ಪುಸ್ತಕ ಬಿಡುಗಡೆ

ಮುನವಳ್ಳಿ,ಡಿ20-ಸಮಿಪದ ಕಟಕೋಳ ಗ್ರಾಮದ ಟಿ.ಪಿ.ಮನ್ನೂಳಿ ಯವರ ಸಭಾಭವನದಲ್ಲಿ ಶುಕ್ರವಾರ ಡಾ|| ಸುರೇಶ ಅಂಗಡಿಯವರು ಕನ್ನಡದಲ್ಲಿ ರಚಿಸಿದ ಹರಿಹರನ ಸರಳ ಬಸವರಾಜದೇವರ ರಗಳೆ ಅನ್ನುವ ಪ್ರಥಮ ಮುದ್ರಣದ ಪುಸ್ತಕವನ್ನು ಲೇಖಕರ ಹಾಗೂ ಟಿ.ಪಿ.ಮನ್ನೊಳಿಯವರ ಸಮ್ಮುಖದಲ್ಲಿ ಶ್ರೀ ನಾಗಬೂಷನ ಶ್ರೀಗಳ ಸಾನಿದ್ಯದಲ್ಲಿ ಉದ್ಘಾಟನೆ ಜರುಗಿತು.
ಶ್ರೀಗಳು ಮಾತನಾಡುತ್ತಾ ದಿ. ಶ್ರೀ ಪರಪ್ಪ ಮನೋಳಿಯವರ ಸವಿನೆನಪಿಗಾಗಿ ರಚಿಸಿದ ಪುಸ್ತಕವನ್ನು ಬಿಡುಗಡೆಗೋಳಿಸಿದ್ದು ಈಗಿನ ಮಕ್ಕಳಿಗೆ ದಾರಿ ದಿಪವಾದಂತೆ ಮೊದಲಿನ ಜನರು ಹೆಗೆ ಇದ್ದರು ವ್ಯಾಪಾರ, ವಹಿವಾಟು ಹೆಗೆ ನಡೆಸುತಿದ್ದರು. ಭಯ ಭಕ್ತಿಯಿಂದ ನಡೆದುಕೊಳ್ಳುವ ರಿತಿಯನ್ನು ತಿಳಿಸುವಂತಿದೆ ಎಂದರು. ಮುಖ್ಯ ಅಥಿತಿಗಳಾಗಿ ಕೆ.ವಿ.ವಿ ಸಂಘದ ಕಾರ್ಯದರ್ಶಿ ಎ.ಕೆ.ತೊರನಗಟ್ಟಿ, ಸಿ.ಎ.ದೇಸಾಯಿ, ಪತ್ರಕರ್ತ ಟಿ.ಎನ್.ಮುರಂಕರ, ಮಾಂತೇಶ ಕುಂಬಾರ, ಮಾಹಾಂತಯ್ಯ ಹಿರೇಮಠ, ಇತರರು ಉಪಸ್ಥಿತರಿದ್ದರು.