ಪುಸ್ತಕ ಅವಲೋಕನ ಅವಶ್ಯ:ಡಾ.ಗೊಳಸಂಗಿ

ಕಲಬುರಗಿ,ಆ.6: ದಲಿತ ಸಾಹಿತ್ಯ ಪರಿಷತ್ತು ಸಮಾಜಮುಖಿ ಯಾದ ಪರಿಷತ್ತು ಎಲ್ಲ ಗೆಳೆಯರು ಸೇರಿ ಕೂಡಿಕೊಂ ಡು ಹೋಗಲಿ ಯಾವುದೇ ಪರಿಷತ್ತಿಗೆ ಸ್ಫರ್ಧಿಯಲ್ಲಕವಿ ಕೊಟ್ಟಗಿಯವರ ಕಾವ್ಯ ಪರಿಸರ,ಆಧ್ಯಾತ್ಮದಿಂದ ಕೂಡಿ ವೆ ಇನ್ನು ಹೆಚ್ಚು ಕಾರ್ಯಕ್ರಮ ಮಾಡಲು ಮತ್ತು ಕಲ್ಯಾ ಣ ಕರ್ನಾಟಕದ ಬೆಳ್ಳಿ ಸಂಭ್ರಮ ಏಳು ಜಿಲ್ಲೆಗಳ ಸಮಾರಂಭ ನಡೆಯಲಿ ಎಂದು ದಸಾಪ ರಾಜ್ಯಾಧ್ಯಕ್ಷ ಡಾ.ಅರ್ಜುನ ಗೊಳಸಂಗಿ ಅಭಿಪ್ರಾಯಪಟ್ಟರು
ಕಾನ್ಸಿರಾಮ ಪದವಿ ಕಾಲೇಜಿನಲ್ಲಿ ಜಿಲ್ಲಾ ದಸಾಪ‌ ಮತ್ತು ಈದಿನ.ಕಾಮ್ ಏರ್ಪಡಿಸಿದ ಡಿ.ಪಿ.ಕೊಟ್ಟಗಿಯ ವರ ಮಂದಾರ ಕವನ ಸಂಕಲನ ಬಿಡುಗಡೆ ಮತ್ತು ಕವಿ ಗೋಷ್ಠಿ ಸಮಾರಂಭ ಉದ್ಘಾಟಿಸಿ ಮಾತನಾಡಿ ಸಮಾಜ ಮುಖಿ ಕಾವ್ಯ ರಚಿಸಿ,ಪುಸ್ತಕ ಅವಲೋಕನ ಮಾಡಲು ಯುವ ಲೇಖಕರಿಗೆ ಸಲಹೆ ನೀಡಿದರು
ಡಿ.ಪಿ.ಕೊಟ್ಟಗಿಯವರ ಮಂದಾರ ಕವನ ಸಂಕಲನವ ನ್ನು ಜಾನಪದ ವಿದ್ವಾಂಸ ಡಾ.ಬಸವರಾಜ ಪೋಲಿಸ್ ಪಾಟೀಲ ಬಿಡುಗಡೆ ಮಾಡಿ ಮಂದಾ ಜೀವನ ಮೌಲ್ಯ ವನ್ನು ಒಳಗೊಂಡ ಕೃತಿ ಚರ್ಚೆಗೆ ಒಳಪಡಿಸಲು ಆಶಯ ನುಡಿದರು.
ಮಂದಾರ ಕಾವ್ಯದಲ್ಲಿ ಆಧ್ಯಾತ್ಮ ಮತ್ತು ಭಾವ ಅನುಭಾವದ ಚಿಂತನೆ ಕಾಣುತ್ತೇವೆಂದು ಯುವ ವಿಮ ರ್ಶಕ ಡಾ.ಮಹೇಶ್ ರುದ್ರಕರ್ ನುಡಿದರು.ಸಮಾಜದ ಪರಿವರ್ತನೆಯ ಭಾವೈಕ್ಯತೆಯ ಕವನಗಳಿವೆ ಎಂದು ಡಾ.ರಾಜಕುಮಾರ ಮಾಳಗೆ ನುಡಿದರು.ಸಿ.ಎಸ್.ಆನಂ ದ ಕೊಟ್ಟಗಿಯವರ ಕಾವ್ಯದಲ್ಲಿ ಆಧ್ಯಾತ್ಮದ,ಪರಿಸರದ ಮಹಾನ್ ಸಂತ ಶರಣರ ಕುರಿತು ಕವನ‌ ರಚಿಸಿದ್ದಾರೆ ಎಂದರು.
ಅಧ್ಯಕ್ಷತೆ ವಹಿಸಿದ ವಿಶ್ರಾಂತ ಪ್ರಾಧ್ಯಾಪಕ ಡಾ.ವಿ.ಟಿ. ಕಾಂಬಳೆ ಸಾಹಿತ್ಯದ ಮೂಲಕ ಸಾಮಾಜಿಕ ಕ್ರಾಂತಿಯಾ ಗಬೇಕೆಂದು ಕಲ್ಯಾಣ ಕರ್ನಾಟಕ ಭಾಗದಲ್ಲಿ ಆಗಬೇಕೆಂ ದರು.
ಜಿಲ್ಲಾ ದಸಾಪ ಅಧ್ಯಕ್ಷ ಡಾ.ಸುನೀಲ ಜಾಬಾದಿ ಪ್ರಾಸ್ತಾವಿಕ ನುಡಿ ಆಡಿದರು.
‌‌‌ಕವಿಗೋಷ್ಠಿಯಲ್ಲಿ ಅಶ್ವಿನಿ ಮದರಕರ್,ಸಾಕ್ಷಿ ಗವಿಸಿದ್ಧಪ್ಪ, ಸೃಷ್ಟಿ, ರೇಣುಕಾ ಹೆಳವರ,ಶರಣು ಜೇವರ ಗಿ,ದೇವರಾಜ ಭಂಡಾರಿ,ಡಾ.ಶೀಲಾದೇವಿ ಬಿರಾದಾರ, ಭವಾನಿ ಪ್ರಸಾದ,ಅಶೋಕ ಹಾಲಹಳ್ಳಿ,
ಅವಿನಾಶ ಸ್ವಾಗತಿಸಿದರು ಕಪಿಲ್ ಚಕ್ರವರ್ತಿ ನಿರೂಪಿ ಸಿದರು ಮಹಾದೇವ ಜಾಧವ ವಂದಿಸಿದರು
ಶರಣ ಸಾಹಿತ್ಯ ಪರಿಷತ್ತಿನ ಆಧ್ಯಕ್ಷ ಡಾ.ಮಲ್ಲಿಕಾರ್ಜುನ ವಡ್ಡನಕೇರಿ,ಡಾ.ಗವಿಸಿದ್ಧಪ್ಪ ಪಾಟೀಲ, ಡಾ.ಜಯದೇವಿ ಗಾಯಕವಾಡ,ಡಾ.ಶಿವಶರಣಪ್ಪ ಕೊಡ್ಲಿ,ಡಾ.ಸೂಲಾಬಾಯಿ ಕಾಳಮಂದರಗಿ, ಡಾ.ವಿಜ ಯಕುಮಾರ ಬೀಳಗಿ,ಡಾ.ರವಿ ಅಂತೆಪ್ಪನವರ ಡಾ.ಚಿದಾನಂದ ಕುಡ್ಡನ್,ಇತರರು ಇದ್ದರು.