ಪುರುಷ ಮಹಿಳೆ ಬೇಧಭಾವ ಸಲ್ಲದು: ಪ್ರೊ. ಕೆ.ಸಿ.ವೀರಣ್ಣ

ಬೀದರ: ಫೆ.12:ಪುರುಷ ಮಹಿಳೆ ಎಂಬ ಭೇದಭಾವ ಮಾಡುವುದು ಸರಿಯಲ್ಲ. ಹೋಲಿಕೆಯೂ ಸರಿಯಲ್ಲ. ಇಬ್ಬರೂ ಕೂಡಿ ಬಾಳಿದರೆ ಬದುಕು ಸ್ವರ್ಗಮಯವಾಗುತ್ತದೆ. ಮಹಿಳೆಗೆ ಒಂದಿಷ್ಟು ಪ್ರೇರಣೆ ನೀಡಿದರೆ ಮೇಲ್ಮಟ್ಟಕ್ಕೆ ಬೆಳೆಯುತ್ತಾಳೆ ಎಂದು ಕರ್ನಾಟಕ ಪಶುವೈದ್ಯಕೀಯ ಪಶು ಹಾಗೂ ಮೀನುಗಾರಿಕೆಗಳ ವಿಶ್ವವಿದ್ಯಾಲಯದ ಕುಲಪತಿಗಳಾದ ಪೆÇ್ರ. ಕೆ.ಸಿ.ವೀರಣ್ಣ ತಿಳಿಸಿದರು.
ಅಕ್ಕಮಹಾದೇವಿ ಮಹಿಳಾ ಮಂಡಳ ನಾವದಗೇರಿ ಬೀದರ, ಸಭಾಂಗಣ ಉದ್ಘಾಟನೆ ಮತ್ತು ಸಂಸ್ಕøತಿ ಮಂತ್ರಾಲಯ ನವದೆಹಲಿ ಸಹಕಾರದಲ್ಲಿ ರಾಜಾರಾಮ ಮೋಹನರಾಯ ಅವರ 250 ನೇ ಜನ್ಮ ವಾರ್ಷಿಕೋತ್ಸವದ ಪ್ರಯುಕ್ತ ಮಹಿಳಾ ಸಾಧಕಿಯರಿಗೆ ಅಕ್ಕಮಹಾದೇವಿ ರಾಷ್ಟ್ರೀಯ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಮುಖ್ಯ ಅತಿಥಿಗಳಾಗಿ ಮಾತನಾಡಿದರು.
ಸಭಾಂಗಣ ಉದ್ಘಾಟಿಸಿದ ಕರ್ನಾಟಕ ಕೇಂದ್ರೀಯ ವಿಶ್ವವಿದ್ಯಾಲಯದ ಕುಲಪತಿಗಳಾದ ಪೆÇ್ರ. ಬಟ್ಟು ಸತ್ಯನಾರಾಯಣ ಮಾತನಾಡಿ ರಾಜಾರಾಮ ಮೋಹನರಾಯ ಅವರು ಅಂದು ಸಮಾಜದಲ್ಲಿ ತಾಂಡವವಾಡುತಿದ್ದ ಸತಿ ಸಹಗಮನ ಪದ್ಧತಿಯನ್ನು ಹೋಗಲಾಡಿಸಿ ಮಹಿಳೆಯರನ್ನು ಸಮಾಜದ ಮುಖ್ಯ ವಾಹಿನಿಗೆ ತಂದಿದ್ದರು. ಅಂಧಶ್ರದ್ಧೆ, ಮೂಢನಂಬಿಕೆಯನ್ನು ಹೋಗಲಾಡಿಸಿದ್ದರು. ಭಾರತೀಯ ಜನಪದ ಸಂಸ್ಕೃತಿಯಲ್ಲಿ ಮಹಿಳೆ ಮಹತ್ವದ ಪಾತ್ರ ವಹಿಸುತ್ತಾಳೆ. ಎಲ್ಲಿ ಮಹಿಳೆಯರನ್ನು ಪೂಜಿಸಲಾಗುತ್ತದೆಯೋ ಅಲ್ಲಿ ದೇವತೆ ವಾಸವಾಗುವುದರ ಜೊತೆಗೆ ಅಂತಹ ಮನೆ ಉತ್ತರೋತ್ತರವಾಗಿ ಬೆಳೆಯುತ್ತದೆ. ಅಂತಹ ಹೆಣ್ಣುಮಕ್ಕಳನ್ನು ಗೌರವಿಸುವುದು ಪೂಜಿಸುವುದು ನಮ್ಮೆಲ್ಲರ ಪ್ರಥಮ ಆದ್ಯತೆಯಾಗಬೇಕು. ಒಂದು ಮಗು ಸಂಸ್ಕಾರವಂತರಾಗಿ ಬೆಳೆಯಲು ತಾಯಿಯೇ ಕಾರಣಳಾಗುತ್ತಾಳೆ. ಹೆಬ್ಬಾಳೆ ಕುಟುಂಬ ಇಂದು ಅಕ್ಕಮಹಾದೇವಿ ಮಹಿಳಾ ಮಂಡಳ ವತಿಯಿಂದ ಬೃಹತ್ ಸಭಾಂಗಣ ನಿರ್ಮಿಸಿ ಉತ್ತಮ ಕಾರ್ಯ ಮಾಡಿದ್ದಾರೆ ಎಂದು ಹೇಳಿದರು.
ರಾಷ್ಟ್ರೀಯ ಜನಪದ ಬುಡಕಟ್ಟು ಕಲಾ ಪರಿಷತ್ತಿನ ರಾಷ್ಟ್ರೀಯ ಅಧ್ಯಕ್ಷ ನಿರ್ಮಲ್ ವೈದ್ಯ ಮಾತನಾಡಿ ಹೊಟ್ಟೆಯಲ್ಲಿ ಹೆಣ್ಣಿದೆ ಎಂದು ಗೊತ್ತಾದಾಗ ಭ್ರೂಣಹತ್ಯೆ ಮಾಡುವರು. ಬರೀ ಗಂಡು ಜನಿಸಿದರೆ ಈ ಮನುಷ್ಯ ಜಾತಿಯೇ ಸರ್ವನಾಶವಾಗುತ್ತದೆ. ಮಗ ಮತ್ತು ಮಗಳಿಗೆ ಸರಿ ಸಮಾನತೆ ಇರಲಿ. ಗಂಡಿಗೆ ಸಿಗುವ ಎಲ್ಲಾ ಸೌಲಭ್ಯಗಳು ಹೆಣ್ಣಿಗೂ ಸಿಗಲಿ. ಗೃಹಲಕ್ಷ್ಮೀ ಎಂದು ಹೇಳುತ್ತಲೇ ಹೆಣ್ಣನ್ನು ಅಗೌರವದಿಂದ ನಡೆಸಿಕೊಳ್ಳದಿರಲಿ. ನಮ್ಮ ಮಗಳು ನಮ್ಮ ಹೆಮ್ಮೆ ಎಂಬ ಅಭಿಯಾನ ನಮ್ಮ ಮನೆಯಿಂದಲೇ ಆರಂಭವಾಗಲಿ ಎಂದು ಪ್ರತಿಪಾದಿಸಿದರು.
ಭಾಲ್ಕಿಯ ಪೂಜ್ಯ ಶ್ರೀ ಗುರುಬಸವ ಪಟ್ಟದ್ದೆವರು ದಿವ್ಯ ಸಾನಿಧ್ಯ ವಹಿಸಿದ್ದರು. ಮತ್ತು ಹರಳಯ್ಯ ಪೀಠದ ಡಾ. ಗಂಗಾಂಬಿಕಾ ಅಕ್ಕ ನೇತೃತ್ವ ವಹಿಸಿದ್ದರು. ಬೀದರ ವಿಶ್ವವಿದ್ಯಾಲಯದ ಕುಲಪತಿಗಳಾದ ಪೆÇ್ರ. ಬಿ.ಎಸ್.ಬಿರಾದಾರ ಮಾತನಾಡಿದರು.
ಪ್ರಸ್ತಾವಿಕ ಮಾತನಾಡಿದ ಅಕ್ಕಮಹಾದೇವಿ ಮಹಿಳಾ ಮಂಡಳ ಕಾರ್ಯದರ್ಶಿ ಡಾ. ಮಹಾದೇವಿ ಹೆಬ್ಬಾಳೆ ಮಾತನಾಡಿ ನಮ್ಮ ಅಜ್ಜಿ ಲಿಂ.ರತ್ನಮ್ಮ ಹೆಬ್ಬಾಳೆ ಸ್ಥಾಪಿಸಿದ ಅಕ್ಕಮಹಾದೇವಿ ಮಹಿಳಾ ಮಂಡಳ ಇಂದು ಮಹಿಳೆಯರ ಸಬಲೀಕರಣ ಹಾಗೂ ಆರ್ಥಿಕ ಅಭಿವೃದ್ಧಿಗೆ ಶ್ರಮಿಸುತ್ತಿದೆ. ಮಹಿಳಾ ಸಾಧಕಿಯರನ್ನು ಪೆÇ್ರೀತ್ಸಾಹಿಸುವ ನಿಟ್ಟಿನಲ್ಲಿ ವಿಶೇಷವಾಗಿ ಇಂದು ಆರು ಜನ ಮಹಿಳಾ ಸಾಧಕಿಯರನ್ನು ಗುರುತಿಸಿ ಪ್ರಶಸ್ತಿ ನೀಡಲಾಗುತ್ತಿದೆ. ಜೊತೆಗೆ ಮಹಿಳಾ ಕಲಾವಿದರನ್ನು ಗುರುತಿಸಿ ಅವರಿಗೆ ಜಿಲ್ಲಾ ಹಾಗೂ ರಾಜ್ಯಮಟ್ಟದಲ್ಲಿ ವೇದಿಕೆ ಒದಗಿಸುವ ಕಾರ್ಯ ಮಾಡಲಾಗುತ್ತಿದೆ ಎಂದರು.
ವೇದಿಕೆ ಮೇಲೆ ಬೀದರ ವಿ.ವಿ.ಯ ಕನ್ನಡ ನಿಕಾಯದ ಡೀನ್ ಡಾ. ಜಗನ್ನಾಥ ಹೆಬ್ಬಾಳೆ, ಕರ್ನಾಟಕ ಕೇಂದ್ರೀಯ ವಿವಿ ಕಲಬುರಗಿ ಅಧ್ಯಯನಾಂಗದ ನಿರ್ದೇಶಕ ಪೆÇ್ರ. ಬಸವರಾಜ ಡೊಣೂರ, ಜಿಲ್ಲಾ ಕೈಗಾರಿಕಾ ಕೇಂದ್ರದ ಜಂಟಿ ನಿರ್ದೇಶಕಿ ಸುರೇಖಾ ಮುನ್ನೋಳಿ, ಮಲ್ಲಮ್ಮ ಹೆಬ್ಬಾಳೆ, ಮಹಾನಂದ ಹೆಬ್ಬಾಳೆ ಉಪಸ್ಥಿತರಿದ್ದರು.
ಅಧ್ಯಕ್ಷತೆಯನ್ನು ಅಕ್ಕಮಹಾದೇವಿ ಮಹಿಳಾ ಮಂಡಳಿಯ ಅಧ್ಯಕ್ಷೆ ಡಾ. ನೀಲಗಂಗಾ ಹೆಬ್ಬಾಳೆ ವಹಿಸಿದ್ದರು.

ಅಕ್ಕಮಹಾದೇವಿ ರಾಷ್ಟ್ರೀಯ ಪ್ರಶಸ್ತಿ ಪ್ರದಾನ: ಡಾ. ರೇಷ್ಮಾ ಕೌರ್ ( ಶೈಕ್ಷಣಿಕ ಕ್ಷೇತ್ರ), ಡಾ. ಗುರಮ್ಮಾ ಸಿದ್ದಾರೆಡ್ಡಿ (ಸಮಾಜ ಮತ್ತು ಮಹಿಳಾ ಸಬಲೀಕರಣ), ಶಕುಂತಲಾ ಬೆಲ್ದಾಳೆ ( ಸಹಕಾರ), ಡಾ. ಪ್ರೇಮಾ ಸಿರ್ಸೆ (ಸಾಹಿತ್ಯ), ಪೆÇ್ರ. ಲೀಲಾವತಿ ಚಾಕೋತೆ (ಶಿಕ್ಷಣ), ಭಾರತಿ ವಸ್ತ್ರದ್ (ಸಾಹಿತ್ಯ ಸಂಸ್ಕೃತಿ) ಈ ಆರು ಜನ ಮಹಿಳೆಯರಿಗೆ ಅಕ್ಕಮಹಾದೇವಿ ರಾಷ್ಟ್ರೀಯ ಪ್ರಶಸ್ತಿ ನೀಡಿ ಗೌರವಿಸಲಾಯಿತು.
ರಾಷ್ಟ್ರೀಯ ಜನಪದ ಬುಡಕಟ್ಟು ಕಲಾ ಪರಿಷತ್ತಿನ ಕಾರ್ಯದರ್ಶಿ ಡಾ. ರಾಜಕುಮಾರ ಹೆಬ್ಬಾಳೆ ಸ್ವಾಗತಿಸಿದರು. ಡಾ. ಗೀತಾ ಪೆÇೀಸ್ತೆ, ಲಕ್ಷ್ಮೀ ಕುಂಬಾರ, ನಿರೂಪಿಸಿದರು. ಡಾ. ಸುನಿತಾ ಕೂಡ್ಲಿಕರ್, ಡಾ. ಮಹಾನಂದ ಮಡಕಿ, ಮಾನಾ ಸಂಗೀತಾ ಸಮನ್ವಯ ಮಾಡಿದರು. ನಿವೇದಿತಾ ಹೆಬ್ಬಾಳೆ ವಂದಿಸಿದರು. ಕಾರ್ಯಕ್ರಮದಲ್ಲಿ ಪ್ರಮುಖರಾದ ಡಾ. ವೈಜಿನಾಥ ಕಮಠಾಣೆ, ಸಂತೋಷ ತಾಳಂಪಳ್ಳಿ, ಎಸ್.ವಿ.ಕಲ್ಮಠ, ಮಲ್ಲಮ್ಮ ಸಂತಾಜಿ, ಪ್ರಕಾಶ ಕನ್ನಾಳೆ, ಶಿವಶರಣಪ್ಪ ಗಣೇಶಪುರ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.