ಪೂಜ್ಯ ಡಾ. ಚೆನ್ನವೀರ ಶಿವಾಚಾರ್ಯರ ಜನ್ಮದಿನ: ಹಣ್ಣುಹಂಪಲ ವಿತರಣೆ

ಚಿಂಚೋಳಿ,ನ.6- ಪಟ್ಟಣದ ಚಂದಾಪುರದ ಸರ್ಕಾರಿ ಸಾರ್ವಜನಿಕ ಆಸ್ಪತ್ರೆಯಲ್ಲಿ ಚಿಂಚೋಳಿ ತಾಲೂಕ ವೀರಶೈವ ಲಿಂಗಾಯತ್ ಸಮಾಜದ ವತಿಯಿಂದ ಆಸ್ಪತ್ರೆಯ ರೋಗಿಗಳಿಗೆ ಹಣ್ಣು ಹಂಪಲ ವಿತರಿಸುವ ಮೂಲಕ ಕಲ್ಯಾಣ ಕರ್ನಾಟಕ ನಡೆದಾಡುವ ದೇವರು, ಶಿವಾಚಾರ್ಯ ರತ್ನ, ಡಾ. ಚೆನ್ನವೀರ ಶಿವಾಚಾರ್ಯರು ಸಂಸ್ಥಾನ ಮಠ ಹಾರಕೂಡ -ಚಿಂಚೋಳಿ ಪೂಜ್ಯರÀ 60ನೇ ಜನ್ಮದಿನೋತ್ಸವ ಆಚರಿಸಲಾಯಿತು.
ಈ ಕಾರ್ಯಕ್ರಮದಲ್ಲಿ ಶಾಸಕರಾದ ಡಾ. ಅವಿನಾಶ್ ಜಾಧವ, ಅವರು ಆಸ್ಪತ್ರೆಯ ರೋಗಿಗಳಿಗೆ ಹಣ್ಣು ಹಂಪಲ ವಿತರಣೆ ಮಾಡಿದರು.
ಈ ಸಂದರ್ಭದಲ್ಲಿ ಚಂದಾಪುರ ಆಸ್ಪತ್ರೆಯ ಆಡಳಿತ ಅಧಿಕಾರಿಗಳಾದ ಡಾ. ಸಂತೋಷ್ ಪಾಟೀಲ್, ಪಿ ಎಲ್ ಡಿ ಬ್ಯಾಂಕ್ ಅಧ್ಯಕ್ಷರಾದ ಜಗದೀಶ್ ಸಿಂಗ್ ಠಾಕೂರ್, ಬಸವ ಸೇವಾ ಸಮಿತಿಯ ಅಧ್ಯಕ್ಷರಾದ ನೀಲಕಂಠ ಸೀಳಿನ್, ಕಾಂಗ್ರೆಸ್ ಪಕ್ಷದ ಮುಖಂಡರಾದ ಜಗನ್ನಾಥ್ ಕಟ್ಟಿ, ಬಿಜೆಪಿ ಮುಖಂಡರಾದ ಭೀಮಶೆಟ್ಟಿ ಮುರುಡ, ಕೆ ಎಂ ಬಾರಿ, ರಾಜು ಪವಾರ್, ಪ್ರೇಮಸಿಂಗ ಜಾಧವ್, ಅಮರ ಲೋಡ್ದನೊರ್, ಗಿರಿರಾಜ್ ನಾಟೀಕರ್, ಎಸ್ ಆರ್ ಪಾಟೀಲ್, ಜೆಡಿಎಸ್ ಪಕ್ಷದ ತಾಲೂಕ ವಿದ್ಯಾರ್ಥಿ ಘಟಕದ ಅಧ್ಯಕ್ಷರಾದ ರಾಹುಲ ಸಂಜೀವನ್ ಯಾಕಾಪೂರ, ಜೆಡಿಎಸ್ ಪಕ್ಷದ ಮುಖಂಡರಾದ ನೀಲಕಂಠ ಕೆ ಕೆ, ಸನ್ನಿ ಜಾಬಶೆಟ್ಟಿ, ಮಹೇಶ್ ಕೆ ಕೆ ಗರಗಪಳ್ಳಿ, ಆಸ್ಪತ್ರೆಯ ಎ.ಆರ.ಎಸ ಸದಸ್ಯರುಗಳಾದ ಉಮೇಶ್ ಬೆಳಕೇರಿ, ಸತೀಶ್ ರೆಡ್ಡಿ, ಪವನ ಕುಮಾರ ಗೋಪನಪಳ್ಳಿ, ಅಭೀಷೇಕ ಮಲಕನೂರ, ಹಣಮಂತ ಭೋವಿ, ವೀರಶೈವ ಲಿಂಗಾಯತ ಸಮಾಜದ ತಾಲೂಕ ಯುವ ಅಧ್ಯಕ್ಷರಾದ ಸಂಜೀವಕುಮಾರ ಪಾಟೀಲ್, ವೀರಶೈವ ಸಮಾಜದ ಮುಖಂಡರಾದ ಬಸವರಾಜ್ ಗಡಂತಿ, ಶಿವು ಸ್ವಾಮಿ ಮಠ, ಮಲ್ಲಿನಾಥ್ ಮೇಲಗಿರಿ, ಆನಂದ ಹಿತ್ತಲ, ಜಗನ್ನಾಥ ಜಾಬಶೆಟ್ಟಿ, ಪ್ರಶಾಂತ್ ತೋಟದ, ಸಂತೋಷ್ ಕೊಂಡಾ, ಮಲ್ಲಿಕಾರ್ಜುನ್ ಸ್ವಾಮಿ, ಮತ್ತು ಅನೇಕ ವೀರಶೈವ ಸಮಾಜದ ಮುಖಂಡರು ಇದ್ದರು.