ಪುಷ್ಪ ನೀಡಿ ವಿದ್ಯಾರ್ಥಿಗಳಿಗೆ ಸ್ವಾಗತ

ಹುಬ್ಬಳ್ಳಿ,ಜ1: ಇಂದಿನಿಂದ ಶಾಲಾ ತರಗತಿಗಳು ಪ್ರಾರಂಭವಾದ ಹಿನ್ನೆಲೆಯಲ್ಲಿ ನಗರದ ಹಳೇಹುಬ್ಬಳ್ಳಿ ಬಾಣತಿಕಟ್ಟಾ ಮೆಹಬೂಬ ನಗರದ ಸರಕಾರಿ ಉರ್ದು ಶಾಲೆಯಲ್ಲಿ ವಿದ್ಯಾರ್ಥಿಗಳನ್ನು ಸ್ವಾಗತ ಕೋರಲಾಯಿತು.
ಪಾಲಿಕೆ ಹಿರಿಯ ಸದಸ್ಯ ಅಲ್ತಾಫನವಾಜ್ ಎಂ.ಕಿತ್ತೂರ ಶಾಲೆಗೆ ಆಗಮಿಸಿ ವಿದ್ಯಾರ್ಥಿಗಳಿಗೆ ಪುಷ್ಪ ನೀಡಿ ಸ್ವಾಗತ ಕೋರಿದರು.
ಇದೇ ಸಂದರ್ಭದಲ್ಲಿ ಮಾತನಾಡಿದ ಅವರು, ಹೊಸ ವರ್ಷಕ್ಕೆ ಶಾಲೆ ಪ್ರಾರಂಭವಾಗಿದೆ. ಎಲ್ಲ ವಿದ್ಯಾರ್ಥಿಗಳು ಉತ್ತಮವಾಗಿ ವಿದ್ಯಾಭ್ಯಾಸದಲ್ಲಿ ತೊಡಗಿಕೊಳ್ಳಬೇಕೆಂದು ಕರೆ ನೀಡಿದರು.
ಪ್ರಾಚಾರ್ಯ ಶ್ರೀಮತಿ ಮಕಾದಾರ, ಶಿಕ್ಷಕರಾದ ಎಮ್.ಎ.ಬಾಗಬಾನ, ಹೈದರ ಕಿತ್ತೂರ, ಫಕ್ರುದ್ದೀನ್ ಕೆ, ನೂರಹ್ಮದ್ ಪಿ, ದಾದಾಪೀರ ಜಮಖಾನೆ, ಶಮೀನಾ ಬಾನು, ಇನಾಮದಿ, ಮೊಹಮ್ಮದ ಆದಿಲ್ ಮುಂತಾದವರು ಉಪಸ್ಥಿತರಿದ್ದರು.