ಪುಸ್ತಕಗಳಿಂದ ಜ್ಞಾನ ವೃದ್ಧಿ

ಚಿತ್ರದುರ್ಗ, ಏ.23;  ಪುಸ್ತಕಗಳನ್ನು ಹೆಚ್ಚಾಗಿ ಓದುವ ಹವ್ಯಾಸ ಬೆಳೆಸಿಕೊಂಡರೆ ಪ್ರತಿಯೊಬ್ಬರು ತಮ್ಮ ಜ್ಞಾನಭಂಡಾರವನ್ನು ವೃದ್ಧಿಸಿಕೊಳ್ಳಬಹುದು ಎಂದು ಮುಖ್ಯ ಗ್ರಂಥಾಲಯಾಧಿಕಾರಿಗಳಾದ ಪಿ.ಆರ್.ತಿಪ್ಪೇಸ್ವಾಮಿ ಹೇಳಿದರು.
ನಗರದ ಕೃಷ್ಣರಾಜೇಂದ್ರ ಜಿಲ್ಲಾ ಕೇಂದ್ರ ಗ್ರಂಥಾಲಯದಲ್ಲಿ ಶುಕ್ರವಾರ ಜಿಲ್ಲಾ ಹಾಗೂ ನಗರ ಗ್ರಂಥಾಲಯದ ಸಹಯೋಗದಲ್ಲಿ ಸರಳವಾಗಿ ಆಯೋಜಿಸಲಾಗಿದ್ದ ವಿಶ್ವ ಪುಸ್ತಕ ಹಾಗೂ ಕೃತಿಸೌಮ್ಯ ದಿನಾಚರಣೆ ಕಾರ್ಯಕ್ರಮದ ಅಂಗವಾಗಿ ವಿಶ್ವದ ಹೆಸರಾಂತ ಲೇಖಕರಾದ ವಿಲಿಯಂ ಷೆಕ್ಸ್‍ಪೀಯರ್ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಿ ಅವರು ಮಾತನಾಡಿದರು.
ಸಾಹಿತ್ಯ ಲೋಕದ ದಿಗ್ಗಜ, ಪ್ರಪಂಚದ ಪ್ರಖ್ಯಾತ ಬರಹಗಾರ ವಿಲಿಯಂ ಷೆಕ್ಸ್‍ಪಿಯರ್ ವಿಶ್ವದ ಅತ್ಯುತ್ತಮ ಇಂಗ್ಲೀಷ್ ಕವಿ, ನಾಟಕಕಾರ. ಜಗತ್ತಿನ ಸಾಹಿತ್ಯ ಲೋಕಕ್ಕೆ ಆತ ನೀಡಿದ ಕೊಡುಗೆ ಸ್ಮರಿಸುವ ಸಲುವಾಗಿ ಆತನ ಜನ್ಮ ದಿನವನ್ನು ಪುಸ್ತಕ ದಿನವನ್ನಾಗಿ ಆಚರಿಸಲಾಗುತ್ತಿದೆ ಎಂದರು.  ವಿಲಿಯಂ ಷೆಕ್ಸ್‍ಪಿಯರ್ ಅವರ 39 ನಾಟಕಗಳು, 154 ಸ್ಯಾನೇಟ್‍ಗಳು, 2 ಸುಧೀರ್ಘ ನಿರೂಪಣಾ ಪದ್ಯಗಳ ಪ್ರಮುಖ ದೇಶಗಳ ಭಾಷೆಗೆ ಭಾಷಾಂತರಗೊಂಡಿದೆ. ಈ ದಿನವು ಆಂಗ್ಲ ಸಾಹಿತ್ಯದ ಮಹಾನ್ ಸಾಹಿತಿ ವಿಲಿಯಂ ಷೆಕ್ಸ್‍ಪಿಯರ್ ಜನನ ಹಾಗೂ ಮರಣ ಹೊಂದಿದ ದಿನವಾಗಿದೆ ಎಂದು ಹೇಳಿದರು.
 ಗ್ರಂಥಾಲಯವು ಶ್ರೀಸಾಮಾನ್ಯರ ವಿಶ್ವವಿದ್ಯಾಲಯ. ಸಾರ್ವಜನಿಕರಲ್ಲಿ ವಿದ್ಯೆ, ಜ್ಞಾನ ಓದಿನ ಬಗೆಗೆ ರುಚಿ ಬಳೆಸಲು ಉದ್ದೇಶಿಸಿ ಸ್ಥಾಪನೆ ಮಾಡಿದ ಮುಕ್ತ ಸಾರ್ವಜನಿಕ ವ್ಯವಸ್ಥೆಯೇ ಈ ಸಾರ್ವಜನಿಕ ಗ್ರಂಥಾಲಯ. ರಾಜ್ಯ ಸರ್ಕಾರ 1965ರಲ್ಲಿ ಕರ್ನಾಟಕ ಸಾರ್ವಜನಿಕ ಗ್ರಂಥಾಲಯ ಕಾಯ್ದೆ ರೂಪಿಸಿ ಸಾರ್ವಜನಿಕ ಗ್ರಂಥಾಲಯಗಳ ಜಾಲದ ಬೆಳವಣಿಗೆಗೆ ಬುನಾದಿ ಹಾಕಿತು ಎಂದು ಹೇಳಿದರು.
ಕೋವಿಡ್-19 ಸಾಂಕ್ರಾಮಿಕ ರೋಗದ ಸೋಂಕಿನ ಎರಡನೇ ಅಲೆ ಹಿನ್ನಲೆಯಲ್ಲಿ ಗ್ರಂಥಾಲಯವನ್ನು ಸರ್ಕಾರಿ ಆದೇಶದಂತೆ ಮೇ 04ರವರೆಗೆ ಸಾರ್ವಜನಿಕ ಓದುಗರಿಗೆ ನಿರ್ಬಂಧಿಸಲಾಗಿದೆ. ಆದರೆ ಪುಸ್ತಕಗಳ ಎರವಲು ವ್ಯವಸ್ಥೆ ಪ್ರತಿ ನಿತ್ಯವೂ ಬೆಳಿಗ್ಗೆ 10 ಗಂಟೆಯಿಂದ ಸಂಜೆ 5.30ರವರೆಗೆ ಇರುತ್ತದೆ. ಈ ಅವಕಾಶವನ್ನು ಸದುಪಯೋಗ ಪಡಿಸಿಕೊಳ್ಳಬಹುದು ಎಂದರು.
 ಚಿತ್ರದುರ್ಗ ಸಾರ್ವಜನಿಕ ಓದುಗರಿಗೆ ಡಿಜಿಟಲ್ ಗ್ರಂಥಾಲಯದ ವ್ಯವಸ್ಥೆ ಇರುತ್ತದೆ. ಡಿಜಿಟಲ್ ಗ್ರಂಥಾಲಯವನ್ನು ತಮ್ಮ ಮೊಬೈಲ್‍ನಲ್ಲಿಯೇ ಪುಸ್ತಕಗಳನ್ನು ಉಚಿತವಾಗಿ ಇ-ಗ್ರಂಥಾಲಯ ನೊಂದಣಿಗೆ ತಿತಿತಿ.ಞಚಿಡಿಟಿಚಿಣಚಿಞಚಿಜigiಣಚಿಟಠಿubಟiಛಿಟibಡಿಚಿಡಿಥಿ.oಡಿg ವೆಬ್‍ತಾಣಕ್ಕೆ ಭೇಟಿ ನೀಡಿ ಮೊಬೈಲ್ ಸಂಖ್ಯೆ, ಇಮೇಲ್ ಐಡಿ ನೀಡಿದರೆ ಸಾಕು ಲಕ್ಷಾಂತರ ಪುಸ್ತಕಗಳನ್ನು ಕುಳಿತ ಸ್ಥಳದಿಂದಲೇ ಓದಬಹುದಾಗಿದೆ. ಜಿಲ್ಲೆಯಲ್ಲಿ ಏಪ್ರಿಲ್ 22ಕ್ಕೆ 44906 ಸದಸ್ಯತ್ವ ಹೊಂದಿದ್ದಾರೆ. ಇನ್ನೂ ಹೆಚ್ಚಿನ ಸಂಖ್ಯೆಯಲ್ಲಿ ನೊಂದಣಿ ಮಾಡಿಕೊಂಡು ಸಾರ್ವಜನಿಕ ಓದುಗರು ಓದಬಹುದಾಗಿದೆ ಎಂದು ಹೇಳಿದರು.
ಈ ಸಂದರ್ಭದಲ್ಲಿ ಸಾರ್ವಜನಿಕ ಗ್ರಂಥಾಲಯ ಇಲಾಖೆ ಸಿಬ್ಬಂದಿಗಳಾದ ಬಿ. ಮೋಹನ್‍ದಾಸ್, ಎಂ.ಎಂ.ಬಾರಕೇರ್, ಫಕೀರ್ ಸಾಬ್ ಆರ್ ಹೆಬ್ಬಳ್ಳಿ, ಕೆ. ಗೋಪಾಲ್,ಎನ್. ಸುನಿಲ್‍ಕುಮಾರ್, ಎಸ್.ಬಿ.ಪಾಟೀಲ್, ಟಿ. ರಾಘವೇಂದ್ರ ಸ್ವಾಮಿ ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.
ಫೋಟೊ ವಿವರ: ಚಿತ್ರದುರ್ಗದ ಕೃಷ್ಣರಾಜೇಂದ್ರ ಜಿಲ್ಲಾ ಕೇಂದ್ರ ಗ್ರಂಥಾಲಯದಲ್ಲಿ ಶುಕ್ರವಾರ ವಿಶ್ವ ಪುಸ್ತಕ ಹಾಗೂ ಕೃತಿ ಸೌಮ್ಯ ದಿನಾಚರಣೆಯನ್ನು ಸರಳವಾಗಿ ಆಚರಿಸಲಾಯಿತು. ಮುಖ್ಯ ಗ್ರಂಥಾಲಯಾಧಿಕಾರಿಗಳಾದ ಪಿ.ಆರ್.ತಿಪ್ಪೇಸ್ವಾಮಿ ಅವರು ವಿಲಿಯಂ ಷೆಕ್ಸ್‍ಪೀಯರ್ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಿದರು.