ಪುಷ್ಪ ಕೃಷಿ ರೈತನಿಗೆ ಪುಷ್ಠಿ ನೀಡಿದ ಆದಾಯದ

ಮಾರೆಪ್ಪ ನಾಯಕ
ಸಿರುಗುಪ್ಪ, ನ.30 : ಕೃಷಿ ಎಂದರೇ ಇಲ್ಲಿ ಬರೀ ಭತ್ತ ಎಂಬ ಮನೋಭಾವ ಹೆಚ್ಚು, ಆದರೆ ತಾಲೂಕಿನ ದೇಶನೂರು ಗ್ರಾಮದ ಹೆಚ್.ವೀರೇಶ ತಮ್ಮ ಅರ್ಧ ಎಕರೆ ಸಾಗುವಳಿ ಭೂಮಿಯಲ್ಲಿ ಪುಷ್ಪ ಕೃಷಿ ಮಾಡಿ ಕೈ ತುಂಬ ಆದಾಯ ಪಡೆದು ಇತರೆ ರೈತರಿಗೆ ಮಾದರಿಯಾಗಿದ್ದಾರೆ.
ನಮ್ಮ ತಾಲೂಕಿನಲ್ಲಿ ಮೂರು ಭಾಗ ನೀರಾವರಿ, ಒಂದು ಭಾಗ ಮಳೆ ಆಶ್ರೀತ ಕೃಷಿದ್ದು, ಅತಿ ಹೆಚ್ಚು ನೀರಾವರಿ ಸೌಲಭ್ಯ ಇರುವುದರಿಂದ ಹೆಚ್ಚಿನ ಪ್ರಮಾಣದಲ್ಲಿ ಭತ್ತವನ್ನು ಬೆಳೆದೆ ಭತ್ತದ ನಾಡು ಎಂದು ಪ್ರಸಿದ್ದಿವಾಗಿದೆ, ಭತ್ತದ ಬೆಳೆಯು ವರ್ಷದಲ್ಲಿ ಎರಡು ಬಾರಿ ಇಳುವರಿ ಪಡೆದುಕೊಳ್ಳಬಹುದು, ನಿತ್ಯ ಆದಾಯ ಬರುವ ಬೆಳೆಯ ಕೃಷಿ ಮಾಡುವ ಉದ್ದೇಶದಿಂದ ದೇಶನೂರು ವೀರೇಶ ಭತ್ತ ಬೆಳೆಯುವ ಅರ್ಧ ಎಕರೆ ಜಮೀನಿನಲ್ಲಿ ಹೂವಿನ ಕೃಷಿ ಕಾಕಡ ಮಲ್ಲಿಯೊಂದಿಗೆ ಆರಂಭಿಸಿ ಬಹುಬೆಳೆಗಳನ್ನು ಬೆಳೆಯುವ ಮೂಲಕ ನಿರಂತರ ಆದಾಯ ಹೆಚ್ಚಿಸಿಕೊಂಡಿದ್ದಾರೆ.
ಅರ್ಧ ಎಕರೆ ಜಮೀನಿನಲ್ಲಿ : 25ಸೇಂಟ್ಸ್ ಕಾಕಡ ಮಲ್ಲಿಗೆ 300 ಸಸಿಗಳನ್ನು ನಾಟಿ ಮೂಲಕ ಆರಂಭಿಸಿ, 10 ಸೇಂಟ್ಸ್‍ನಲ್ಲಿ ಹಳದಿ ಮತ್ತು ಬಿಳಿ ಪೂರ್ಣಿಮ ತಳಿಯ ಸೇವಂತಿ 100, ಬದುವಿನಲ್ಲಿ 10 ಬಾಳೆ ಸಸಿ ಮತ್ತು 20 ನುಗ್ಗೆ ಗಿಡಗಳು, ಗೇಣಸಿನ ಬಳ್ಳಿಯನ್ನು ಮಾಡಿದ್ದು ಸಾಲುಗಳ ಅಂತರದಲ್ಲಿ ಮನೆಗೆ ಬೇಕಾದ ಹಸಿರು ಮೇಣಸಿನಕಾಯಿ, ರಾಜೀಗಿರಿ ಪಲ್ಲೆ, ಮೂಲಂಗಿ, ಉದ್ದು, ಬೆಂಡೆಕಾಯಿ ಬೆಳಸಲಾಗುತ್ತದೆ, 5ಸೇಂಟ್ಸ್ ಜಾಗದಲ್ಲಿ ಎರಡು ಎಮ್ಮೆ, ಆಕಾಳು, ಕುರಿಳಿಗೆ ಬೇಕಾಗುವಷ್ಟು ಹಸಿ ಮೇವು, 10 ಸೇಂಟ್ಸ್‍ನಲ್ಲಿ ಕಬ್ಬು ನಾಟಿ ಮಾಡಿ, ಕಾಕಡ ಮಲ್ಲಿಗೆಯಲ್ಲಿ ಜನವರಿಯಿಂದ ಇಲ್ಲಿವರೆಗೂ 2.5 ಲಕ್ಷ ಆದಾಯ ಪಡೆದುಕೊಂಡಿದ್ದಾರೆ. 50ಸಾವಿರ ರೂ ಖರ್ಚು ಮಾಡಿದ್ದು 2ಲಕ್ಷ ರೂ ಲಾಭಗಳಿಸಿದ್ದಾರೆ, ಇನ್ನೂ 50ಸಾವಿರ ಲಾಭವನ್ನು ನೀರಿಕ್ಷಿಸಿದ್ದಾರೆ.
ಮಾರುಕಟ್ಟೆ : ಗ್ರಾಮಕ್ಕೆ ತಾಲೂಕು ಪ್ರದೇಶ ಹತ್ತಿರ ಇರುವುದರಿಂದ ನಗರದಲ್ಲಿ ಹೂವಿನ ವ್ಯಾಪಾರಸ್ಥರಿಗೆ ನೇರವಾಗಿ ಮಾರಟ ಮಾಡುವುದರಿಂದ ಮಾರುಕಟ್ಟೆ ಸಮಸ್ಯೆ ಇಲ್ಲ, ಇನ್ನೂ ಗ್ರಾಮದ ಹತ್ತಿರ ಐತಿಹಾಸಿಕ ದೇವಸ್ಥಾನ ಇರುವುರಿಂದ ಹೆಚ್ಚಿನ ಹೂವು ಮಾರಟವಾಗುತ್ತವೆ.
ಕೋಟ್ :
ಹೂವಿನ ಕೃಷಿ ಭತ್ತದ ಕೃಷಿಕ್ಕಿಂತ ತೀರಾ ಕಷ್ಟದ ಕೆಲಸವಲ್ಲ, ಆದರೆ ತುಂಬಸೂಕ್ಷ್ಮವಾಗಿ ಗಿಡ, ಹೂವುಗಳನ್ನು ಆರೈಕೆ ಮಾಡಬೇಕು, ವೈಫಲ್ಯದಿಂದ ಕಂಗೇಡದೆ ಮುನ್ನುಗ್ಗಿದರೆ ನಿಶ್ಚಿತ ಆದಾಯ ಖಚಿತವಾಗುತ್ತದೆಂಬ ಸತ್ಯವನ್ನು ಕೃಷಿಯಲ್ಲಿ ಕಂಡುಕೊಂಡಿದ್ದೆವೆ, ನಮಗೆ ಭತ್ತ ಮತ್ತು ಕಬ್ಬಿನ ಕೃಷಿ ಬಿಟ್ಟರೇ ಬೇರೆ ಕೃಷಿ ಪದ್ದತಿಗಳು ಇಲ್ಲ, ಅತಿವೃಷ್ಠಿ, ಅನಾವೃಷ್ಠಿ, ಬೆಲೆಗಳ ಏರಿಳಿತದಿಂದ ಕಂಗೇಟ್ಟು ಆದಾಯದಲ್ಲಿ ಲಾಭವಿಲ್ಲದೆ ಮತ್ತೆ ಅದೇ ಕೃಷಿಯನ್ನು ಮಾಡುತ್ತಿದ್ದವೆ, ಕೃಷಿಯಲ್ಲಿ ನಿರಂತರ ಆದಾಯ ಸಾಧಿಸಬೇಕೆಂಬ ಛಲದಿಂದ ಹೂವಿನ ಕೃಷಿಯ ಪ್ರೇರಣೆಯಿಂದ ಅರ್ದ ಎಕರೆ ಜಮೀನಿನಲ್ಲಿ ಕಾಕಡ ಮಲ್ಲಿಗೆ, ಸೇವಂತಿಗೆ, ಕಬ್ಬು, ಬಾಳೆ ಮನೆಗೆಬೇಕಾದ ವಿವಿಧ ಪಲ್ಲೆಗಳನ್ನು ಹಾಕಿ ಮನೆಯಲ್ಲಿ ತರಕಾರಿಯ ಖರ್ಚು ಕಡಿಮೆ ಮಾಡಿಕೊಂಡು, ಜಮೀನಿನಲ್ಲಿ 50ಸಾವಿರ ಖರ್ಚ ತೆಗೆದು 2ಲಕ್ಷ ರೂ ಲಾಭಗಳಿಸಿ, ಇನ್ನೂ 50ಸಾವಿರ ಲಾಭ ಬರುವ ನೀರಿಕ್ಷೆಯಲ್ಲಿ ಉತ್ತಮ ಆದಾಯ ಕಂಡುಕೊಂಡಿದ್ದೆನೆ.
ಹೆಚ್.ವೀರೇಶ, ಪ್ರಗತಿಪರ ರೈತ ದೇಶನೂರು ಗ್ರಾಮ, ಸಿರುಗುಪ್ಪ ತಾಲೂಕು.
ನೀರಾವರಿ ಪ್ರದೇಶದಲ್ಲಿ ಹೆಚ್ಚಿನ ಜಮೀನು ಹೊಂದಿದ ಪ್ರಗತಿಪರ ರೈತರು ತಮ್ಮ ಜಮೀನಿನ ಒಂದು ಭಾಗದಲ್ಲಿ ಭತ್ತಕ್ಕೆ ಪರ್ಯಾಯವಾಗಿ ಬಹು ಬೆಳೆಗಳ ಕೃಷಿ ಪದ್ದತಿಯನ್ನು ಅಳವಡಿಸಿಕೊಂಡರೆ ವಾತಾವರಣದಲ್ಲಿ ಏರುಪೇರು ಆಗುವುದರಿಂದ  ಒಂದು ಬೆಳೆಯಲ್ಲಿ ಕಡಿಮೆ ಲಾಭ ಪಡೆದರೆ ಮತ್ತೊಂದು ಬೆಳೆಯಲ್ಲಿ ಅಧಿಕಾ ಲಾಭಗಳಿಸಲು ಸಾಧ್ಯವಾಗುತ್ತದೆ.
ಡಾ.ಎಂ.ಎ.ಬಸವಣ್ಣೆಪ್ಪ, ಮುಖ್ಯಸ್ಥರು, ಕೃಷಿ ಸಂಶೋಧನ ಕೇಂದ್ರ, ಸಿರುಗುಪ್ಪ.
ಅತಿ ಸಣ್ಣ ರೈತರು ಅತಿ ಕಡಿಮೆ ಭೂಮಿನಲ್ಲಿ ಒಂದೇ ಬೆಳೆಗೆ ಅವಲಂಬಿತವಾಗದೆ ಬಹುಬೆಳೆ ಪದ್ದತಿಯನ್ನು ಅನುಸರಿಸಿಕೊಂಡು ಆರ್ಥಿಕವಾಗಿ ಹೆಚ್ಚು ಆದಾಯ ಗಳಿಸಬಹುದು ಎಂಬುದಕ್ಕೆ ದೇಶನೂರು ಗ್ರಾಮದ ಹೆಚ್.ವೀರೇಶ ಇತರೆ ರೈತರಿಗೆ ಮಾದರಿಯಗಿದ್ದಾರೆ, ಇತರೆ ರೈತರು ಬಹುಬೆಳೆ ಪದ್ದತಿಯನ್ನು ಅನುಸರಿಸಿಕೊಂಡು ಆರ್ಥಿಕವಾಗಿ ಸದೃಢರಾಗಲು ಸಾಧ್ಯ.
ಬಿ.ವಿಶ್ವನಾಥ, ಹಿರಿಯ ಸಹಾಯಕ ತೋಟಗಾರಿಕೆ ನಿರ್ದೇಕರು, ಸಿರುಗುಪ್ಪ.

Attachments area