ಪೂಜೆ, ಸತ್ಕಾರ

(ಸಂಜೆವಾಣಿ ನ್ಯೂಸ್)
ಹುಬ್ಬಳ್ಳಿ, ಜ25: ಎಸ್. ಎಸ್. ಕೆ. ಪಂಚ ಟ್ರಸ್ಟ್, ಶ್ರೀ ದುರ್ಗಾದೇವಿ ದೇವಸ್ಥಾನ, ದಾಜಿಬಾನ ಪೇಟ, ಹುಬ್ಬಳ್ಳಿ ಈ ಸಂಸ್ಥೆಯ ಶ್ರೀ ದುರ್ಗಾದೇವಿ ದೇವಸ್ಥಾನದಲ್ಲಿ, ಅಯೋಧ್ಯೆಯಲ್ಲಿ ಶ್ರೀರಾಮ ಲಲ್ಲಾನ ಮೂರ್ತಿಯ ಪ್ರತಿಷ್ಠಾಪನೆ ಹಾಗೂ ಭವ್ಯ ಮಂದಿರ ಸ್ಥಾಪನೆ ಉದ್ಘಾಟನೆ ನಿಮಿತ್ಯ ಶ್ರೀ ರಾಮನ ಭಾವಚಿತ್ರಕ್ಕೆ ಪೂಜೆ ಸಲ್ಲಿಸಲಾಯಿತು.
ಸಾಯಂಕಾಲ ಶ್ರೀ ದುರ್ಗಾದೇವಿ ಮಾತೆ ಶ್ರೀ ದ್ಯಾಮವ್ವ ದೇವಿ ಮಾತೆಯರ ದರ್ಶನ ಆಶೀರ್ವಾದ ಪಡೆದು ದೀಪೆÇೀತ್ಸವ ಉದ್ಘಾಟಿಸಿದ, ಕೇಂದ್ರ ಸಚಿವ ಪ್ರಹ್ಲಾದ ಜೋಶಿ ಅವರನ್ನು ಸತ್ಕರಿಸಲಾಯಿತು.
ಸಂಸ್ಥೆಯ ಚೀಫ್ ಟ್ರಸ್ಟಿ ತಾರಾಸಾ ಎನ್. ದೊಂಗಡಿ, ಜಾಯಿಂಟ್ ಚೀಫ್ ಟ್ರಸ್ಟಿ ನೀಲಕಂಠ ಪಿ.ಜಡಿ , ಗೌರವ ಕಾರ್ಯದರ್ಶಿ ಭಾಸ್ಕರ ಎನ್. ಜಿತೂರಿ, ಕೋಶಾಧಿಕಾರಿ ಅಶೋಕ ಕೆ. ಕಲಬುರ್ಗಿ, ಟ್ರಸ್ಟಿ, ಅಶೋಕ ಪಿ. ಪವಾರ, ಟ್ರಸ್ಟಿ ಎನ್ ಆರ್ ಹಬೀಬ, ಮಾಜಿ ಶಾಸಕ ಅಶೋಕ ಕಾಟವೆ, ಪಾಲಿಕೆ ಸದಸ್ಯೆ ಶ್ರೀಮತಿ ಸುನಿತಾ ಪ್ರಕಾಶ ಬುರಬುರೆ, ಆರ್.ಡಿ.ರತನ, ರಮೇಶ ಪಾಟೀಲ, ಮಂಜುನಾಥ ಪೂಜಾರಿ, ಶ್ರೀನಿವಾಸ ರತನ, ವೆಂಕಟೇಶ ಪೂಜಾರಿ, ಪ್ರಕಾಶ ಬುರಬುರೆ, ಪಾಂಡುರಂಗ ಮೆಹರ್ವಾಡೆ, ಶ್ರೀನಿವಾಸ್ ಪಿ. ರತನ, ಮಂಜುನಾಥ್ ರತನ್, ರಘುನಾಥ ಪೂಜಾರಿ, ಮುಖಂಡರುಗಳಾದ ರಂಗಾ ಬದ್ದಿ, ಎಲ್ಲಪ್ಪ ಬದ್ದಿ, ಸಂತೋಷ ಬಾಕಳೆ, ರುಕ್ಮಾಸಾ ದಲ್ಬಂಜನ್, ನಾರಾಯಣ ಹಬೀಬ, ಅನಿಲ ಬದ್ದಿ ಉಪಸ್ಥಿತರಿದ್ದರು.