ಪುರ ಹಾಲು ಉತ್ಪಾದಕ ಸಹಕಾರ ಸಂಘ ಜೆ.ಡಿ.ಎಸ್ ವಶಕ್ಕೆ

ವಿಜಯಪುರ, ನ.೧೩-ಇಲ್ಲಿಗೆ ಸಮೀಪದ ಪುರ ಹಾಲು ಉತ್ಪಾದಕ ಸಹಕಾರ ಸಂಘಕ್ಕೆ ಮಂಗಳವಾರದಂದು ನಡೆದ ಚುನಾವಣೆಯಲ್ಲಿ ಜೆ.ಡಿ.ಎಸ್ ಬೆಂಬಲಿತ ಎಲ್ಲಾ ೧೦ ಅಭ್ಯರ್ಥಿಗಳು ಆಯ್ಕೆಯಾಗಿರುವರೆಂದು ಚುನಾವಣಾಧಿಕಾರಿ ಕವಿತ ತಿಳಿಸಿದರು.
ಇಬ್ಬರು ಅಭ್ಯರ್ಥಿಗಳು ಅವಿರೋಧವಾಗಿ ಆಯ್ಕೆಯಾಗಿದ್ದು, ಉಳಿದಂತೆ ೮ ಮಂದಿ ಜೆ.ಡಿ.ಎಸ್ ಬೆಂಬಲಿತ ಅಭ್ಯರ್ಥಿಗಳು ಮುಂದಿನ ೫ ವರ್ಷಗಳಿಗೆ ಡೇರಿಯ ನಿರ್ದೇಶಕರಾಗಿ ಆಯ್ಕೆಯಾಗಿರುವರು.
ದೊಡ್ಡ ಚೌಡಾರೆಡ್ಡಿ, ಸಿ.ನಾಗರಾಜ್, ಕೆ.ಬಾಬು, ಮಂಜುನಾಥ್, ಪಿ.ಮಂಜುನಾಥ್, ಮುನಿಯಪ್ಪ, ಗೌರಮ್ಮ, ನಾರಾಯಣಮ್ಮ, ಅವಿರೋಧವಾಗಿ ಮುನಿಯಪ್ಪ, ರಾಜಣ್ಣ ಆಯ್ಕೆಯಾದವರು.
ಗ್ರಾಮದ ಜೆ.ಡಿ.ಎಸ್ ಮುಖಂಡ ಕೃಷ್ಣ ಮಾತನಾಡಿ, ಉತ್ತಮ ಗುಣಮಟ್ಟದ ಹಾಲು ಪೂರೈಕೆಯಿಂದ ಡೇರಿಗಳು ಲಾಭದಾಯಕವಾಗಿ ನಡೆಯಲು ಸಾಧ್ಯವಾಗಲಿದ್ದು, ಮುಂದಿನ ದಿನಗಳಲ್ಲಿ ಡೇರಿಯ ನೂತನ ಕಟ್ಟಡ ಹಾಗೂ ಶುದ್ದ ಕುಡಿಯುವ ನೀರಿನ ಘಟಕಗಳನ್ನು ಶೀಘ್ರದಲ್ಲಿಯೇ ಉದ್ಘಾಟಿಸಲಾಗುವುದೆಂದು ತಿಳಿಸಿದರು. ಜೆ.ಡಿ.ಎಸ್ ಕಾರ್ಯಕರ್ತರು ಪಟಾಕಿಗಳನ್ನು ಸಿಡಿಸಿ, ಸಿಹಿ ಹಂಚುವ ಮೂಲಕ ವಿಜಯೋತ್ಸವ ಆಚರಿಸಿದರು.