ಪುಲಿಕೇಶಿನಗರ ಮತದಾರರಲ್ಲಿ ಅಖಂಡ ಶ್ರೀನಿವಾಸ ಮೂರ್ತಿ ಮನವಿ

ಬೆಂಗಳೂರು ಮೇ ೧- ಪುಲಿಕೇಶಿನಗರ ವಿಧಾನಸಭಾ ಕ್ಷೇತ್ರದ ಬಹುಜನ ಸಮಾಜ ಪಕ್ಷದ ಅಭ್ಯರ್ಥಿ ಅಖಂಡ ಶ್ರೀನಿವಾಸ ಮೂರ್ತಿ ಅವರು ತಮ್ಮ ಕ್ರಮಸಂಖ್ಯೆ ೧ ಎಂದು ನಮೂದಿಸಿ ಆನೆಯ ಚಿಹ್ನೆಗೆ ಮತ ನೀಡುವಂತೆ ಮನವಿ ಮಾಡಿದರು.

ಪುಲಿಕೇಶಿನಗರ ಬಿಎಸ್‌ಪಿ ಅಭ್ಯರ್ಥಿ ಅಖಂಡ ಶ್ರೀನಿವಾಸ ಮೂರ್ತಿರವರು ಮಾಜಿ ಪಾಲಿಕೆ ಸದಸ್ಯ ದಿ. ಏಳುಮಲೈ ಭಾವಚಿತ್ರಕ್ಕೆ ನಮನ ಸಲ್ಲಿಸಿದರು. ನಂತರ ಮನೆ ಮನೆಗೆ ತೆರಳಿ ಮತಯಾಚನೆ ಮಾಡಿದರು. ಬಿಎಸ್‌ಪಿ ಪಕ್ಷದ ಹಲವಾರು ಮುಖಂಡರು, ಕಾರ್ಯಕರ್ತರು ಭಾಗವಹಿಸಿದ್ದರು.