ಪೂಜ್ಯ ಚಿ.ದೊಡ್ಡಪ್ಪ ಅಪ್ಪನವರಿಗೆ ಸನ್ಮಾನ

ಕಲಬುರಗಿ:ಫೆ.23: ನಗರದ ಮಕ್ತಂಪುರ ಗದ್ದುಗೆಮಠದ ರೇವಣಸಿದ್ದೇಶ್ವರ ಜಾತ್ರಾ ಮಹೋತ್ಸವದ ನಿಮಿತ್ತ ಹಮ್ಮಿಕೊಂಡಿರುವ ಗುಡ್ಡಾಪೂರದ ದಾನಮ್ಮ ದೇವಿಯ ಜೀವನ ದರ್ಶನ ಪ್ರವಚನದಲ್ಲಿ 1008 ಮುತ್ತೈದೆಯರಿಗೆ ಉಡಿ ತುಂಬುವ ಕಾರ್ಯಕ್ರಮದಲ್ಲಿ 9ನೇ ಪೀಠಾಧಿಪತಿಗಳಾದ ಚಿ. ಪೂಜ್ಯ ದೊಡ್ಡಪ್ಪ ಅಪ್ಪ ಅವರನ್ನು ಶ್ರೀ.ಮ.ನಿ.ಪ್ರ ಚರಲಿಂಗ ಮಹಾಸ್ವಾಮೀಜಿ ನೇತೃತ್ವದಲ್ಲಿ ಸನ್ಮಾನಿಸಿದರು.
ಸುಲಫಲ ಮಠದ ಪೂಜ್ಯ ಶ್ರೀ ಡಾ. ಸಾರಂಗದರ ದೇಶಿಕೇಂದ್ರ ಸ್ವಾಮೀಜಿ, ಗುರುಬಸವಾ ಮಠದ ಶಿವಾನಂದ ಮಹಾಸ್ವಾಮೀಜಿ, ಪೂಜ್ಯ ಸದಾನಂದ ಶಾಸ್ತ್ರಿಗಳು, ಮೃತುಂಜಯ ದೇವರು ಕೊಳ್ಳುರು, ಸರ್ಪಭೂಷಣ ದೇವರು, ಗುರುದೇವ ದೇವರು, ಮಾತೋಶ್ರೀ ಶಿವಲೀಲಾ ತಾಯಿ ಭಾಗ್ಯವಂತೀ, ಶಾಸಕ ಅಲ್ಲಮಪ್ರಭು ಪಾಟೀಲ್, ಬಸವರಾಜ ದೇಶಮುಖ, ಡಾ.ಅಲ್ಲಂಪ್ರಭು ದೇಶಮುಖ, ಛತ್ರಪತಿ ಶಿವಾಜಿ ಬ್ಯಾಂಕನ ಅಧ್ಯಕ್ಷ ರಾಮ ಪವರ್ ಸೇರಿದಂತೆ ಅಕ್ಕನಬಳಗದ ತಾಯಂದಿರು, ಹಿರಿಯರು, ಮಹಿಳೆಯರು, ಯುವಕರು ಹಾಗೂ ಭಕ್ತಾಧಿಗಳು ಇದ್ದರು.