ಪುಷ್ಕರ ಮೇಳ ಜಲಾಶಯದಿಂದ ತುಂಗಭದ್ರ ನದಿಗೆ ನೀರು

ಬಳ್ಳಾರಿ ನ 20 : ಇಂದಿನಿಂದ ಆರಂಭವಾಗಿರುವ ಈ ವರ್ಷದ ಪುಷ್ಕರದ ಅಂಗವಾಗಿ ತುಂಗಭದ್ರ ನದಿಗೆ ಜಲಾಶಯದಿಂದ ಮೂರು ಸಾವಿರ ಕ್ಯೂಸೆಕ್ ನೀರನ್ನು ಹರಿಬಿಡಲಾಗಿದೆಂದು ತುಂಗಭದ್ರ ಮಂಡಳಿ ಅಧಿಕಾರಿಗಳು ತಿಳಿಸಿದ್ದಾರೆ.
ಹನ್ನೆರಡು ವರ್ಷಕ್ಕೆ ಒಮ್ಮೆ ದೇಶದ ಒಂದೊಂದು‌ ನದಿಯಲ್ಲಿ ಪುಷ್ಕರ ಮೇಳ ನಡೆಸುತ್ತಾ ಬರುತ್ತಿದೆ.
ಕಳೆದ 2008 ರಲ್ಲಿ ತುಂಗಭದ್ರ ನದಿಯಲ್ಲಿ ನಡೆದಿತ್ತು ಮತ್ತೆ ಹನ್ನೆರಡ ವರ್ಷಗಳ ‌ನಂತರ ಈ ವರ್ಷ ಇಂದಿನಿಂದ ಹಮ್ಮಿಕೊಂಡಿದೆ.
ಪುಷ್ಕರದ ಸಂದರ್ಭದಲ್ಲಿ‌ ಆ ನದಿಯಲ್ಲಿ ಸ್ನಾನ ‌ಮಾಡಿದರೆ ಪುಣ್ಯ ಬರುತ್ತದೆಂಬ ನಂಬಿಕೆ ಇದೆ.
ಪುಷ್ಕರದ ಹಿನ್ನಲೆಯಲ್ಲಿ ಜಿಲ್ಲೆಯ ಹಂಪಿ, ಕೆಂಚನಗುಡ್ಡ ಮೊದಲಾದ ಕಡೆ ನದಿ ಸ್ನಾನ‌ಮಾಡಲು ಬರುವ ಜನತೆಗೆ ಜಿಲ್ಲಾಡಳಿತ ತಕ್ಕ ವ್ಯವಸ್ಥೆ ಮಾಡಿದೆ. ಮಂತ್ರಾಲಯದಲ್ಲಿ ಹೆಚ್ಚಿನ ಜನ ಪಾಲ್ಗೊಳ್ಳವ ಸಾಧ್ಯತೆ ಇದೆ.
ಕಳೆದ ಬಾರಿ‌ ಜಿಲ್ಲೆಯವರೇ ಆದ ಮಾಜಿ ಸಚಿವ ಜನಾರ್ದನ ರೆಡ್ಡಿ ಅವರು ಜಿಲ್ಲಾ ಉಸ್ತುವಾರಿ ಮತ್ತು ಪ್ರವಾಸೋದ್ಯಮ ಸಚಿವರಾಗಿದ್ದರು. ಅದಕ್ಕಾಗಿ‌ ಅವರು‌ ಜಿಲ್ಲಾಡಳಿತದಿಂದ ಹಂಪಿಯ ಪುರಂದರ ಮಂಟಪದ ಬಳಿ ವಿಶೇಷ ವ್ಯವಸ್ಥೆ ಮಾಡಿ. ಪುಷ್ಕರದ ಕಾರ್ಯಕ್ರಮಗಳಿಗೆ ಚಾಲನೆ ನೀಡಿದ್ದರು.
ನಾಡಿನ ‌ಜನ ಹಂಪಿಗೆ ಆಗಮಿಸಲು ‌ಕೋರಿದ್ದನ್ನು ಸ್ಮರಿಸಬಹುದು.