್ರೀ ಡಾ.ಬಸವಲಿಂಗ ಅವಧೂತರ, ಅವರ 44ನೇ ಜನ್ಮದಿನಾಚರಣೆ ನಿಮಿತ್ಯ ರಕ್ತದಾನ ಶಿಬಿರ ಹಮ್ಮಿಕೊಳ್ಳಲಾಗಿತ್ತು ರಕ್ತದಾನ ಶಿಬಿರದಲ್ಲಿ ಭಕ್ತಾದಿಗಳು ಯುವಕರು ಸೇರಿದಂದಂತೆ ಸಮಾರು 44 ಜನ ರಕ್ತದಾನ ಮಾಡಿದರು.
ಸದರಿ ರಕ್ತದಾನ ಶಿಬಿರವನ್ನು ಪೂಜ್ಯರಾದ ಡಾ ಬಸವಲಿಂಗ ಅವಧೂತರು ರಕ್ತದಾನ ಶಿಬಿರಾರ್ಥಿಗಳಿಗೆ ಹಣ್ಣು ಬಿಸ್ಕಟ್ ಜೂಸ್ ಕೂಡುವದರ ಮೂಲಕ ಚಾಲನೆನಿಡಿ ಆಶಿರ್ವದಿಸಿದರು.
ರಕ್ತದಾನ ಮಾಹಾದಾನ ಇದು ಅತ್ಯಂತ ಶ್ರೇಷ್ಠ ವಾದ ಮಾಹಾದನವಾಗಿದ್ದು ತಾವು ದಾನ ಮಾಡಿದ ರಕ್ತದಿಂದ ರಕ್ತದ ಕೊರತೆಯಿಂದ ಬಳಲುತ್ತಿರುವ ರೋಗಿಗಳಿಗೆ ಪರೋಪಕಾರಿ ಯಾಗುವದಲ್ಲದೆ ಎಷ್ಟೋ ಜನರ ಪ್ರಾಣ ಕಾಪಾಡುತ್ತದೆ ಪ್ರತಿಯೋಬ್ಬರು ಆರೊಗ್ಯವಂತರಾಗಿರಲು ಉತ್ತಮ ಆಹಾರ ಸೇವನೆ ದ್ಯಾನ ಯೋಗ ಆಯಾಮಗಳು ಅತಿ ಮುಖ್ಯವಾಗಿರುವದರಿಂದ ಎಲ್ಲರು ಚಾಚು ತಪ್ಪದೆ ಪಾಲಿಸಲು ಕರೆ ನೀಡಿದರು ಹುಟ್ಟು ಹಬ್ಬ ಯಾವದೆ ರಿತಿಯ ಕೆಕ್ ಕತ್ತಿರಿಸಿ ಸಿಹಿ ಹಂಚಿ ಅದ್ದುರಿಯಾಗಿ ಆಚರಣೆ ಮಾಡದೆ ಸಮಾಜಕ್ಕೆ ಸಾರ್ವ ಜನಿಕರಿಗೆ ಅನೂಕುಲವಾಗುವಂತ ಒಳ್ಳೆಯ ಕಾರ್ಯಕ್ರಮ ಆಯೋಜಿಸುವದು ಸೂಕ್ತ ವೆಂದು ಭಕ್ತ ಸಮೂಹಕ್ಕೆ ಕರೆ ನೀಡಿದರು.
ಉಚಿತ ರಕ್ತದಾನ ಶಿಬಿರ ಕಾರ್ಯಕ್ರಮದಲ್ಲಿ ಶ್ರೀ ಮಠದ ಕಿರಿಯ ಸ್ವಾಮಿಗಳಾದ ಶಿವು ಸ್ವಾಮಿ ಭಕ್ತರು ಭಾರತ ಸೇವಾದಳ ರಾಷ್ಟ್ರೀಯ ಸಂಚಾಲಕರಾದ ಲಕ್ಷ್ಮಣ ಆವುಂಟಿ, ವೈದ್ಯಾದಿಕಾರಿಗಳಾದ ಡಾ ಸಂತೋಷ್ ಪಾಟೋಲ್, ಡಾ, ನೀಲಕುಮಾರ್, ಶ್ರೀಮಂತ ಕಟ್ಟಿಮನಿ, ಗುಲಬರ್ಗಾ ಜೆಮ್ಸ ರಕ್ತನಿದಿ ಕೇಂದ್ರದ ಡಾ ಮತಿನ್ ಆಪ್ತ ಸಮಾಲೋಚಕರಾದ ಮಲ್ಲಿಕಾರ್ಜುನ ಎ ಪರಿಟ, ಪ್ರಮುಖರಾದ ರಾಖೇಶ್ ಗೋಸುಲ್,ಸಂಗಪ್ಪ ಭೈರ್, ಉದಯ ಗುತ್ತೆದಾರ್,ಉಮೇಶ್ ದಂಡಿನ್ ಜಗನ್ನಾಥ ಇಟಗಿ, ನಾಗರಾಜ ಮಲ್ಕೂಡ್ ಅರವಿಂದ ಚಂದಿಮನಿ, ಶ್ರೀ ಕಾಂತ ತಳವಾರ್, ವಾಜಿದ ಪಟೇಲ್, ಖಾಜಾಪಟೇಲ್, ಸೇರಿದಂತೆ ಅಪಾರ ಭಕ್ತರು ಪÁಲ್ಗೊಂಡಿದರು