ಪುಸ್ತಕಗಳು ಕಾಣಿಕೆಯಾಗಿ ನೀಡುವ ಪದ್ದತಿ ಬೆಳೆಯಲಿ

ಕಲಬುರಗಿ: ಜೂ.8:ಇತ್ತೀಚಿಗೆ ಅನೇಕ ಸಭೆ-ಕಾರ್ಯಕ್ರಮಗಳಲ್ಲಿ ದುಂದು ವೆಚ್ಚ ಹೆಚ್ಚಾಗುತ್ತಿದೆ. ಬೇರೆ ವಸ್ತುಗಳನ್ನು ಕಾಣಿಗೆಯಾಗಿ ನೀಡುವ ಬದಲು ಉತ್ತಮ ಗ್ರಂಥಗಳನ್ನು ನೀಡಬೇಕು. ವ್ಯಕ್ತಿಯ ಜೀವನದ ದಿಕ್ಕನ್ನೇ ಬದಲಿಸುವ ಶಕ್ತಿ ಪುಸ್ತಕಗಳಿಗಿದ್ದು, ಸಾಧನೆಯ ದಾರಿಯನ್ನು ತಿಳಿಸುವ ಮೂಲಕ ಶ್ರೇಷ್ಠ ವ್ಯಕ್ತಿತ್ವ ನಿರ್ಮಾಣ ಮಾಡುತ್ತವೆ ಎಂದು ಕೆಎಚ್‍ಬಿ ಗ್ರೀನ್ ಪಾರ್ಕ ಕ್ಷೇಮಾಭಿವೃದ್ಧಿ ಸಂಘದ ಅಧ್ಯಕ್ಷ ಸಂಜೀವಕುಮಾರ ಶೆಟ್ಟಿ ಹೇಳಿದರು.
ಸಮಾಜ ಸೇವಕ ದಂಪತಿಯಾದ ಜಯಶ್ರೀ ಮತ್ತು ಎಚ್.ಬಿ.ಪಾಟೀಲ ಅವರ 8ನೇ ವರ್ಷ ಕಲ್ಯಾಣ ಮಹೋತ್ಸವ ಹಾಗೂ ಅವರ ಸುಪುತ್ರ ಬಸವಭುವನ ಎರಡನೇ ವರ್ಷದ ಜನ್ಮದಿನಾಚರಣೆ ಪ್ರಯುಕ್ತ ನಗರದ ಕೈಲಾಸ ನಗರದಲ್ಲಿ ‘ಬಸವೇಶ್ವರ ಸಮಾಜ ಸೇವಾ ಬಳಗ’ದ ವತಿಯಿಂದ ಬುಧವಾರ ಸಂಜೆ ಏರ್ಪಡಿಸಲಾಗಿದ್ದ ‘ಜ್ಞಾನ ಸಂಭ್ರಮ’ ವಿಶೇಷ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡುತ್ತಿದ್ದರು.
ಜ್ಞಾನ ಶಿಕ್ಷಣ ಸಂಸ್ಥೆಯ ಅಧ್ಯಕ್ಷ ಸಂಗಮೇಶ್ವರ ಸರಡಗಿ, ನ್ಯಾಯವಾದಿ ಹಣಮಂತರಾಯ ಎಸ್.ಅಟ್ಟೂರ್ ಮಾತನಾಡಿ, ಎಚ್.ಬಿ.ಪಾಟೀಲ ಅವರದು ಸಮಾಜಕ್ಕೆ ಮಾದರಿಯ ಬದುಕು. ದಿನನಿತ್ಯ ಒಂದು ಕಾರ್ಯಕ್ರಮ ಹಮ್ಮಿಕೊಂಡು ನಿಸ್ವಾರ್ಥವಾಗಿ ಸಮಾಜ ಸೇವೆ ಮಾಡುವ ಮೇರು, ಮಾದರಿ ವ್ಯಕ್ತಿತ್ವ. ಅವರ ಸಮಾಜಮುಖಿ ಕಾರ್ಯಗಳಿಗೆ ಪ್ರೋತ್ಸಾಹ ನೀಡುವುದು ಅಗತ್ಯ. ಅವರ ವೈಯಕ್ತಿಕ ಕಾರ್ಯಕ್ರಮವಿದ್ದರು ಕೂಡಾ ಅದು ಸಮಾಜಮುಖಿಯಾಗಿ ಮಾಡುವುದು ಶ್ಲಾಘನೀಯವಾಗಿದೆ. ಅವರ ಮದುವೆ ವಾರ್ಷಿಕೋತ್ಸವ ಮತ್ತು ಸುಪುತ್ರನ ಜನ್ಮದಿನಾಚರಣೆ ಪ್ರಯುಕ್ತ ಆಗಮಿಸಿದ್ದ ಎಲ್ಲರಿಗೆ ಶರಣರು, ಸಂತರು, ಮಹನೀಯರು, ಸ್ವಾತಂತ್ರ್ಯ ಹೋರಾಟಗಾರರು, ಆರೋಗ್ಯ, ಪರಿಸರ ಸೇರಿದಂತೆ ಅನೇಕ ಮಹತ್ವದ ಪುಸ್ತಕಗಳನ್ನು ಉಚಿತವಾಗಿ ನೀಡುವ ಮೂಲಕ ಓದುವ ಅಭಿರುಚಿ ಬೆಳೆಸಬೇಕು ಎಂಬ ಅವರ ಕಳಕಳಿ ಇತರರಿಗೆ ಮಾದರಿಯಾಗಿದೆ ಎಂದರು.
ಜಿಲ್ಲಾ ಯುವ ಸಂಘಗಳ ಒಕ್ಕೂಟದ ಅಧ್ಯಕ್ಷ ಡಾ.ಸುನೀಲಕುಮಾರ ಎಚ್.ವಂಟಿ, ಕ.ರಾ.ಪ್ರಾ.ಶಾ.ಶಿ.ಸಂಘದ ಜಿಲ್ಲಾ ಉಪಾಧ್ಯಕ್ಷ ವೇ.ನೀಲಕಂಠಯ್ಯ ಹಿರೇಮಠ, ನಿವೃತ್ತ ಮುಖ್ಯ ಶಿಕ್ಷಕ ಬಸಯ್ಯಸ್ವಾಮಿ ಹೊದಲೂರ ಮಾತನಾಡಿದರು.
ಕಾರ್ಯಕ್ರಮದಲ್ಲಿ ಜಯಶ್ರೀ ಎಚ್.ಪಾಟೀಲ, ಎಚ್.ಬಿ.ಪಾಟೀಲ, ಬಸವಭುವನ, ಬಸವಶ್ರೀ, ವೀರಣ್ಣ ಲೊಡ್ಡೇನ್, ಶಿವಯೋಗಪ್ಪ ಬಿರಾದಾರ, ಪರಮೇಶ್ವರ ಬಿ.ದೇಸಾಯಿ, ದೇವೇಂದ್ರಪ್ಪ್ ಗಣಮುಖಿ, ಚಂದ್ರಕಾಂತ ಬಿರಾದಾರ, ಕೆ.ಬಸವರಾಜ, ಸೂರ್ಯಕಾಂತ ಸಾವಳಗಿ, ಬಾಲಕೃಷ್ಣ ಕುಲಕರ್ಣಿ, ಬಸವರಾಜ ಹೆಳವರ ಯಾಳಗಿ, ಶ್ರೀನಿವಾಸ ಬುಜ್ಜಿ, ಬಸವರಾಜ ಎಸ್.ಪುರಾಣೆ, ಅನೀಲಕುಮಾರ ಸಿಂದಗಿ, ಸಾಯಬಣ್ಣ ಬಾಬಣಗೋಳ್, ಮಹಾಂತೇಶ ಬಿ.ಬಿರಾದಾರ. ರೇವಣಸಿದ್ದಪ್ಪ ಪಾಟೀಲ, ರವಿ ಬಿರಾಜಾದಾರ, ವಿಜಯಲಕ್ಷ್ಮೀ ವಿ.ಲೊಡ್ಡೇನ್, ಪೂಜಾ ಎಸ್.ಹಸರಗುಂಡಗಿ, ಲಕ್ಷ್ಮಣ, ಸಂತೋಷ ಚಿಕ್ಕಬಸ್ತಿ, ಅಮರನಾಥ ಶಿವಮೂರ್ತಿ ಸೇರಿದಂತೆ, ವಿಜಯಲಕ್ಷ್ಮೀ ಮೈಲ್ವಾರ, ಭಾಗಿರಥಿ ಪಂಚಾಳ, ಜರನಮ್ಮ ಇಟಗಿ, ಶೃತಿ, ಸಿದ್ದಮ್ಮ, ಸೋಭಾ ಸೇರಿದಂತೆ ಮುಂತಾದವರು ಭಾಗವಹಿಸಿದ್ದರು.