
(ಸಂಜೆವಾಣಿ ವಾರ್ತೆ)
ಚನ್ನಮ್ಮನ ಕಿತ್ತೂರ,ಆ30: ನಾವು ಮಾಡಿದ್ದೇವೆ ಎನ್ನುವುದಕ್ಕಿಂತ ದೇವರ ಕೃಪೆಯಿಂದ ನಿಮ್ಮೇಲ್ಲರ ಪ್ರಯತ್ನದಿಂದ ಇಂದು ಗ್ರಾಮದಲ್ಲಿ ಗುಡಿ ನಿರ್ಮಾಣವಾಗುತ್ತಿರುವದು ಎಲ್ಲರಲ್ಲಿ ಸಂತಸ ಮನೆ ಮಾಡಿದೆಯೆಂದು ಕಾಂಗ್ರೆಸ್ ಮುಖಂಡರಾದ ಲಕ್ಷ್ಮೀ ಇನಾಮದಾರ ಹಾಗೂ ಬಿಮಿತಾ ಸೋನವಾಲ್ಕರ ಹೇಳಿದರು.
ಐತಿಹಾಸ ಪ್ರಸಿದ್ಧವಾಗಿರುವ ಮಲಪ್ರಭಾ ನದಿಯ ಮಧ್ಯ ಶರಣೆ ಶ್ರೀ ಗಂಗಾಂಬಿಕಾ ಐಕ್ಯ ಸ್ಥಳವಾದ ಸುಕ್ಷೇತ್ರ ಸಮೀಪದ ಎಂ.ಕೆ ಹುಬ್ಬಳ್ಳಿಯ ಪಟ್ಟಣದಲ್ಲಿ ಆರಾಧ್ಯ ದೇವತೇಯರಾದ ಶ್ರೀ ಗ್ರಾಮದೇವಿ, ಶ್ರೀ ದುರ್ಗಾದೇವಿಯರ ನೂತನ ದೇವಸ್ಥಾನದ ಕಟ್ಟಡದ ಗರ್ಭಗುಡಿ ಬಾಗಿಲು, ದೇವಸ್ಥಾನದ ಮುಖ್ಯ ಬಾಗಿಲು ಪೂಜಾ ಕಾರ್ಯಕ್ರಮದಲ್ಲಿ ಭಾಗಿಯಾಗಿ ಅವರು ಮಾತನಾಡಿದರು.
ದಿ. ಮಾಜಿ ಸಚಿವ ಡಿ,ಬಿ.ಇನಾವiದಾರವರು ಈ ಪಟ್ಟಣಕ್ಕೆ ಗ್ರಾಮದೇವಿಯ ಗುಡಿಯಾಗಬೇಕೆಂಬುದು ಕನಸು ಕಂಡಿದ್ದರು ಅದು ಇಂದು ನಿಮ್ಮೇಲ್ಲರ ಕೃಪೆಯಿಂದ ನನಸಾಗಿದೆ. ಗ್ರಾಮದಲ್ಲಿ ಗ್ರಾಮದೇವತೆ ಗುಡಿ ಇರುವುದರಿಂದ ಮಳೆ-ಬೆಳೆ. ಸಮೃದ್ಧಿ ಕಾಣುತ್ತೇವೆ ಅದಲ್ಲದೇ ಜಾನುವಾರುಗಳಿಗೆ, ಜನರಿಗೆ ಯಾವುದೇ ಕುಂದು-ಕೊರತೆ ಬರುವುದಿಲ್ಲ/ ಇದು ಹಿರಿಯರ ಕಾಲದಿಂದಲೂ ನಡೆದುಕೊಂಡ ಬಂದ ಪದ್ದತಿಯಾಗಿದೆ ಎಂದರು.
ಚನ್ನಬಸವೇಶ್ವರ ದೇವಸ್ಥಾನದಿಂದ ಪ್ರಮುಖ ಬೀದಿಯಿಲ್ಲಿ ಕುಂಭ ಆರತಿ ಹಾಗೂ ವಾದ್ಯಮೇಳದೊಂದಿಗೆ ಪಟ್ಟಣದ ಸುಮಂಗಲೆಯರಿಂದ ಮೆರವಣಿಗೆ ಜರುಗಿತು. ನಂತರ ಸುಮಂಗಲೆಯರ ಉಡಿ ತುಂಬಲಾಯಿತು.
ಈ ವೇಳೆ ಗ್ರಾಮದೇವಿ ಸದ್ಬಕ್ತರು, ಗ್ರಾಮದ ಹಿರಿಯರು, ಪ.ಪಂ ಮುಖ್ಯಾಧಿಕಾರಿ, ಸರ್ವ ಸದಸ್ಯರು, ಮಕ್ಕಳು, ಮಹಿಳೆಯರು ಗ್ರಾಮಸ್ಥರು ಉಪಸ್ಥಿತರಿದ್ದರು.