ಪೂಜಾಕೈಂಕರ್ಯಗಳಿಂದ ದೇವರ ವಿಗ್ರಹಗಳ ಪ್ರತಿಷ್ಠಾಪನೆ

ಮಳವಳ್ಳಿ:ಏ:03: ಮಂಡ್ಯ ಜಿಲ್ಲೆ ಮಳವಳ್ಳಿ ತಾಲೂಕು ಅಗಸನಪುರ ಗ್ರಾಮದಲ್ಲಿ ಶ್ರೀ ಕರಿ ಬಂಟೆಶ್ವರ ರಾಕಾಸಮ್ಮ ದೇವಸ್ಥಾನದಲ್ಲಿ ನೂತನ ದೇವರ ವಿಗ್ರಹಗಳನ್ನು ಪ್ರತಿಷ್ಠಾಪಿಸಲಾಯಿತು ಹೋಮ-ಹವನಗಳು ಪೂಜಾಕೈಂಕರ್ಯ ಗಳಿಂದ ದೇವರ ವಿಗ್ರಹವನ್ನು ಚಂದ್ರಶೇಖರ್ ಆರಾಧ್ಯರು ಪ್ರಧಾನ ಅರ್ಚಕರು ವಿಶ್ವಾರಾಧ್ಯರು ರಮೇಶ್ ನಾಗಭೂಷಣ್ ಆರಾಧ್ಯರು ಹಿರಿಯ ಅರ್ಚಕರು ಗಳಿಂದ ಪ್ರತಿಷ್ಠಾಪಿಸಲಾಯಿತು.
ಸದರಿ ದೇವರ ಕೃಪೆಗೆ ದೇವಸ್ಥಾನದ ಎಲ್ಲಾ ಕುಲಸ್ಥರು ಹಾಗೂ ಗ್ರಾಮಸ್ಥರು ಮತ್ತು ಹಲವಾರು ಭಕ್ತರ ಸಮ್ಮುಖದಲ್ಲಿ ನೂತನ ವಿಗ್ರಹಗಳನ್ನು ಬಹಳ ವಿಜೃಂಭಣೆಯಿಂದ ಪ್ರತಿಷ್ಠಾಪಿಸಲಾಯಿತು ಸದರಿ ದೇವಸ್ಥಾನದ ಎಲ್ಲಾ ಕೂಟಗಳ ದೇವರುಗಳು ಭಾಗವಹಿಸಿ ಬಂದಂತಹ ಎಲ್ಲ ಭಕ್ತಾದಿಗಳಿಗೆ ಹೋಮ ಮುಗಿದ ನಂತರ ಮಂಗಳಾರತಿ ದೇವರ ಪ್ರಸಾದ ತೀರ್ಥ ಹೂ ಹಾಗೂ ಅನ್ನಸಂತರ್ಪಣೆಯನ್ನು ವಿತರಿಸಲಾಯಿತು.
ಕಾರ್ಯಕ್ರಮದಲ್ಲಿ ದೇವಸ್ಥಾನದ ಯಜಮಾನರ ಗಳಾದ ನಾಗರಾಜು ಅಗಸನಪುರ ಮಾಯಿ ಗಪ್ಪ ಅಗಸನಪುರ ರಾಜು ಮದ್ದೂರ್ ಹೊನ್ನಲಗೆರೆ ನಾಗರಾಜು ಹುಸ್ಕೂರು ಮಹಾದೇವ ಅಂತರಹಳ್ಳಿ ಎಂ ಲೋಕೇಶ್ ಪತ್ರಕರ್ತರು ಮಂಡ್ಯ ಹುಳ್ಳೇನಹಳ್ಳಿ ಮುತ್ತು ಮಾದಯ್ಯ ತಮ್ಮಯಶೆಟ್ಟಿ ಅಂತರಹಳ್ಳಿ ಮಹದೇವ ಫೆÇೀಟೋ ರಾಜು ರೇವಣ್ಣ ಬೆಂಗಳೂರು ಕಬ್ಬಾಳು ರವಿ ಕರಿಯಪ್ಪ ಮದ್ದುರ್ ಹೊನ್ನಲಗೆರೆ ಶ್ರೀಧರ್ ಸುರೇಶ ಅಂತರಹಳ್ಳಿ ಸ್ವಾಮಿ ಅಗಸನಪುರ ಸಿದ್ದರಾಜು ಅಗಸನಪುರ ಪ್ರದೀಪ್ ಭಾರತಿ ನಗರ ಅಂತರಹಳ್ಳಿ ನಾಗರಾಜು ಗ್ರಾಮ ಪಂಚಾಯಿತಿ ಸದಸ್ಯರು ಪುಟ್ಟಲಕ್ಷ್ಮಮ್ಮ ಮಾಯಿಗಶೆಟ್ಟಿ ಮಂಡ್ಯ ಶಂಕರ್ ಎಂ ಚಂದ್ರಶೇಖರ್ ಮಂಡ್ಯ ಹರ್ಷ ಬೆಂಗಳೂರು ಮರಿಯಪ್ಪ ಅಗಸನಪುರ ಮತ್ತು ಗ್ರಾಮಸ್ಥರು ಮತ್ತು ಎಲ್ಲಾ ಭಕ್ತಾದಿಗಳು ಭಾಗವಹಿಸಿ ದೇವರ ಕೃಪೆಗೆ ಪಾತ್ರರಾಗಿದ್ದಾರೆ ಮುಂಬರುವ ದಿನಗಳಲ್ಲಿ ದೇವಸ್ಥಾನದ ಅಭಿವೃದ್ಧಿಗಾಗಿ ದೇವಸ್ಥಾನದ ಟ್ರಸ್ಟ್ ಮಾಡಬೇಕೆಂದು ದೇವಸ್ಥಾನದ ಕುಲಸ್ಥರ ಆದ ಭಕ್ತಾದಿಗಳು ಅಭಿಪ್ರಾಯಪಟ್ಟರು.