ಪುಸ್ತಕ ಲೋಕಾರ್ಪಣೆ-ಪ್ರದರ್ಶನ

ಮೈಸೂರು:ಜ:06: ಮೈಸೂರು ವಿಶ್ವವಿದ್ಯಾನಿಲಯ ಪ್ರಾಚ್ಯವಿದ್ಯಾ ಸಂಶೋಧನಾಲಯ ಮತ್ತು ಪ್ರಸಾರಾಂಗ ಸಹಯೋಗದಲ್ಲಿ ಪುಸ್ತಕಗಳ ಲೋಕಾರ್ಪಣೆ ಹಾಗೂ ಪುಸ್ತಕಗಳ ಪ್ರದರ್ಶನ ಮತ್ತು ಶೇಕಡ 50%ರ ಆಕರ್ಷಕ ರಿಯಾಯಿತಿ ದರದಲ್ಲಿ ಮಾರಾಟವನ್ನು ಹಮ್ಮಿಕೊಳ್ಳಲಾಗಿದೆ.
ಪ್ರಾಚ್ಯ ವಿದ್ಯಾ ಸಂಶೋಧನಾಲಯದಲ್ಲಿ ಹಮ್ಮಿಕೊಳ್ಳಲಾದ ಕಾರ್ಯಕ್ರಮವನ್ನು ಮೈಸೂರು ವಿಶ್ವವಿದ್ಯಾನಿಲಯದ ಕುಲಪತಿ ಪೆÇ್ರ.ಜಿ.ಹೇಮಂತ್ ಕುಮಾರ್ ಉದ್ಘಾಟಿಸಿ, ಪುಸ್ತಕಗಳನ್ನು ಲೋಕಾರ್ಪಣೆಗೊಳಿಸಿದರು.
ಮುಖ್ಯ ಅತಿಥಿಗಳಾಗಿ ಮೈಸೂರು ವಿಶ್ವವಿದ್ಯಾನಿಲಯದ ಕುಲಪತಿ ಆರ್,ಶಿವಪ್ಪ ಭಾಗವಹಿಸಿದ್ದರು. ಪ್ರಸಾರಾಂಗ ನಿರ್ದೇಶಕ ಪೆÇ್ರ.ಎನ್.ಎಂ.ತಳವಾರ್ ಅಧ್ಯಕ್ಷತೆ ವಹಿಸಿದ್ದರು. ಪ್ರಾ.ವಿ.ಸಂ ನಿರ್ದೇಶಕ ಪೆÇ್ರ.ಎಸ್.ಶಿವರಾಜಪ್ಪ, ಮುದ್ರಣಾಲಯ ನಿರ್ದೇಶಕ ಸತೀಶ್ ಎಸ್ ಉಪಸ್ಥಿತರಿದ್ದರು.
ಪುಸ್ತಕ ಮೇಳ ಇಂದು ಮತ್ತು ನಾಳೆ ನಡೆಯಲಿದೆ.