ಪುಸ್ತಕಗಳನ್ನು ಓದುವ ಅವ್ಯಾಸ ಬೆಳೆಸಿಕೊಳ್ಳಿ

ಹಗರಿಬೊಮ್ಮನಹಳ್ಳಿ:ಏ.03 ಯಾವುದೇ ಪುಸ್ತಕಗಳನ್ನು ಕೈಗೆತ್ತಿಕೊಳ್ಳುವಾಗ ಸ್ವಚ್ಛ ಮನಸ್ಸಿನಿಂದ ಕೈಗೆತ್ತಿಕೊಂಡು ಓದಿದಲ್ಲಿ ಪುಸ್ತಕದಲ್ಲಿರುವ ವಿಷಯ ವಸ್ತುವಿನೊಂದಿಗೆ ಲೀನವಾಗಲು ಸಾಧ್ಯವೆಂದು ನಂದಿಪುರದ ಮಠದ ಮಹೇಶ್ವರ ಸ್ವಾಮೀಜಿ ಅಭಿಪ್ರಾಯ ವ್ಯಕ್ತಪಡಿಸಿದರು.
ಪಟ್ಟಣದ ಗುರುಭವನದಲ್ಲಿ ಹಮ್ಮಿಕೊಂಡಿದ್ದ ಸಾಹಿತಿ ಹುರುಕಡ್ಲಿ ಶಿವಕುಮಾರ ಸಂಪಾದಕತ್ವದಲ್ಲಿ ಹೊರಬಂದ, ಮಕ್ಕಳಮೆಷ್ಟ್ರು ಪುಸ್ತಕ ಬಿಡುಗಡೆ ಸಂದರ್ಭದಲ್ಲಿ ಸಾನ್ನಿಧ್ಯವಹಿಸಿ ಅವರು ಮಾತನಾಡಿದರು. ಶಿಕ್ಷಣ ವೃತ್ತಿಯೊಂದು ಪವಿತ್ರವಾದ ವೃತ್ತಿಯಾಗಿದೆ. ದೇಶದ ಸತ್ಪ್ರಜೆಗಳನ್ನಾಗಿ ರೂಪಿಸುವ ಹೊಣೆ ಶಿಕ್ಷಕರದಾಗಿರುತ್ತದೆ. ಶಿಕ್ಷಕನೂ ತನ್ನ ಕರ್ತವ್ಯವನ್ನು ಸರಿಯಾಗಿ ಪಾಲಿಸಬೇಕು. ಸಮಾಜಕ್ಕೆ ಆದರ್ಶರಾಗಬೇಕು ಎಂದರು.
ಸಾರ್ವಜನಿಕ ಶಿಕ್ಷಣ ಇಲಾಖೆಯ ಉಪನಿರ್ದೇಶಕರಾದ ಸಿ.ರಾಮಪ್ಪ ಕಾರ್ಯಕ್ರಮ ಉದ್ಘಾಟಿಸಿ, ರೆಡ್ಡಿನಾಯ್ಕರಂತಹ ಶಿಕ್ಷಕರನ್ನು ಕುರಿತು ಪುಸ್ತಕ ಪ್ರಕಟವಾಗಿರುವುದು ಸಂತೋಷ, ಶಿಕ್ಷಕರಾದವರು ಓದುವ, ಬರೆಯುವ, ಹಾಡುವ ಹಾಗೂ ಸಾಂಸ್ಕೃತಿಕ ಚಟುವಟಿಕೆಗಳಲ್ಲಿ ಭಾಗಿಯಾಗಬೇಕು. ಅಂದಾಗ ಮಾತ್ರ ವಿದ್ಯಾರ್ಥಿಗಳಿಗೆ ಏನನ್ನಾದರೂ ಕಲಿಸಿಕೊಡಲು ಸಾಧ್ಯವೆಂದರು.
ಸಾಹಿತಿ ಹುರುಕಡ್ಲಿ ಶಿವಕುಮಾರ್ ಪ್ರಾಸ್ತಾವಿಕವಾಗಿ ಮಾತನಾಡಿ, ವಿದ್ಯಾರ್ಥಿಗಳ ಪ್ರೀತಿ ಅಂದಿನಿಂದಲೂ ಇಂದಿನವರೆಗೂ ಮುಂದುವರೆದಿದ್ದು ರೆಡ್ಡಿನಾಯ್ಕರ ಮೂವತ್ತು ವಿದ್ಯಾರ್ಥಿಗಳ ಬರಹಗಳೇ ಈ ಪುಸ್ತಕದಲ್ಲಿ ಪ್ರತಿಧ್ವನಿಸುತ್ತಿವೆ ಎಂದರು.
ಬಂಜಾರ ಗುರುಪೀಠದ ಸರ್ದಾರ್ ಸೇವಾಲಾಲ್ ಸ್ವಾಮೀಜಿ, ರಾಜ್ಯ ರೈತ ಸಂಘದ ರಾಜ್ಯ ಉಪಾಧ್ಯಕ್ಷ ಜೆ.ಎಂ.ವೀರಸಂಗಯ್ಯ. ಸಂಪನ್ಮೂಲ ವ್ಯಕ್ತಿಯಾದ ಹುಸೇನ್ ಶರೀಫ್, ಬಿಇಒ ಶೇಖರಪ್ಪ ಹೊರಪೇಟೆ, ಪ್ರಾಥಮಿಕ ಶಿಕ್ಷಕರ ಸಂಘದ ಜಿಲ್ಲಾ ಅಧ್ಯಕ್ಷ ಸಿ.ನಿಂಗಪ್ಪ, ಜಿ.ಪಂ.ಮಾಜಿ ಸದಸ್ಯ ಅಕ್ಕಿ ತೋಟೇಶ, ಬಂಜಾರ ಸಂಘದ ತಾಲೂಕು ಅಧ್ಯಕ್ಷ ಚಂದ್ರನಾಯ್ಕ ಮಾತನಾಡಿದರು. ಪುಸ್ತಕ ಸಮಿತಿಯ ಖಜಾಂಚಿ ಜಿ.ಲಕ್ಷ್ಮಿಪತಿ, ಹಿರಿಯ ಸಾಹಿತಿ ಮೇಟಿ ಕೊಟ್ರಪ್ಪ, ಬಿಯೂಟ ನಿರ್ದೇಶಕ ಎಲ್.ಡಿ.ರವಿನಾಯ್ಕ, ಕಸಾಪ ತಾಲೂಕು ಅಧ್ಯಕ್ಷ ಸಿ.ಶಿವಾಂದ, ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ತಾಲೂಕು ಅಧ್ಯಕ್ಷ ಎಚ್.ಲೋಕಪ್ಪ, ಕಸಾಪ ಜಿಲ್ಲಾ ಗೌರವಾಧ್ಯಕ್ಷ ಎಂ.ಪಿ.ಎಂ.ಮಂಜುನಾಥ, ನೌಲಿ ರಮೇಶ, ಸಿ.ಮೆಹಬೂಬ್, ಗುರುಶಾಂತಯ್ಯ, ಅಂಜಿನಪ್ಪ, ಅಶ್ವಿನಿ ಇತರರು ಉಪಸ್ಥಿತರಿದ್ದರು. ಶಿಕ್ಷಕರಾದ ಎಸ್.ಕೊಟ್ರೇಶ, ಸೋಮನಗೌಡ, ಬಿ.ಕೊಟ್ರಪ್ಪ ಕಾರ್ಯಕ್ರಮ ನಿರ್ವಹಿಸಿದರು.