ಪುರುಷನ ಸಭಲೀಕರಣವೂ ಮಹಿಳೆಯರಷ್ಟೇ ಅಗತ್ಯ:ಬುಳ್ಳಾ

ಕಲಬುರಗಿ:ನ.22:ಪುರುಷ ಪ್ರಧಾನ ಸಮಾಜ ಎಂದು ಮಾತನಾಡುತ್ತಲೇ ಪುರುಷ ತನ್ನ ಮೇಲೆ ತಾನೇ ಶೊಷಣೆ ಮಾಡಿಕೊಳ್ಳುತ್ತಿದ್ದಾನೆ. ಚಿಕ್ಕ ವಯಸ್ಸಿನಿಂದಲೇ ಆತನಿಗೆ ನೀಡಬೇಕಾಗಿರುವ ಜೀವನ ಶಿಕ್ಷಣ ಸಿಗುತ್ತಿಲ್ಲ. ಗಂಡ ಮಗನನ್ನು ತಿದ್ದುವ, ಸಂತೈಸುವ ಸರಿ ದಾರಿಯಲ್ಲಿ ನಡೆಸುವ ಜವಾಬ್ದಾರಿ ಮನೆಯಿಂದಲೇ ಅದು ಪಾಲಕರಿಂದಲೇ ಸಿಗುವಂತಾಗಬೇಕು ಎಂದು ನಿವೃತ್ತ ಕೃಷಿ ಇಲಾಖೆ ಅಧಿಕಾರಿಗಳಾದ ಶಿವಶರಣಪ್ಪ ಬುಳ್ಳಾ ನುಡಿದರು.
ಜೇವಗಿ ರಸ್ತೆಯ ಭರೂಕಾ ಆಸ್ಪತ್ರೆ ಹತಿರವಿರುವ ಶ್ರೀ ಶಿವಾನಂದ ಕಾಲೋನಿಯಲ್ಲಿ ವಚನೊತ್ಸವ ಪ್ರತಿಷ್ಠಾನ ಯುವ ಘಟಕದ ವತಿಯಿಂದ ಹಮ್ಮಿಕೊಂಡ “ವಿಶ್ವಪುರುಷರ ದಿನಾಚರಣೆ” ಕಾರ್ಯಕ್ರಮಕ್ಕೆ ಮುಖ್ಯ ಅತಿಥಿಗಳಾಗಿ ಆಗಮಿಸಿ ಮಕ್ಕಳಿಗೆ ಮಾಸ್ಕ್ ವಿತರಿಸಿ ಮಾತನಾಡಿದರು.
ವಚನೋತ್ಸವ ಪ್ರತಿಷ್ಠಾನ ಯುವ ಘಟಕದ ಅಧ್ಯಕ್ಷ ಶಿವರಾಜ ಅಂಡಗಿ ಅವರು ಪ್ರಾಸ್ತಾವಿಕವಾಗಿ ಮಾತನಾಡುತ್ತ “ಮಗಳಿಗಿರುವ ತಾಯಿಯಂತಹ ಗೆಳತಿ ಮಗನಿಗೆ ಇಲ್ಲ” ಎಂಬುವುದು ವಿಷಾಧನಿಯ ಎನ್ನುತ್ತ ಸಾಮಾನ್ಯವಾಗಿ ಒಂದು ಕುಟುಂಬದಲ್ಲಿ ಗಂಡು-ಹೆಣ್ಣು ಇಬ್ಬರ ಮಕ್ಕಳಲ್ಲಿ ಪಾಲಕರು ಸಂರಕ್ಷಣೆಯಲ್ಲಿ ಹೆಣ್ಣು ಮಗಳಿಗೆ ಆದ್ಯತೆ ನೀಡುತ್ತಿರುವುದು, ನೋಡುತ್ತಿದ್ದೇವೆ. ಗಂಡು ಮಕ್ಕಳಿಗೆ ಕೇಳಿದಷ್ಟು ಹಣ ಕೊಟ್ಟರೆ ಸಾಕು ಅವನು ಚೆನ್ನಾಗಿರುತ್ತಾನೆ ಎಂಬ ಭ್ರಮೆಯಲ್ಲಿರುವ ಪಾಲಕರಿಗೆ ನನ್ನೊಂದು ಮನವಿ ಏನೆಂದರೆ ಅವಶ್ಯಕತೆ ತಕ್ಕಂತೆ ಹಣ ಕೊಟ್ಟ ಅನಾವಶ್ಯಕತೆ ಬಗ್ಗೆ ತಿಳಿ ಹೇಳಿ ಸಂತೈಷಿಸಿ ಮೌಲ್ಯಯುತವಾದ ಗುಣಗಳನ್ನು ಅಳವಡಿಸಿಕೊಳ್ಳಲು ಗಂಡ ಮಕ್ಕಳಿಗೂ ಹೆಣ್ಣು ಮಕ್ಕಳಿನಷ್ಟೇ ಮಾನಸಿಕವಾಗಿ ಸದೃಢಗೊಳಿಸುವುದು ಇಂದಿನ ದಿನಗಳಲ್ಲಿ ಅತೀ ಅವಶ್ಯಕವಾಗಿರುವುದು ಏಕೆಂದರೆ ವಿಶೇಷವಾಗಿ ಕಾನ್ಸರ್ ಹಾಗು ಹಾರ್ಟಅಟ್ಯಾಕ್‍ನಂತಹ ಕಾಯಿಲೆಗಳು ಪುರುಷರಲ್ಲೇ ಹೆಚ್ಚು ಕಾಣಿಸಿಕೊಳ್ಳುತ್ತಿರುವುದು ಪುರುಷರ ಮಾನಸಿಕ ಸ್ಥಿತಿ ಕಾರಣ ಹಾಗು ಮಹಿಳೆರಿಗಿಂತ ಪುರುಷರೇ ಸಹಜ ಸಾವುನಲ್ಲೂ ಮುಂದೆ ಇದ್ದಾರೆ ಎನ್ನುತ್ತಾ ಮಕ್ಕಳೇ ತಾವೂಗಳು ಮನಸ್ಸಿನ ಭಾವನೆ ಅಭಿವ್ಯಕ್ತಗೊಳಿಸಿ ನಿಮ್ಮ ದೌರ್ಬಲ್ಯದ ಬಗ್ಗೆ ನಾಚಿಕೆ ಪಡುವ ಅವಶ್ಯಕತೆ ಇಲ್ಲ ತಂದೆಯೊಂದಿಗೆ ಮುಕ್ತವಾಗಿ ಹಂಚಿಕೊಳ್ಳಿ ಏಕೆಂದರೆ ತಂದೆಯಿಂದ ಸಿಗುವ ಪರಿಹಾರ ಜಗತ್ತಿನಲ್ಲಿ ಬೇರೆ ಯಾರಿಂದಲು ಸಿಗಲು ಸಾಧ್ಯವಿಲ್ಲ ಎಂಬ ಉದ್ದೇಶದಿಂದಲೇ ಪಾಲಕರಿಗೆ ಒಂದಿಷ್ಟು ಬೇಡಿಕೊಳ್ಳುವ ಮೂಲಕ ಇಂತಹ ವಿಶೇಷ ಕಾರ್ಯಕ್ರಮ ಆಯೋಜನೆ ಮಾಡಲಾಗಿದೆ ಜೊತೆಗೆ ಮಹಾಮಾರಿ ಕರೋನಾದಿಂದ ತಪ್ಪಿಸಿಕೊಳ್ಳಲು ಮಕ್ಕಳಿಗೆ ಒಂದಿಷ್ಟು ಅನುಕೂಲಕರ ಆಗಲಿ ಎಂದು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದ ಎಲ್ಲ ಮಕ್ಕಳಿಗೆ ಮಾಸ್ಕ್ ವಿತರಿಸಲಾಗುವುದು ಎಂದು ಮಾತನಾಡಿದರು.
ಕಾರ್ಯಕ್ರಮದಲ್ಲಿ ಅತಿಥಿಗಳಾಗಿ ದೂರವಾಣಿ ಇಲಾಖೆಯ ದೇವಿಂದ್ರಪ್ಪ ಪೂಜಾರಿ, ಕೋಟನೂರ (ಡಿ) ಸಯ್ಯದ ಗುತ್ತೇದಾರ, ಶ್ರೀ ದಾಸಿಮಯ್ಯ ಸೇವಾ ಬಳಗದ ಕಾರ್ಯದರ್ಶಿಗಳಾದ ವಿನೋದಕುಮಾರ ಜನೆವರಿ, ಅಪರಾಜಿತ ಶಾಲೆಯ ಮುಖ್ಯಸ್ಥರಾದ ರಾಜಕುಮಾರ ಭಂಡಾರಿ ವೇದಿಕೆ ಮೇಲೆ ಉಪಸ್ಥಿತರಿದ್ದರು ಆರ್.ಎಂ.ಪಿ ಡಾ. ವಿವೇಕಾನಂದ ಬುಳ್ಳಾ ಸ್ವಾಗತಿಸಿದರು, ಪುಷ್ಪಾಂಜಲಿ ಭಂಡಾರಿ ವಂದಿಸಿದರು.
ಈ ಕಾರ್ಯಕ್ರಮದಲ್ಲಿ ರಾಜಕುಮಾರ ಬಿರೆದಾರ, ರಾಜು ಕೊಷ್ಟಿ, ವಿಜಯಲಕ್ಷ್ಮಿ ಬುಳ್ಳಾ, ಮಹಾದೇವಿ ಬುಳ್ಳಾ, ನಿರ್ಮಲ, ವಿನಾಯಕ ಹಾಗು ಮಕ್ಕಳು ಉಪಸ್ಥಿತರಿದ್ದರು.