ಪೂಜಾರಿಗಳಿಗೆ ಸತ್ಕಾರ

ಮುಧೋಳ,ಮಾ23 : ಮುಧೋಳ ಮತಕ್ಷೇತ್ರದ ಪಟ್ಟಣ ಹಾಗೂ ಗ್ರಾಮೀಣ ಪ್ರದೇಶಗಳ ಎಲ್ಲ ದೇವಸ್ಥಾನಗಳ ಪೂಜಾರಿಗಳನ್ನು ಮಾಜಿ ಸಚಿವ, ಕೆಪಿಸಿಸಿ ಉಪಾಧ್ಯಕ್ಷ ಆರ್.ಬಿ.ತಿಮ್ಮಾಪೂರ ಯುಗಾದಿ ದಿನ ಸನ್ಮಾನಿಸಿದರು.
ನಂತರ ತಾಲೂಕಿನ ಒಂಟಗೋಡಿ, ಚನ್ನಾಳ, ಮಿರ್ಜಿ ಹಾಗೂ ಮಲ್ಲಾಪೂರ ಗ್ರಾಮಗಳಿಗೆ ತೆರಳಿ ಕಾಂಗ್ರೆಸ್ ಪಕ್ಷದ ಗ್ಯಾರಂಟಿ ಕಾರ್ಡಗಳನ್ನು ಸಾರ್ವಜನಿಕರಿಗೆ ವಿತರಿಸಿದರು. ಈ ಸಂದರ್ಭದಲ್ಲಿ ಕಾಂಗ್ರೆಸ್ ಪಕ್ಷದ ಪ್ರಮುಖರಾದ ಗೋವಿಂದಪ್ಪ ಗುಜ್ಜನ್ನವರ, ಉದಯ ಸಾರವಾಡ, ಯಶವಂತ ಚವ್ಹಾಣ, ದಾನೇಶ ತಡಸಲೂರ, ಸಂತೋಷ ಪಾಲೋಜಿ, ಮುದಕಣ್ಣಾ ಅಂಬಿಗೇರ, ಮಹಾಂತೇಶ ಮಾಚಕನೂರ, ಸದುಗೌಡ ಪಾಟೀಲ ಸೇರಿದಂತೆ ಮುಂತಾದವರು ಉಪಸ್ಥಿತರಿದ್ದರು.