ಪೂಜ್ಯ ಅಪ್ಪಾ ಅನಾರೋಗ್ಯದ ವದಂತಿ ನಂಬಬೇಡಿ

ಕಲಬುರಗಿ,ಮಾ.17: ಮಹಾದಾಸೋಹಿ ಶ್ರೀ ಶರಣಬಸವೇಶ್ವರ ಸಂಸ್ಥಾನದ ಪೀಠಾಧಿಪತಿ ಪೂಜ್ಯ ಡಾ.ಶರಣಬಸವಪ್ಪ ಅಪ್ಪಾ ಅವರ ಆರೋಗ್ಯ ಕುರಿತಂತೆ ಸುಳ್ಳುಸುದ್ದಿಗಳು ಫೇಸ್‍ಬುಕ್, ವಾಟ್ಸ್‍ಪ್ ಮೊದಲಾದ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದ್ದು ಇಂತಹ ಸುಳ್ಳು ವದಂತಿಗಳನ್ನು ನಂಬಬಾರದು ಎಂದು ಶರಣಬಸವೇಶ್ವರ ವಿದ್ಯಾವರ್ಧಕ ಸಂಘದ ಕಾರ್ಯದರ್ಶಿ ಬಸವರಾಜ ದೇಶಮುಖ ಅವರು ಸ್ಪಷ್ಟಪಡಿಸಿದ್ದಾರೆ.
ಪೂಜ್ಯ ಡಾ.ಶರಣಬಸವಪ್ಪ ಅಪ್ಪಾ ಅವರು ಆರೋಗ್ಯದಿಂದ ಇದ್ದಾರೆ. ಅವರು ಶರಣಬಸವೇಶ್ವರ ದೇವಸ್ಥಾನಕ್ಕೆ ಭೇಟಿ ಕೊಟ್ಟು ದರ್ಶನ ಪಡೆದಿದ್ದಾರೆ. ಭಕ್ತರು ಯಾವುದೇ ಆತಂಕ ಪಡಬಾರದು ಎಂದು ಬಸವರಾಜ ದೇಶಮುಖ ಅವರು ತಿಳಿಸಿದ್ದಾರೆ.