ಪೂಜ್ಯ ಡಾ. ಅಪ್ಪ ಅವರ ಜನ್ಮದಿನಾಚರಣೆಗೆ ಚಾಲನೆಆಹಾರ, ಸೀರೆ ಮತ್ತು ಬ್ಲಾಂಕೆಟ್ಸ್ ವಿತರಣೆ

ಕಲಬುರಗಿ :ನ.10: ಶರಣಬಸವೇಶ್ವರ ಸಂಸ್ಥಾನದ ಮಹಾದಾಸೋಹ ಪೀಠಾಧಿಪತಿಗಳಾದ ಪೂಜ್ಯ ಡಾ.ಶರಣಬಸವಪ್ಪ ಅಪ್ಪ ಅವರ 88ನೇ ಜನ್ಮ ದಿನದ ಪ್ರಯುಕ್ತ ನಗರದ ಕುಷ್ಠರೋಗ ಕಾಲೋನಿ, ಕೊಳಚೆ ಪ್ರದೇಶ, ವೃದ್ಧಾಶ್ರಮಗಳಲ್ಲಿ ವಾಸಿಸುವ ಜನರಿಗೆ ಗೋದುತಾಯಿ ದೊಡ್ಡಪ್ಪ ಅಪ್ಪ ಕಲಾ ಮತ್ತು ವಾಣಿಜ್ಯ ಮಹಿಳಾ ಮಹಾವಿದ್ಯಾಲಯದ ವತಿಯಿಂದ ಗುರುವಾರ ಆಹಾರ, ಸೀರೆ ಮತ್ತು ಬ್ಲಾಂಕೆಟ್ಸ್ ವಿತರಣೆ ಮಾಡಲಾಯಿತು.

ನ.14 ರಂದು ನಡೆಯುವ ಪೂಜ್ಯರ ಜನ್ಮದಿನದ ಪ್ರಯುಕ್ತ ಪ್ರತಿ ವರ್ಷದಂತೆ ಈ ವರ್ಷವೂ ವಿನೂತನವಾಗಿ ಕಾರ್ಯಕ್ರಮಗಳು ಮಹಾವಿದ್ಯಾಲಯದಿಂದ ಹಮ್ಮಿಕೊಳ್ಳಲಾಗಿದ್ದು, ಶರಣಬಸವೇಶ್ವರ ಸಂಸ್ಥಾನ ದಾಸೋಹಕ್ಕೆ ಹೆಸರಾಗಿದ್ದು ಬಡವರಿಗೆ, ನಿರ್ಗತಿಕರಿಗೆ ಆಹಾರ, ಸೀರೆ ಮತ್ತು ಬ್ಲಾಂಕೆಟ್ಸ್ ಕೊಡುವುದರ ಮೂಲಕ ಪೂಜ್ಯರ ಜನ್ಮದಿನಾಚರಣೆ ಅರ್ಥಪೂರ್ಣವಾಗಿ ಆಚರಿಸಲು ಸಾಧ್ಯವಿದೆ ಎಂದು ಮಹಾವಿದ್ಯಾಲಯದ ಪ್ರಾಚಾರ್ಯೆ ಡಾ.ನೀಲಾಂಬಿಕಾ ಶೇರಿಕಾರ ತಿಳಿಸಿದರು.

ಈ ಸಂದರ್ಭದಲ್ಲಿ ಮಹಾವಿದ್ಯಾಲಯದ ಪ್ರಾಧ್ಯಾಪಕರಾದ ಡಾ.ಸೀಮಾ ಪಾಟೀಲ, ಡಾ.ಪುಟ್ಟಮಣಿ ದೇವಿದಾಸ, ಶ್ರೀಮತಿ ಜಾನಕಿ ಹೊಸುರ, ಡಾ.ಕಲ್ಪನಾ ಭೀಮಳ್ಳಿ. ಶ್ರೀಮತಿ ಸುಪ್ರಿಯಾ, ಶ್ರೀಮತಿ ದಿಶಾ ಮೆಹತಾ, ಶ್ರೀಮತಿ ಪ್ರಭಾವತಿ ಹೆಚ್, ಡಾ.ಶಾಂತಲಿಂಗ ಘಂಟೆ, ಅಶೋಕ ಮೂಲಗೆ, ಅಪ್ಪಾಸಾಬ ಬಿರಾದಾರ, ಮಹಾವಿದ್ಯಾಲಯದ ಕಲಾವಾಣಿ ಸದಸ್ಯರು ಮತ್ತು ವಿದ್ಯಾರ್ಥಿನಿಯರು ಅಲ್ಲದೆ ನಾಲ್ಕು ಚಕ್ರದ ಮಾಲಾ ಕಣ್ಣಿ ಮತ್ತು ಮಾಲಾ ಧನ್ನೂರ ಮತ್ತಿತರರು ಇದ್ದರು.