ಪುಸ್ತಕ ಬಿಡುಗಡೆ ಸಮಾರಂಭ


ಧಾರವಾಡ,ಜು.19: ಆಧುನಿಕಯುಗದಲ್ಲಿ ಹೆಚ್ಚುತ್ತಿರುವ ವೃದ್ಧಾಶ್ರಮ ಶಮನಕ್ಕಾಗಿ ನಮ್ಮ ಹಿರಿಯರು ಹಾಕಿಕೊಟ್ಟ ಹಾದಿಯಲ್ಲಿ ನಡೆದು, ಸಂಸ್ಕøತಿ, ಪರಂಪರೆಯ ಪುನರಾವರ್ತನೆಆಗಬೇಕಿದೆಎಂದು ವಿಧಾನ ಪರಿಷತ್ ಸದಸ್ಯ ಹಾಗೂ ಮಾಜಿ ಮುಖ್ಯಮಂತ್ರಿಜಗದೀಶ ಶೆಟ್ಟರ ಹೇಳಿದರು.
ಅವರುಕರ್ನಾಟಕ ವಿದ್ಯಾವರ್ಧಕ ಸಂಘದಲ್ಲಿಜೀವಣ್ಣಗೌಡ-ಲೀಲಾತಾಯಿ ಪಾಟೀಲಕುಲಕರ್ಣಿದತ್ತಿಕಾರ್ಯಕ್ರಮದ ಅಂಗವಾಗಿ ಜೀವಣ್ಣಗೌಡರ 101ನೇ ಜಯಂತಿಆಚರಣೆಯ ಅಂಗವಾಗಿ ಹೊರತಂದ ‘ಜೀವ-ಲೀಲಾ’ ಪುಸ್ತಕ ಬಿಡುಗಡೆ ಮಾಡಿ ಮಾತನಾಡುತ್ತಿದ್ದರು.
ಜೀವಣ್ಣಗೌಡ-ಲೀಲಾತಾಯಿ ದಂಪತಿಗಳ ಪುಟ್ಟಚರಿತ್ರೆ ಪುಸ್ತಕವಾಗಿದೆ. ಅವರು ಬಾಳಿ ಬದುಕಿದ ಹಾಗೂ ಸ್ವಾತಂತ್ರ್ಯ ಹೋರಾಟದಲ್ಲಿಯಅವರ ನೆನಪುಗಳನ್ನು ಹಾಗೂ ಸಕ್ರೀಯ ಪಾತ್ರವನ್ನು ಇಂದಿನ ಪೀಳಿಗೆಗೆ ಮನದಟ್ಟು ಮಾಡಿಕೊಡಬೇಕು.ಜೀವ-ಲೀಲಾ ಕೃತಿಯನ್ನು ಮುಕ್ತ ಕಂಠದಿಂದ ಹೊಗಳಿದ ಜಗದೀಶ ಶೆಟ್ಟರ ಲೇಖಕಿ ಸರೋಜಾರಾಮರಾವಕುಲಕರ್ಣಿಯವರ ಪ್ರಯತ್ನವನ್ನು ಶ್ಲಾಘಿಸಿದರು.
ಶಿಕ್ಷಣ ಇಲಾಖೆಯ ನಿವೃತ್ತಜಂಟಿ ನಿರ್ದೇಶಕ ಶಿವಶಂಕರ ಹಿರೇಮಠಅವರು ಮಾತನಾಡಿ, ಜೀವಣ್ಣಗೌಡ ಮತ್ತು ಲೀಲಾತಾಯಿಅವರ ಬದುಕನ್ನು ಪ್ರತ್ಯಕ್ಷಕಂಡ ಹಾಗೂ ಅವರೊಂದಿಗಿನ ಅನುಭವಗಳನ್ನು ಹಂಚಿಕೊಂಡರು.
ಹಿರಿಯ ನಟ ನಾಟಕಕಾರಡಾ.ಗೋವಿಂದ ಮಣ್ಣೂರ ಮಾತನಾಡಿ, ಜೀವ-ಲೀಲಾ ಪುಸ್ತಕ ಇಂದಿನ ಪೀಳಿಗೆಗೆ ಪ್ರೇರಕಶಕ್ತಿಯಾಗಿದೆ.ಅತ್ಯುತ್ತಮ ಚಲನಚಿತ್ರಆಗುವಲ್ಲಿಅರ್ಹತೆ ಪಡೆದಿದೆಎಂದು ವರ್ಣಿಸಿದರು.ಪುಸ್ತಕದಲ್ಲಿಯ ಕೆಲವು ಘಟನೆಗಳನ್ನು ನೆನೆದು ಭಾವುಕರಾದರು.
ಜೀವಣ್ಣಗೌಡರ ಹಿರಿಯ ಸಹೋದರ ಮತ್ತು ನಿವೃತ್ತ ಮುಖ್ಯೋಪಾಧ್ಯಾಯ ಕೆ. ಬಿ. ಪಾಟೀಲಕುಲಕರ್ಣಿ ಮಾತನಾಡಿ, ತಮ್ಮಅಣ್ಣ ಮತ್ತುಅತ್ತಿಗೆಯವರ ಬದುಕನ್ನು ಸ್ಮರಿಸಿಕೊಂಡರು.ಅಧ್ಯಕ್ಷತೆಯನ್ನುಚಂದ್ರಕಾಂತ ಬೆಲ್ಲದ ವಹಿಸಿದ್ದರು.
ಸಮಾರಂಭದಲ್ಲಿಕನ್ನಡದ ಪರಿಪೂರ್ಣಕಾರ್ಯಕರ್ತ ಎಂಬ ಗೌರವದೊಂದಿಗೆರಾಮದುರ್ಗತಾಲೂಕು ಸಾಲಹಳ್ಳಿ ಸುರೇಶದೇಸಾಯಿಅವರನ್ನುದತ್ತಿಯ ಅಂಗವಾಗಿ ಸನ್ಮಾನಿಸಲಾಯಿತು.ಲೇಖಕಿ ಸರೋಜಾಕುಲಕರ್ಣಿಯವರನ್ನು ಸಹ ಜಗದೀಶ ಶೆಟ್ಟರಇದೇ ಕಾಲಕ್ಕೆ ಸನ್ಮಾನಿಸಿದರು.
ಶಿವಾನಂದ ಭಾವಿಕಟ್ಟಿ ಸ್ವಾಗತಿಸಿದರು.ಶಂಕರ ಕುಂಬಿ ಪ್ರಾಸ್ತಾವಿಕವಾಗಿ ಮಾತನಾಡಿದರು.ಮನೋಜ ಪಾಟೀಲ ಆಶಯ ಭಾಷಣ ಮಾಡಿದರು.ಶಂಕರ ಹಲಗತ್ತಿ ಸನ್ಮಾನ ಪತ್ರವನ್ನು ವಾಚಿಸಿದರು.ಗುರು ಹಿರೇಮಠಕಾರ್ಯಕ್ರಮ ನಿರೂಪಿಸಿದರು.
ಸಮಾರಂಭದಲ್ಲಿ ಬಸವಪ್ರಭು ಹೊಸಕೇರಿ, ಬಿ.ಎಲ್. ಪಾಟೀಲ. ಶ್ರೀಶೈಲ ಜತ್ತಿ, ಸಿ.ಎಸ್. ಪೊಲೀಸಪಾಟೀಲ, ಎಂ.ಬಿ. ಕಟ್ಟಿ, ಚನಬಸಪ್ಪ ಮರದ, ನಿಂಗಣ್ಣಕುಂಟಿ, ಚನಬಸಪ್ಪಕರಗಣ್ಣವರ, ಹರ್ಷ ಡಂಬಳ, ವಿಠ್ಠಲ ಕಮ್ಮಾರ, ದುಷ್ಯಂತ ನಾಡಗೌಡ, ನರಸಿಂಹ ಪರಾಂಜಪೆ, ಡಾ. ಲಿಂಗರಾಜಅಂಗಡಿ, ಡಾ. ಮಂದಾಕಿನಿ ಪುರೋಹಿತ, ಡಾ.ಬಸವರಾಜ ನಾಗೂರ, ಡಾ.ಶ್ರೀಶೈಲ ಮಾದಣ್ಣವರ, ಸದಾಶಿವ ಚೌಶೆಟ್ಟಿ, ಈರಣ್ಣಇಜಗಣ್ಣವರ, ನಾಗೇಶ ಕಲಬುರ್ಗಿ, ಡಾ.ಬಾಳಪ್ಪ ಚಿನಗುಡಿ, ಚಳ್ಳಮರದ ಶೇಖ್, ಮಹಾಂತೇಶ ನರೇಗಲ್ ಸೇರಿದಂತೆ ಪಾಟೀಲಕುಲಕರ್ಣಿ ಪರಿವಾರದವರು ಭಾಗವಹಿಸಿದ್ದರು.