ಪುಸ್ತಕ ಲೊಕಾರ್ಪಣೆ


ಧಾರವಾಡ,ಜ.1: ಭಾರತ ಸ್ವಾತಂತ್ರ್ಯದ ಮೊದಲ ಹೋರಾಟಗಾರ್ತಿಕಿತ್ತೂರುರಾಣಿ ಚನ್ನಮ್ಮಳ ಬದುಕನ್ನುಕುರಿತು ಬರೆದ ಪುಸ್ತಕ ಬಿಡುಗಡೆ ಸಮಾರಂಭದಲ್ಲಿಕನ್ನಡ ಹೋರಾಟಕ್ಕೆ ಬುನಾದಿಯನ್ನು ಹಾಕಿದಕನ್ನಡದಗುಡಿಕರ್ನಾಟಕ ವಿದ್ಯಾವರ್ಧಕ ಸಂಘದಲ್ಲಿ ಲೋಕಾರ್ಪಣೆ ಮಾಡುವುದು ನನಗೆ ಸಿಕ್ಕ ಬಹುದೊಡ್ಡ ಸಂತೋಷದಕ್ಷಣವಾಗಿದೆ. ಕರ್ನಾಟಕದಏಕೀಕರಣಕ್ಕಾಗಿ ಹೋರಾಡಿದಕನ್ನಡ ಸಾಹಿತ್ಯ ಪರಿಷತ್ತು ಸ್ಥಾಪನೆಗೊಳ್ಳುವುದಕ್ಕೆ ಬುನಾದಿಯಾಗಿರುವಕರ್ನಾಟಕ ವಿದ್ಯಾವರ್ಧಕ ಸಂಘ ಕನ್ನಡ ನಾಡು ನುಡಿಯನ್ನುಕಟ್ಟುವಲ್ಲಿ ನಿರಂತರವಾಗಿ ಶ್ರಮಿಸುತ್ತಾ ಬಂದಿದೆಎಂದು ಬೆಂಗಳೂರಿನ ಹಿರಿಯ ಸಂಸ್ಕøತಿಚಿಂತಕರಾ.ನಂ.ಚಂದ್ರಶೇಖರ ಹೇಳಿದರು.
ಅವರುಕರ್ನಾಟಕ ವಿದ್ಯಾವರ್ಧಕ ಸಂಘವು ಆಯೋಜಿಸಿದ್ದ ಡಾ.ಸಂತೋಷ ಹಾನಗಲ್ಲಅವರ ‘ವೀರ ಸೌದಾಮಿನಿ’ ಚಿತ್ರಸಂಪುಟಕಿತ್ತೂರುರಾಣಿಚನ್ನಮ್ಮ ಪುಸ್ತಕ ಲೋಕಾರ್ಪಣೆ ಸಮಾರಂಭದಲ್ಲಿ ಪುಸ್ತಕ ಲೋಕಾರ್ಪಣೆ ಮಾಡಿ ಮಾತನಾಡುತ್ತಿದ್ದರು.
ಮುಂದುವರೆದು ಮಾತನಾಡಿದಅವರು, ಪುಸ್ತಕದ ಪ್ರಕಟಣೆತುಂಬಾಕಷ್ಟದಾಯಕವಾಗಿರುವ ಈ ಕಾಲದಲ್ಲಿಕನ್ನಡದರಾಣಿಯನ್ನು ನಾಡಿಗೆ ಪರಿಚಯಿಸಿದ ಕೀರ್ತಿ ಈ ಕೃತಿಯನ್ನು ಪ್ರಕಟಿಸಿದ ಕಿತ್ತೂರಿನಕಲ್ಮಠದ ಪೂಜ್ಯರಿಗೆ ಸಲ್ಲುತ್ತದೆ. ಈ ನಾಡಿನ ಬೆಳವಡಿ ಮಲ್ಲಮ್ಮ ಮಹಿಳಾ ಸೈನಿಕರನ್ನುಕಟ್ಟಿಕೊಟ್ಟ ಪ್ರಥಮ ಮಹಿಳೆಯಾಗಿದ್ದಾಳೆ. ಕೆಳದಿ ಚನ್ನಮ್ಮ, ಬೆಳವಡಿ ಮಲ್ಲಮ್ಮ, ಕಿತ್ತೂರುಚನ್ನಮ್ಮಇವತ್ತಿನ ಪ್ರಚಾರದಯುಗದಲ್ಲಿ ಹಿಂದುಳಿದಿರುವುದು ಖೇದದ ಸಂಗತಿಯಾಗಿದೆ.ಸಂಗೊಳ್ಳಿ ರಾಯಣ್ಣನಿಗೆ ಸ್ಪೂರ್ತಿ ನೀಡಿದರಾಣಿ ಚನ್ನಮ್ಮಳ ಕಾರ್ಯತತ್ಪರತೆಅಪಾರವಾದದ್ದುಎಂದು ಹೇಳಿದರು.
ಕೃತಿಕುರಿತು ಮಾತನಾಡಿದದಾಂಡೇಲಿಯ ಸರಕಾರಿ ಪ್ರಥಮದರ್ಜೆ ಮಹಾವಿದ್ಯಾಲಯದಇತಿಹಾಸ ಪ್ರಾಧ್ಯಾಪಕಡಾ. ಬಸವರಾಜ ಅಕ್ಕಿ, ಹಲಗಲಿಯ ಬೇಡರಂಥ ಬುಡಕಟ್ಟುಜನಾಂಗದವರು ಸ್ವಾತಂತ್ರ್ಯ ಹೋರಾಟದಲ್ಲಿ ಪ್ರಮುಖ ಸ್ಥಾನವನ್ನು ವಹಿಸಿದವರು.ಸ್ವಾತಂತ್ರ್ಯಕ್ಕಾಗಿ ನಡೆದ ಹೋರಾಟದಲ್ಲಿಅತ್ಯುತ್ತಮ ಹೋರಾಟ ಮಾಡಿದ ಶ್ರೇಯಸ್ಸು ಬುಡಕಟ್ಟುಜನಾಂಗಕ್ಕೆ ಸಲ್ಲುತ್ತದೆ. ಚನ್ನಮ್ಮಳನ್ನು ಕುರಿತು ಈ ಕೃತಿ ದ್ವಿಭಾಷೆಯಲ್ಲಿ (ಕನ್ನಡ ಮತ್ತುಇಂಗ್ಲೀಷ) ರಚಿತಗೊಂಡಿದ್ದು, ಕಿತ್ತೂರಕೋಟೆಯ ಕಲಾಶೈಲಿ, ವಸ್ತುಸಂಗ್ರಹಾಲಯ, ನೀಲನಕ್ಷೆ, ಆಯುಧಗಳ ಉಗ್ರಾಣ, ಇವುಗಳ ಮಾಹಿತಿಯನ್ನು ಈ ಕೃತಿ ಒಳಗೊಂಡಿದ್ದು, ಕಿತ್ತೂರಿನಇತಿಹಾಸ ಮೋಡಿ ಲಿಪಿಯಲ್ಲಿಇರುವುದರಿಂದಅದನ್ನುಅಧ್ಯಯನ ಮಾಡಿಕಿತ್ತೂರಿನಇತಿಹಾಸ ತಿಳಿಯುವುದು ಅವಶ್ಯವಾಗಿದೆ. ಲಂಡನ್‍ನಲ್ಲಿಯೂಕೂಡಾಕಿತ್ತೂರಿಗೆ ಸಂಬಂಧಿಸಿದ ಅನೇಕ ದಾಖಲೆಗಳು ಸಿಗುತ್ತವೆ. ಆಸಕ್ತ ಸಂಶೋಧಕರು ಸತ್ಯವಾದ ಸಂಶೋಧನೆಯನ್ನು ಸಿಕ್ಕ ಆಧಾರದ ಹಿನ್ನೆಲೆಯಲ್ಲಿ ಬೆಳಕಿಗೆ ತರುವುದುಇವತ್ತಿನಅಗತ್ಯವಾಗಿದೆ.ಪ್ರಸ್ತುತಕೃತಿಆಕರ್ಷಕ ಭಾವಚಿತ್ರಗಳ ಬಳಕೆಯಿಂದ ಆಧಾರ ಸಹಿತವಾಗಿಕೃತಿರಚಿತಗೊಂಡಿರುವುದರಿಂದ ಈ ಕೃತಿತನ್ನ ಮೌಲ್ಯವನ್ನು ಹೆಚ್ಚಿಸಿಕೊಂಡಿದೆ ಎಂದರು.
ಸಾನ್ನಿಧ್ಯ ವಹಿಸಿ ಮಾತನಾಡಿದಚನ್ನಮ್ಮನಕಿತ್ತೂರಿನರಾಜಗುರು ಸಂಸ್ಥಾನ ಕಲ್ಮಠದ ಶ್ರೀ ಮಡಿವಾಳ ರಾಜಯೋಗೀಂದ್ರ ಸ್ವಾಮಿಗಳು ಮಾತನಾಡಿ, ಮಗುವನ್ನು ಹೆತ್ತಕೂಡಲೇಯಾವರೀತಿಯಆನಂದವಾಗುತ್ತದೆಯೋಅದೇರೀತಿಯ ಸಂತೋಷ ಈ ಕೃತಿ ಪ್ರಕಟಗೊಂಡು ಬಿಡುಗಡೆಯಾಗುತ್ತಿರುವ ಈ ಸಂದರ್ಭದಲ್ಲಿ ಪ್ರಕಾಶಕರಾದ ನಮಗೂ ಸಂಶೋಧಕರಾದಡಾ. ಸಂತೋಷ ಹಾನಗಲ್ಲಅವರಿಗೂಆಗಿದೆ.ಇದೊಂದುಆಕರಗ್ರಂಥವಾಗಿ ಬರಬೇಕೆಂದು ನಮ್ಮಆಶಯವಾಗಿತ್ತು.ಆ ನಿಟ್ಟಿನಲ್ಲಿಕೃತಿ ಹೊರಬಂದಿದೆ.ಇತ್ತಿಚೆಗೆ ಸಂಶೋಧಕರಕೊರತೆಇರುವುದನ್ನುಕಾಣುತ್ತೇವೆ. ರಾಣಿಚೆನ್ನಮ್ಮಕಟ್ಟಿದಅರಮನೆ ಹಾಳಾಗಿರಬಹುದು.ಆದರೆಗುರು ಮನೆ ಜೀವಂತವಾಗಿ ಉಳಿದಿದೆ. ಈ ಗುರುಮನೆಯು ಚನ್ನಮ್ಮಳ ಇತಿಹಾಸಜೀವಂತವಾಗಿ ಉಳಿಸುವಲ್ಲಿ ಶ್ರಮಿಸುತ್ತಿದೆಎಂದರು.
ಚಿತ್ರಸಂಪುಟ ಲೇಖಕ ಡಾ.ಸಂತೋಷ ಹಾನಗಲ್ಲ ಸಂಶೋಧನಾ ಸಂದರ್ಭದಲ್ಲಿ ಸವೆಸಿದ ಕಠಿಣದಾರಿಯನ್ನು ನೆನಪಿಸಿಕೊಂಡರು.
ಧಾರವಾಡ ಮಹಾಂತ ವಿದ್ಯಾಲಯದ ಸಹಾಯಕ ಪ್ರಾಧ್ಯಾಪಕಿಡಾ.ಸುಜಾತ ಕೊಂಬಳಿ ಮುಖ್ಯಅತಿಥಿಯಾಗಿ ಹಾಗೂ ಕ.ವಿ.ವ. ಸಂಘದಅಧ್ಯಕ್ಷಚಂದ್ರಕಾಂತ ಬೆಲ್ಲದಅಧ್ಯಕ್ಷತೆ ವಹಿಸಿ ಮಾತನಾಡಿದರು.
ಡಾ. ಧನವಂತ ಹಾಜವಗೋಳ ಸ್ವಾಗತಿಸಿದರು, ಶಂಕರ ಹಲಗತ್ತಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಡಾ. ಜಿನದತ್ತ ಹಡಗಲಿ ನಿರೂಪಿಸಿದರು. ಗುರು ಹಿರೇಮಠ ವಂದಿಸಿದರು.
ಕಾರ್ಯಕ್ರಮದಲ್ಲಿಡಾ.ಅಶೋಕ ಶೆಟ್ಟರ, ಡಾ.ಅರವಿಂದ ಯಾಳಗಿ, ಡಾ. ಸಂಜೀವ ಹಾನಗಲ್ಲ, ಸರೋಜಾ ಹಾನಗಲ್ಲ, ಸುಖದೇವ ಪಾನಬುಡೆ, ಹನುಮಂತ ಮೇಲಿನಮನಿ, ಸರಸ್ವತಿ ಭಗವತಿ, ಸಿದ್ಧರಾಮ ಹಿಪ್ಪರಗಿ, ಲಕ್ಷ್ಮಣ ಬಕ್ಕಾಯಿ, ಮಹಾಂತೇಶ ನರೇಗಲ್, ಚಂದ್ರೇಶೇಖರರೊಟ್ಟಿಗವಾಡ ಸೇರಿದಂತೆಅನೇಕರಿದ್ದರು.