ಪುರೈಸಲು ಹಸಿರು ಸೇನೆ ಮುಖಂಡರು ಒತ್ತಾಯ

ರೈತ ಸಂಪರ್ಕ ಕೇಂದ್ರಗಳಲ್ಲಿ ಹೆಸರು ಸೂರ್ಯಪಾನ
ಲಿಂಗಸುಗೂರು.ಜೂ.೦೯- ಲಿಂಗಸುಗೂರು ತಾಲೂಕಿನ ಬರುವ ಎಲ್ಲಾ ರೈತ ಸಂಪರ್ಕ ಕೇಂದ್ರಗಳಲ್ಲಿ ರೈತರಿಗೆ ಅನುಕೂಲವಾಗುವ ರೀತಿಯಲ್ಲಿ ರಸಗೊಬ್ಬರ ಮತ್ತು ಬಿಜಗಳು ಕೊರತೆಯಾಗದಂತೆ ಅಧಿಕಾರಿಗಳು ಮುಂದಾಗಬೇಕೆಂದು ಕರ್ನಾಟಕ ರಾಜ್ಯ ರೈತಸಂಘ ಹಾಗೂ ಹಸಿರು ಸೇನೆ ಮುಖಂಡರು ಸಾಹಾಯಕ ಆಯುಕ್ತರು ಕಚೇರಿ ತಹಶೀಲ್ದಾರ್ ಶಾಲಂ ಸಾಬ್ ಇವರ ಮುಖಾಂತರ ಸರ್ಕಾರಕ್ಕೆ ಒತ್ತಾಯಿಸಿ ಮನವಿ ಮಾಡಿದರು.
ಕೆಕೆಆರ್‌ಡಿಬಿ ಭಾಗದ ರೈತರಿಗೆ ಸಜ್ಯ ಬೀಜ, ಸೂರ್ಯಪಾನ ಹೆಸರು ಹಾಗೂ ಭತ್ತದ ಬೆಳೆಗೆ ಸೂಕ್ತ ಸಮಯದಲ್ಲಿ ಬೀಜ ವಿತರಣೆ ಮಾಡಬೇಕು. ಈಗಾಗಲೇ ಸಾಕಷ್ಟು ಮಳೆ ಆಗುತ್ತದೆ ಇದರಿಂದಾಗಿ ರೈತರು ಬೆಳೆ ಬೆಳೆಯಲು ಎಲ್ಲಾ ಸರ್ಕಾರದ ನಿಯಮ ಪ್ರಕಾರ ಪ್ರತಿಯೊಬ್ಬ ರೈತರಿಗೆ ಬೀಜ ಪುರೈಕೆ ಮಾಡಲು ಅಧಿಕಾರಿಗಳಿಗೆ ಮೇಲಾಧಿಕಾರಿಗಳು ಸೂಚನೆ ನೀಡಬೇಕು ಮತ್ತು ರಸಗೊಬ್ಬರಗಳ ಪೂರೈಕೆ ಮಾಡಲು ಸಮಯ ಬದಲಾವಣೆ ಮಾಡಿ ರೈತರಹಿತ ಕಾಪಾಡಲು ಅಧಿಕಾರಿಗಳು ಮುಂದಾಗಬೇಕು ಎಂದು ಆಗ್ರಹಿಸಿದರು.
ಈ ಸಂದರ್ಭದಲ್ಲಿ ರೈತ ಸಂಘದ ಮುಖಂಡರಾದ ಮಲ್ಲನಗೌಡ ಪಾಟೀಲ, ರಾಂಪುರ ಅಮರೇಶ ವೀರಬದ್ರಪ್ಪ ಹಳ್ಳಿ, ಕ್ರಿಷ್ಣಪ್ಪ
ಶೆಟಪ್ಪ ಮುಳದಿನ್ನಿ ತಾಂಡಾ ಸೇರಿದಂತೆ ಇತರರು ಇದ್ದರು