ಪುರೋಹಿತ ಪ್ರಗತಿ ಸಂಘ ಉದ್ಘಾಟನೆ

ಕೋಲಾರ,ಜ,೨೧-ಯಾವುದೇ ಸಮುದಾಯವು ಸರಕಾರದ ಸೌಲಭ್ಯಗಳನ್ನು ಪಡೆಯಲು ಸಂಘಟಿತ ಹೋರಾಟ ಅನಿವಾರ್ಯವಾಗಿದ್ದು ನಿಮ್ಮ ಹೋರಾಟಕ್ಕೆ ನನ್ನ ಬೆಂಬಲವಿರುತ್ತದೆ ಎಂದು ಕೋಲಾರ ವಿಧಾನಸಭಾ ಕ್ಷೇತ್ರದ ಜೆಡಿಎಸ್ ಅಭ್ಯರ್ಥಿ ಸಿಎಂಆರ್ ಶ್ರೀನಾಥ್ ತಿಳಿಸಿದರು.
ನಗರದ ರಂಗಮಂದಿರದಲ್ಲಿ ವೀರಶೈವ ಅರ್ಚಕರ ಚಿನ್ನದನಾಡು ಕೋಲಾರ ಜಿಲ್ಲಾ ಪುರೋಹಿತರ ಪ್ರಗತಿ ಸಂಘದ ಉದ್ಘಾಟನಾ ಸಮಾರಂಭದಲ್ಲಿ ಮಾತನಾಡಿ, ರಾಜ್ಯದಲ್ಲಿ ಹಲವಾರು ದೇವಾಲಯಗಳು ಅಳುವಿನ ಅಂಚಿನಲ್ಲಿ ಇವೆ ದೇವಾಲಯಗಳಲ್ಲಿ ಪೂಜೆ ಸಲ್ಲಿಸುವ ನೀವುಗಳು ಮಾಹಿತಿ ಪಡೆದು, ನಿಮ್ಮಗಳ ಸಹಕಾರದಿಂದ ಧಾರ್ಮಿಕ ಇಲಾಖೆ ಹಾಗೂ ಪ್ರವಾಸೋದ್ಯಮ ಇಲಾಖೆಗಳು ದೇವಾಲಯಗಳ ಅಭಿವೃದ್ಧಿಗೆ ಗಮನ ಹರಿಸಬೇಕೆಂದು ಸಲಹೆ ನೀಡಿದರು.
ವೀರಶೈವ ಸಮುದಾಯ ಬಹುತೇಕ ಎಲ್ಲಾ ಕ್ಷೇತ್ರಗಳಲ್ಲಿ ಸಾಧನೆ ಮಾಡುತ್ತಿದ್ದು, ತಮ್ಮ ಪ್ರವೃತ್ತಿಯೊಂದಿಗೆ ಕೃಷಿಯಲ್ಲಿ ತೊಡಗಿರುವ ಹಾಗೂ ಎಲ್ಲಾ ಸಮುದಾಯಗಳ ಒಳಿತನ್ನು ಕೋರುವ, ಮಾರ್ಗದರ್ಶಕರಾಗಿರುವ ಅರ್ಚಕ ಮತ್ತು ಪುರೋಹಿತ ನಡೆಸುವವರಿಗೆ ಸರ್ಕಾರದ ಸೌಲಭ್ಯಗಳನ್ನು ಒದಗಿಸಬೇಕೆಂದು ಆಗ್ರಹಿಸಿದರು.
ಸಮುದಾಯ ಒಗ್ಗಟ್ಟಾಗಿ ಶಕ್ತಿಯುತವಾಗಿ ಬೆಳೆದಾಗ ಮಾತ್ರ ಶೈಕ್ಷಣಿಕವಾಗಿ, ಆರ್ಥಿಕವಾಗಿ, ರಾಜಕೀಯವಾಗಿ ಮುಂದುವರೆಯುಲು ಸಹಕಾರಿಯಾಗುವುದೆಂದರು.
ಶ್ರೀಮದ್ ಉಜ್ಜಯಿನಿ ಪೀಠ ಕರ್ನಾಟಕ ಮತ್ತು ಮಧ್ಯಪ್ರದೇಶದ ಶ್ರೀ ಜಗದ್ಗುರು ಸಿದ್ಧಲಿಂಗ ರಾಜದೇಶಿಕೇಂದ್ರ ಶಿವಾಚಾರ್ಯ ಮಹಾಸ್ವಾಮಿ, ಬೆಳ್ಳಾವಿ ಸಂಸ್ಥಾನ ಮಠದ ಶ್ರೀ ಪಟ್ಟದ ಮಹಂತ ಶಿವಾಚಾರ್ಯ ಸ್ವಾಮಿ, ನಾಗಲಾಪುರ ಸಂಸ್ಥಾನ ಮಠದ ಶ್ರೀ ಪಟ್ಟದ ಮಹಾಸ್ವಾಮಿ ತೇಜಶಲಿಂಗ ಶಿವಾಚಾರ್ಯ ಸ್ವಾಮಿ, ಸಂಘದ ಜಿಲ್ಲಾ ಗೌರವ ಅಧ್ಯಕ್ಷ ಶ್ರೀಧರ್, ಅಧ್ಯಕ್ಷ ವಿರಭದ್ರಯ್ಯ, ಪ್ರಧಾನ ಕಾರ್ಯದರ್ಶಿ ಎ.ಎಂ.ಚಂದ್ರಶೇಖರ್ ಇದ್ದರು.