ಪೂಜ್ಯ ಅವ್ವಾಜಿಯವರು ಶತಾಯುಷಿಗಳಾಗಲಿ

ಕಲಬುರಗಿ :ನ.22: ಪೂಜ್ಯ ಡಾ.ದಾಕ್ಷಾಯಣಿ ಅವ್ವಾ ಅವರು ಶತುಯುಷಿಗಳಾಗಲಿ ಎಂದು ಶರಣಬಸವೇಶ್ವರ ವಿದ್ಯಾವರ್ಧಕ ಸಂಘದ ಕಾರ್ಯದರ್ಶಿಗಳಾದ ಬಸವರಾಜ ದೇಶಮುಖ ತಿಳಿಸಿದರು.

ನಗರದ ಗೋದುತಾಯಿ ದೊಡ್ಡಪ್ಪ ಅಪ್ಪ ಕಲಾ ಮತ್ತು ವಾಣಿಜ್ಯ ಮಹಿಳಾ ಮಹಾವಿದ್ಯಾಲಯದಲ್ಲಿ ಮಹಾವಿದ್ಯಾಲಯ ಮತ್ತು ನಾಲ್ಕು ಚಕ್ರ ತಂಡದ ಸಂಯುಕ್ತಾಶ್ರಯದಲ್ಲಿ ಪೂಜ್ಯ ಡಾ.ದಾಕ್ಷಾಯಣಿ ಅವ್ವಾಜಿಯವರ 51ನೇ ಹುಟ್ಟು ಹಬ್ಬದ ನಿಮಿತ್ಯ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದರು. ಪೂಜ್ಯ ಅವ್ವಾಜೀಯವರು ದಾಸೋಹ ಪರಂಪರೆಯನ್ನು ಮುಂದುವರೆಸಿಕೊಂಡು ಬರುತ್ತಿದ್ದು, ಸಾವಿರಾರು ಜನರಿಗೆ ಪ್ರತಿದಿನವು ದಾಸೋಹ ಮಾಡುತ್ತಿದ್ದಾರೆ. ಪೂಜ್ಯ ಡಾ.ಅಪ್ಪಾಜಿಯವರ ಮಾರ್ಗದರ್ಶನದಲ್ಲಿ ದಾಸೋಹ ಕೆಲಸ ಮತ್ತು ಸಂಸ್ಥೆಯ ಎಲ್ಲಾ ಕೆಲಸಗಳನ್ನು ಅಚ್ಚುಕಟ್ಟಾಗಿ ನಡೆಸಿಕೊಂಡು ಹೋಗುತ್ತಿದ್ದಾರೆ. ಅವರ ಸಾಮಾಜಿಕ, ಶೈಕ್ಷಣಿಕ, ಧಾರ್ಮಿಕ ಕಾರ್ಯಗಳು ಮೆಚ್ಚುವಂತಹದಾಗಿವೆ ಎಂದರು.

ಮಹಾವಿದ್ಯಾಲಯ ಪ್ರಾಂಶುಪಾಲರಾದ ಡಾ.ನೀಲಾಂಬಿಕಾ ಶೇರಿಕಾರ ಮಾತನಾಡಿ, ದಾಸೋಹದ ಇನ್ನೊಂದು ಹೆಸರು ಪೂಜ್ಯ ಅವ್ವಾಜೀಯವರು. ಕೋವಿಡ್ ಸಂದರ್ಭದಲ್ಲಿ ತಮ್ಮ ಮಕ್ಕಳೊಂದಿಗೆ ಜೊತೆಗೂಡಿ ಸಾವಿರಾರು ಜನರಿಗೆ ಪ್ರತಿದಿನವೂ ದಾಸೋಹದ ವ್ಯವಸ್ಥೆ ಮಾಡಿರುವುದು ಎಲ್ಲರಿಗೂ ಗೊತ್ತಿರುವ ವಿಷಯ. ಈಗಲೂ ಸಹ ಪ್ರತಿದಿನ ದಾಸೋಹ ಕಾರ್ಯದಲ್ಲಿ ತಮ್ಮನ್ನು ತೊಡಗಿಸಿಕೊಂಡು ಶರಣಸಂಸ್ಥಾನ ದಾಸೋಹ ಪರಂಪರೆಯನ್ನು ಮುನ್ನಡೆಸಿಕೊಂಡು ಹೋಗುತ್ತಿದ್ದಾರೆ. ಅವರ ಜನ್ಮದಿನದ ಅಂಗವಾಗಿ ಎರಡು ನೂರು ಜನ ನಿರ್ಗತಿಕ, ಸಂತ್ರಸ್ತೆ, ಕಾರ್ಮಿಕ ಮಹಿಳೆಯರಿಗೆ ಸೀರೆ, ಸಿಹಿ ತಿಂಡಿಗಳು, ದಿನನಿತ್ಯ ವಸ್ತುಗಳನ್ನು ವಿತರಣೆ ಮಾಡಲಾಯಿತು.

ಈ ಸಂದರ್ಭದಲ್ಲಿ ಪ್ರಾಚಾರ್ಯರಾದ ಡಾ.ಎಮ್.ಆರ್.ಹುಗ್ಗಿ, ಡಾ.ಬಸವರಾಜೇಶ್ವರಿ, ಶ್ರೀಮತಿ ಅನ್ನಪೂರ್ಣ ರೆಡ್ಡಿ, ಶ್ರೀಮತಿ ಅನಿತಾ, ಮಹಾವಿದ್ಯಾಲಯ ಡಾ.ಇಂದಿರಾ ಶೆಟಕಾರ, ಡಾ.ಸಿದ್ದಮ್ಮ ಗುಡೇದ್, ಡಾ.ಸೀಮಾ ಪಾಟೀಲ, ಡಾ.ಪುಟ್ಟಮಣಿ ದೇವಿದಾಸ, ಶ್ರೀಮತಿ ಜಾನಕಿ ಹೊಸುರ, ಕೃಪಾಸಾಗರ ಗೊಬ್ಬುರ ಮತ್ತು ಎಲ್ಲಾ ಸಿಬ್ಬಂದಿವರ್ಗದವರು ಮತ್ತು ನಾಲ್ಕು ಚಕ್ರದ ಕು.ಮಾಲಾ ಕಣ್ಣಿ, ಕು. ಮಾಲಾ ಧನ್ನೂರ ಮತ್ತು ಅವರ ತಂಡದವರು ಉಪಸ್ಥಿತರಿದ್ದರು.