ಸಂಜೆವಾಣಿ ವಾರ್ತೆ
ಕುಕನೂರು, ಜು.25: ಹಬ್ಬ ಹರಿದಿನಗಳ ಮೂಲಕ ಎಲ್ಲರೂ ಖುಷಿಯಿಂದ ಬಾಳಬೇಕೆಂದು , ಬಡವ, ಬಲ್ಲಿದ ಅನಾಥರನ್ನು ರಕ್ಷಿಸುವ ಕೆಲಸ ಕಾಯ೯ಗಳನ್ನ ಧಾಮಿ೯ಕ ಸಂಸ್ಥೆಗಳು ಮಾಡಬೇಕು, ಪ್ರತಿಯೊಬ್ಬರ ಜೀವನ ಉದ್ದಾರ ಮಾಡಲು ಪ್ರಯತ್ನಿಸಬೇಕು, ಪಶು ಪಕ್ಷಿ ಗಳ ರೀತಿ ಬದುಕುವುದಕ್ಕಿಂತ ಉತ್ತಮ ನಾಗರಿಕರಾಗಿ ಬಾಳಲು ಪ್ರಯತ್ನಿಸಬೇಕು
ಎಂದು ಯಲಬುಗಿ೯ಯ ಶ್ರೀಧರ ಮುರಡಿ ಹಿರೇಮಠದ ಬಸವಲಿಂಗೇಶ್ವರ ಮಹಾ ಸ್ವಾಮೀಜಿಗಳು ಹೇಳಿದರು.
ಪಟ್ಟಣದ ಕೋಳಿಪೇಟೆಯ ಇಟಗಿ ಮಸೂತಿ ನೂತನವಾಗಿ ನವೀಕರಣಗೊಂಡ ಕಟ್ಟಡ ಉದ್ಘಾಟನೆ ಮಾಡಿ ಮಾತನಾಡಿದ ಅವರು. ಯುವಕರು ಇಸ್ಪೀಟ್ ಜೂಜು ದುಶ್ಚಟ ಸರಿಯಲ್ಲ.ಇದರಿಂದ ದೂರವಿರಬೇಕು. ಹಿರಿಯರ ಮಾರ್ಗದರ್ಶನದಲ್ಲಿ ಅವರು ಹಾಕಿಕೊಟ್ಟ ದಾರಿಯಲ್ಲಿ ನಡೆಯಬೇಕು. ಹಿರಿಯರು ಯುವಕರಿಗೆ ಸನ್ಮಾಗ೯ ತೋರಿಸಲು ಪ್ರಯತ್ನಿಸಬೇಕು ಎಂದರು.
ಅನ್ನದಾನೇಶ್ವರ ಮಠದ ಅಭಿನವ ಅನ್ನದಾನೇಶ್ವರ ಮಹಾ ಸ್ವಾಮೀಜಿ ಮಾತನಾಡಿ, ಉ.ಕ. ದಲ್ಲೀ ಹಿಂದೂ ಮುಸ್ಲಿಂ ಒಂದೇ ಕುಟುಂಬದ ಸಹೋದರರು ಇದ್ದಂತೆ. ಸಮಾಜಕ್ಕೆ ಏನಾದರೂ ಕೊಟ್ಟರೆ ಅದು ಮತ್ತೆ ನಮಗೆ ಯಾವುದೇ ರೀತಿಯಲ್ಲಿ ವಾಪಾಸ್ ಬರುತ್ತದೆ ಅದಕ್ಕಾಗಿ ಎಲ್ಲರೂ ದಾನ ಧಮ೯ ಮಾಡುವ ಮೂಲಕ ಸಮಾಜ ಸೇವೆಗೆ ಮುಂದಾಗಬೇಕೆಂದು ತಿಳಿಸಿದರು.ಕುಕನೂರು ಈ ಮಟ್ಟಿಗೆ ಬೆಳೆಯಲು ಹಿಂದೂ ಮುಸ್ಲಿಂ ಜನಾಂಗದ ಪಾತ್ರ ಮುಖ್ಯವಾಗಿದೆ ಎಂದರು.
ಈ ಸಂದರ್ಭದಲ್ಲಿ ಮುಸ್ಲಿಂ ಧರ್ಮಗುರು ಮಹಮ್ಮದ್ ಅಲಿ, ಪಪಂ ಮಾಜಿ ಸದಸ್ಯ ಹನುಮಂತಪ್ಪ ಹಂಪನಾಳ್, ಮೌಲಾಹುಸೇನ್, ಬರಮಪ್ಪ ತಳವಾರ್, ಶಿವಪ್ಪ ಸಂದಿಮನಿ, ರಾಮಣ್ಣ ಮುಂದಲುಮನಿ, ಹುಸೇನ್ಸಾಬ್ ಚೋಕಾಲಿ, ಬಸವರಾಜ ಆರೇರ, ಹನುಮಂತಪ್ಪ ತಟ್ಟಿ, ರಫೀಸಾಬ್ ಚೋಕಾಲಿ, ದೀನಸಾಬ್ ನದಾಫ್, ನೂರಸಾಬ್ ನದಾಫ್, ಸೇರಿದಂತೆ ಮಸೂತಿಯ ಪದಾಧಿಕಾರಿಗಳು ಸ್ಥಳೀಯರು ಇತರರು ಇದ್ದರು…