ಪೂಜಾ ವಿಧಿ ವಿಧಾನಗಳಿಂದ ವಿಜಯನಗರ ಜಿಲ್ಲಾಡಳಿತ ಕಾರ್ಯಕ್ಕೆ ಚಾಲನೆ

ಸಂಜೆವಾಣಿ ಪ್ರತಿನಿಧಿಯಿಂದ
ಹೊಸಪೇಟೆ ಅ2: ನೂತನವಾಗಿ ಆರಂಭವಾದ ವಿಜಯನಗರ ಜಿಲ್ಲಾಡಳಿತವನ್ನು ನೂತನ ಜಿಲ್ಲಾಧಿಕಾರಿ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ  ಸೇರಿದಂತೆ ಪ್ರವಾಸೋದ್ಯ ಹಾಗೂ ವಿಜಯನಗರ ಜಿಲ್ಲಾ ಉಸ್ತೂವಾರಿ ಸಚಿವ ಆನಂದಸಿಂಗ್ ವಿಶೇಷ ಪೂಜೆ ಸಲ್ಲಿಸುವ ಮೂಲಕ  ವಿದ್ಯುಕ್ತಚಾಲನೆ ನೀಡಿ ಉತ್ತಮ ಆಡಳಿತದ ಮೂಲಕ ಮಾದರಿಯಾಗಿ ಕಾರ್ಯನಿರ್ವಹಿಸುವಂತೆ ಸಚಿವ ಆನಂದಸಿಂಗ್ ಶುಭಕೋರಿದರು. 
ಹೊಸಪೇಟೆಯ ಜಿಲ್ಲಾ ಕ್ರೀಡಾಂಗಣದಲ್ಲಿ ಇಂದು ಸಂಜೆ ನಡೆಯುವ ವೇದಿಕೆಯ ಪಕ್ಕದಲ್ಲಿ ವಿನಾಯಕ, ಲಕ್ಷ್ಮೀ, ಸರಸ್ವತಿ ದೇವಿಯರ ಪ್ರತಿಮೆಗೆ ಪೂಜೆಸಲ್ಲಿಸುವ ಮೂಲಕ ಉತ್ತಮ ಮಾದರಿ ಜಿಲ್ಲಾ ರಚನೆಗೆ ಯಾವುದೆ ವಿಘ್ನಗಳು ಬಾರದಂತೆ ಅಣಿಯಾಗಲು ಪ್ರಾರ್ಥಿಸಿ ಸರ್ವಾಲಂಕಾರದೊಂದಿಗೆ ಸಿಂಗರಿಸಿದ ಅಧಿದೇವತೆಗಳು ಹಾಗೂ ನಾಡತಾಯಿ ಭುವನೇಶ್ವರಿ ಅಮ್ಮನವರ ಅಲಂಕೃತ ಮೂರ್ತಿಗೆ ಪೂಜೆಯೊಂದಿಗೆ ಚಾಲನೆ ನೀಡಲಾಯಿತು.
ಪ್ರಥಮ ಜಿಲ್ಲಾಧಿಕಾರಿ ಅನಿರುದ್ದ ಶ್ರವಣ್, ಜಿಲ್ಲಾ ಪೊಲೀಸವರಿಷ್ಠಾಧಿಕಾರಿ ಡಾ.ಅರುಣ್ ಕೆ. ಇವರುನ್ನು ಪರಿಚಯಿಸುತ್ತಿದ್ದೇನೆ ಯುವಕರು ಹಾಗೂ ಉತ್ಸಾಹಿಗಳು ಆಗಿದ್ದು ತಮ್ಮ ಹೊಸತನವನ್ನು ತೋರುವ ಮೂಲಕ ನೂತನ ವಿಜಯನಗರ ಜಿಲ್ಲೆಯಲ್ಲಿ ಮಾದರಿ ಕಾರ್ಯವೈಖರಿಗೆ ಮುನ್ನಡೆ ಬರೆಯಲಿ ಜೊತೆಯಾಗಿ ಉಪವಿಭಾಗಾಧಿಕಾರಿ ಸಿದ್ಧರಾಮೇಶ್ವರ ಸೇರಿದಂತೆ ಎಲ್ಲರೂ ಪೂಜೆಯಲ್ಲಿ ತಮ್ಮ ಪ್ರಾರ್ಥನೆ ಸಲ್ಲಿಸಿದರು. ನಂತರ ಮಾತನಾಡಿದ ಸಚಿವ ಆನಂದಸಿಂಗ್ ನೂತನ ವಿಜಯನಗರ ಜಿಲ್ಲೆಯನ್ನು ತಮ್ಮ ನೇತೃತ್ವದಲ್ಲಿ ಯಶಸ್ವಿಯಾಗಿ ನಡೆಸುವಂತೆ ಮತ್ತು ಈ ಭಾಗದಲ್ಲಿ  ಆಶೆಯಗಳಿಗೆ ಸ್ಪಂಧಿಸಿ ಕಾರ್ಯನಿರ್ವಹಿಸುವಂತೆ ತಿಳಿಸಿದರು.