ಪುಲಿಗೆರೆ ಪೂರ್ಣಿಮೆ ಆಚರಣೆ

ಲಕ್ಷ್ಮೇಶ್ವರ, ಜು 15: ಪಟ್ಟಣದ ಶ್ರೀ ಸೋಮೇಶ್ವರ ದೇವಸ್ಥಾನದಲ್ಲಿ ಗುರುಪೂರ್ಣಿಮೆಯ ದಿನ “ಪುಲಿಗೆರೆ ಪೂರ್ಣಿಮೆ”ಯನ್ನು ಆಚರಿಸಲಾಯಿತು.
ಕಾರ್ಯಕ್ರಮವನ್ನು ಸಸಿಗೆ ನೀರೆರೆಯುವ ಮೂಲಕ ಉದ್ಘಾಟಿಸಿದ ಕಮಲ, ವೆಂಕಪ್ಪ ಎಂ. ಅಗಡಿ ಇಂಜಿನಿಯರಿಂಗ್ ಕಾಲೇಜನ ಪ್ರಾಚಾರ್ಯರಾದ ಉದಯ ಹಂಪಣ್ಣನವರು ಇತಿಹಾಸ ಪ್ರಸಿದ್ಧವಾದ ಪುಲಿಗೆರೆ ತನ್ನದೇ ಆದ ಐತಿಹಾಸಿಕ ಪರಂಪರೆ, ಸಂಸ್ಕೃತಿಗಳನ್ನು ಹೊಂದಿದ್ದು, ಆದಿಕವಿ ಪಂಪನ ನೆಲೆವೀಡಾದ ಇಲ್ಲಿ ಸಹಜವಾಗಿ ಸಾಹಿತ್ಯದ ಬೆಳವಣಿಗೆ ಆಗುತ್ತಿದೆ.
ಕನ್ನಡ ನಾಡಿಗೆ ನೂತನವಾದ ಭಾಷೆ ನೀಡಿದ ಹೆಮ್ಮೆ ಲಕ್ಷ್ಮೇಶ್ವರಕ್ಕಿದೆ. ಇಲ್ಲಿನ ಪ್ರತಿಯೊಂದು ದೇವಸ್ಥಾನಗಳು 1,200 ವರ್ಷಗಳ ಇತಿಹಾಸವನ್ನು ಸಾರಿ ಸಾರಿ ಹೇಳುತ್ತಿವೆ ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ಸೇವಾ ಟ್ರಸ್ಟ್‍ನ ಚಂಬಣ್ಣ ಬಾಳಿಕಾಯಿ, ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಈಶ್ವರ ಮೆಡ್ಲೇರಿ, ಎಪಿಎಂಸಿ ವರ್ತಕ ಸಂಘದ ಎಸ್. ಕೆ. ಕಾಳಪ್ಪನವರ, ಕೃಷ್ಣ ಕುಲಕರ್ಣಿ, ಮಾಲಾ ದುಂದರಗಿ, ಸುಮಾ ಚೋಟಗಲ್ ಮತ್ತಿತರರು ಇದ್ದರು.