ಪುಸ್ತಕ ಸಂಸ್ಕೃತಿ ಬೆಳೆಸಬೇಕು: ಸಿಪಿಕೆ

ಸಂಜೆವಾಣಿ ನ್ಯೂಸ್
ಮೈಸೂರು: ಏ.29:- ಪುಸ್ತಕ ಸಂಸ್ಕೃತಿ ಬೆಳೆಸುವಂತೆ ಹಿರಿಯ ಸಾಹಿತಿ ಡಾ.ಸಿ.ಪಿ. ಕೃಷ್ಣಕುಮಾರ್ ಕರೆ ನೀಡಿದರು.
ಅಖಿಲ ಕರ್ನಾಟಕ ಲೇಖಕರ ಮತ್ತು ಪ್ರಕಾಶಕರ ಸಂಘ, ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು, ಸಂವಹನ ಪ್ರಕಾಶನವು ಭಾನುವಾರ ವಿಜಯನಗರ ಕನ್ನಡ ಸಾಹಿತ್ಯ ಭವನದಲ್ಲಿ ಏರ್ಪಡಿಸಿದ್ದ ವಿಶ್ವ ಪುಸ್ತಕ ದಿನಾಚರಣೆಯಲ್ಲಿ ಮುಖ್ಯ ಅತಿಥಿಯಾಗಿ ಅವರು ಮಾತನಾಡಿ, ಈಗ ಪುಸ್ತಕ ಸಂಸ್ಕೃತಿ ಕುಸಿಯುತ್ತಿದೆ. ಇದನ್ನು ಮತ್ತೆ ಮೇಲೆತ್ತುವ ಕೆಲಸ ಆಗಬೇಕು ಎಂದರು. ನೀವು ಪುಸ್ತಕಗಳನ್ನು ಖರೀದಿಸಿ, ಸಾಲ ಪಡೆಯಿರಿ ಇಲ್ಲವೇ ಕದಿಯಿರಿ. ಹೇಗದರೂ ಮಾಡಿ ಓದಿ. ನಾನು ಚಿಕ್ಕಂದಿನಿಂದಲೂ ಪುಸ್ತಕಗಳನ್ನು ಕದಿಯುತ್ತಿದ್ದೆ. ಈಗ ನನ್ನ ಮನೆಯಲ್ಲಿರುವ ಪುಸ್ತಕಗಳನ್ನು ಯಾರಾದರೂ ಬಂದು ಕದಿಯಲಿ ಎಂದು ಕಾಯುತ್ತಿದ್ದೇನೆ. ಬಂಧುವೊಬ್ಬರು ಬಂದು ಸಂವಹನ ಪ್ರಕಾಶನಪ್ರಕಟಿಸಿರುವ ಡಾ.ಸಿಪಿಕೆ ಅವರ ಪುಸ್ತಕ ಸಂಸ್ಕೃತಿ ಭುವನದ ಭಾಗ್ಯ ಕೃತಿಯನ್ನು ಹಿರಿಯ ಪತ್ರಕರ್ತ ಅಂಶಿ ಪ್ರಸನ್ನಕುಮಾರ್ ಬಿಡುಗಡೆ ಮಾಡಿ ಮಾತನಾಡಿ, ಸಿಪಿಕೆ ಅವರು ಈ ಕೃತಿಯನ್ನು ರಚಿಸುವುದರ ಮೂಲಕ ವಿಶ್ವರೂಪ ದಿಗ್ಧರ್ಶನಕ್ಕೆ ಯತ್ನಿಸಿದ್ದಾರೆ. ಸದಾ ಅಪಾಯದಲ್ಲಿರುವ ವಚನ ಸಂಸ್ಕೃತಿಯನ್ನು ಉಳಿಸಿ, ಬೆಳೆಸಬೇಕು ಎಂದು ಕಳಕಳಿ ತೋರಿಸಿದ್ದಾರೆ. ಆ ಮೂಲಕ ಪುಸ್ತಕ ಪ್ರೀತಿಯನ್ನು ಪ್ರಚೋದಿಸಿದ್ದಾರೆ ಎಂದರು.
ಮುಖ್ಯ ಅತಿಥಿಯಾಗಿದ್ದ ಮೈವಿವಿ ನಿವೃತ್ತ ಗ್ರಂಥಾಪಾಲಕ ಡಾ.ಸಿ.ಪಿ. ರಾಮಶೇಷ್ ಮಾತನಾಡಿ, ತಲಸ್ಪರ್ಶಿ ಅಧ್ಯಯನಕ್ಕೆ ಮುದ್ರಿತ ಪುಸ್ತಕಗಳು ಬೇಕು. ಇತ್ತೀಚಿನ ವಿದ್ಯಮಾನಗಳನ್ನು ತಿಳಿಯಲು ಇ- ಪುಸ್ತಕಗಳು, ವೆಬ್‍ಸೈಟ್‍ಗಳಲ್ಲಿರುವ ಮಾಹಿತಿ ಬೇಕು ಎಂದರು.
ಅಧ್ಯಕ್ಷತೆ ವಹಿಸಿದ್ದ ಜಿಲ್ಲಾ ಕಸಾಪ ಅಧ್ಯಕ್ಷ ಮಡ್ಡೀಕೆರೆ ಗೋಪಾಲ್ ಮಾತನಾಡಿ, ಬಿ.ಎಸ್.ಯಡಿಯೂರಪ್ಪ ಅವರು ಮುಖ್ಯಮಂತ್ರಿ ಇದ್ದಾಗ ಕುವೆಂಪು ಭಾಷಾಭಾರತಿ ರಚಿಸಿದರು. ಹೀಗಾಗಿ ಇವತ್ತು ಕುವೆಂಪು ಸೇರಿದಂತೆ ಕನ್ನಡದ ಹಲವಾರು ಲೇಖಕರ ಕೃತಿಗಳು ಬೇರೆ ಬೇರೆ ಭಾಷೆಗಳಿಗೆ ಅನುವಾದವಾಗಿವೆ ಎಂದರು.
ಮ.ನ. ಲತಾ ಮೋಹನ್, ಡಾ.ಸಿ.ಪಿ. ರಾಮಶೇಷ್, ಮಡ್ಡೀಕೆರೆ ಗೋಪಾಲ್, ಮಾನಸ, ಡಿ.ಎನ್. ಲೋಕಪ್ಪ, ಯು,ಎಸ್. ಮಹೇಶ್, ಜೀನಹಳ್ಳಿ ಸಿದ್ದಲಿಂಗಪ್ಪ ಇದ್ದರು.