ಪುಸ್ತಕಗಳು ಅಮೂಲ್ಯ ನಿಧಿಗಳು-ಜಿಆರ್ ಗೌಡ

ಕೋಲಾರ.ಏ.೨೪: ಪುಸ್ತಕದ ಮಹತ್ವ ಅದು ಓದುಗರಿಗಷ್ಟೆ ಅರ್ಥವಾದೀತು ಎಂದು ಹಸಾಳ ಪಂಚಾಯತಿಯ ಪಿಡಿಓ ಜಿ. ಆರ್.ಗೌಡ ಅಭಿಪ್ರಾಯಪಟ್ಟರು.
ಕೋಲಾರ ತಾಲ್ಲೂಕು ಕಸಾಬ ಹೋಬಳಿಯ ಹಸಾಳ ಗ್ರಾಮ ಪಂಚಾಯತಿಯಲ್ಲಿ ಜಿಲ್ಲಾ ಯುವ ಬರಹಗಾರರ ಒಕ್ಕೂಟದಿಂದ ಹಮ್ಮಿಕೊಂಡಿದ್ದ ವಿಶ್ವ ಪುಸ್ತಕ ದಿನಾಚರಣೆಯಲ್ಲಿ ಮಾತಾಡುತ್ತಿದ್ದರು.
ಪುಸ್ತಕ ಓದುವ ಹವ್ಯಾಸದಲ್ಲಿ ಸಿಕ್ಕಷ್ಟು ಸಂತೋಷ ಬೇರೆಲ್ಲೂ ಸಿಗಲ್ಲ. ಪುಸ್ತಕದ ಜೊತೆ ನಿರಂತರವಾಗಿ ಗೆಳೆತನ ಮಾಡಿದರೆ ಮುಂದೆ ಒಂದು ದಿನ ಜಗತ್ತನ್ನೇ ಗಲ್ಲಬಹುದು ಎಂಬುದಕ್ಕೆ ಡಾ. ಬಿ.ಆರ್ ಅಂಬೇಡ್ಕರ್ ಉತ್ತಮ ಉದಾಹರಣೆ ಎಂದರು.
ಗ್ರಾಮ ಪಂಚಾಯತ್ ಗ್ರಂಥಾಲಯದ ಮೇಲ್ವಿಚಾರಕ ಜಿ ಚಲಪತಿ ಮಾತಾನಾಡಿ ಪುಸ್ತಕ ಓದುವುದು ಪ್ರತಿಯೊಬ್ಬರ ಹಕ್ಕು. ಪುಸ್ತಕ ಓದುವುದರಿಂದ ಮನಸ್ಸಿಗೆ ನೆಮ್ಮದಿ ಖುಷಿ ದೊರೆಯುತ್ತದೆ. ಹಾಗೂ ನಮ್ಮ ಬುದ್ಧಿ ಶಕ್ತಿ ಹೆಚ್ಚುತ್ತದೆ. ಚಿಕ್ಕ ಮಕ್ಕಳಿಗೆ ಪುಸ್ತಕ ಓದುವ, ಹವ್ಯಾಸದ ಬಗ್ಗೆ ಓದುವ ಹವ್ಯಾಸ ಬೆಳೆಸಿಕೊಳ್ಳೋಣ ಎಂದರು.
ಕವಿ ಡಾ. ಶರಣಪ್ಪ ಗಬ್ಬೂರ್ ಮಾತಾನಾಡಿ ಎಸ್.ಎಲ್ ಬೈರಪ್ಪ, ದೇವನೂರು ಮಹಾದೇವ ಕುವೆಂಪು ಬೇಂದ್ರೆ ಯವರ ಅನೇಕ ಕೃತಿಗಳು ಪುಸ್ತಕದಿಂದ ಬಡತನ ಬೆನ್ನತ್ತಿದ್ದರೂ ಬದುಕುವ ಕಲೆ ಹೇಗೆ ಎಂಬುದನ್ನು ಹಣದಿಂದ ಕಲಿಯಲಾಗದ ಪಾಠ ಬದುಕಿನ ಅನುಭವದಿಂದ ಕಲಿತುಕೊಳ್ಳಬಹುದು. ಬದುಕಿನಲ್ಲಿ ಬರುವ ಕಷ್ಟಗಳನ್ನು ಮೆಟ್ಟಿ ನಿಲ್ಲುವ ಗಟ್ಟಿತನವನ್ನು ತಿಳಿಸಿಕೊಡುತ್ತವೆ ಎಂದರು
ಕಾರ್ಯಕ್ರಮದಲ್ಲಿ ಕಾರ್ಯದರ್ಶಿ ನಾರಾಯಣಸ್ವಾಮಿ, ರವೀಂದ್ರನಾಥ್ ರಾವ್, ನಾಗೇಶ್ವರ, ಸತೀಶ್ ಕುಮಾರ್, ಚಾಮುಂಡೇಶ್ವರಿ ದೇವಿ, ಲಾವಣ್ಯ ಮುಂತಾದವರು ಉಪಸ್ಥಿತರಿದ್ದರು.