ಪುಸ್ತಕ ಓದುವ ಹವ್ಯಾಸ ರೂಢಿಸಿಕೊಳ್ಳಿ

ಗಂಗಾವತಿ ಮಾ.16: ಹಾಸ್ಯ ಭಾಷಣಕಾರರು ಶ್ರೇಷ್ಠ ಯೋಗಿ ಇದ್ದಂತೆ, ಹಾಸ್ಯದ ಮೂಲಕ ನಮ್ಮ ಜೀವನ ಕಟ್ಟಿಕೊಳ್ಳಬೇಕು ಎಂದು ಹ್ಯಾಸ ಕಲಾವಿದ ಗಂಗಾವತಿ ಪ್ರಾಣೇಶ ಹೇಳಿದರು.
ತಾಲೂಕಿನ ಜಂಗಮರ ಕಲ್ಗುಡಿ ಗ್ರಾಮದಲ್ಲಿ ಸೋಮವಾರ ನಡೆದ ತಾಲೂಕು 7ನೇ ಸಾಹಿತ್ಯ ಸಮ್ಮೇಳನದಲ್ಲಿ ಹಾಸ್ಯೋತ್ಸವದಲ್ಲಿ ಅವರು ಮಾತನಾಡಿದರು.
ಪಾಲಕರು ತಮ್ಮ ಮಕ್ಕಳಿಗೆ ಹ್ಯಾಸ ಪ್ರಜ್ಞೆ, ಕನ್ನಡ ಭಾಷೆ ಕುರಿತು ತಿಳಿವಳಿಕೆ ನೀಡಬೇಕು. ಇಂಗ್ಲಿಷ್ ವ್ಯಾಮೋಹ ಬಿಟ್ಟು ಕನ್ನಡಕ್ಕೆ ಆದ್ಯತೆ ನೀಡಬೇಕು. ಮೊಬೈಲ್ ಬಳಕೆ ಕಡಿಮೆ ಮಾಡಿ ಪುಸ್ತಕ ಓದುವ ಹವ್ಯಾಸ ರೂಢಿಸಿಕೊಳ್ಳಬೇಕು. ಮಕ್ಕಳಲ್ಲಿ ಅಡಗಿರುವ ಪ್ರತಿಭೆ ಗುರುತಿಸಿ ಪ್ರೋತ್ಸಾಗ ನೀಡಬೇಕು ಎಂದರು.
ಹಾಸ್ಯ ಕಲಾವಿದರಾದ ನರಸಿಂಹ ಜೋಷಿ, ಬಸವರಾಜ ಮಹಾಮನಿ ತಮ್ಮ ಹಾಸ್ಯದ ಮೂಲಕ ನೆರದಿದ್ದ ಜನರನ್ನು ರಂಜಿಸಿದರು.
ಈ ವೇಳೆ ಮಾಜಿ ಸಚಿವ ಶಿವರಾಜ್ ತಂಗಡಗಿ, ಜಿ.ಪಂ.ಸದಸ್ಯ ಅಮರೇಶ ಗೋನಾಳ, ಕಾಡಾ ಅಧ್ಯಕ್ಷ ತಿಪ್ಪೇರುದ್ರಸ್ವಾಮಿ, ರಾಜಶೇಖರ ಅಂಗಡಿ, ಕಳಕನಗೌಡ ಪಾಟೀಲ, ವೈ.ಆನಂದರಾವ್ ಇದ್ದರು