ಪುರಿ ಜಗನ್ನಾಥ ವಾರಾಂತ್ಯ ಬಾಗಿಲು ಬಂದ್

ಪುರಿ (ಒಡಿಶಾ), ಏ. ೧೭: ಕೋವಿಡ್ ಹಿನ್ನೆಲೆಯಲ್ಲಿ ವಿಶ್ವವಿಖ್ಯಾತ ಪುರಿ ಜಗನ್ನಾಥ ದೇವಾಲಯ ವಾರಾಂತ್ಯದ ದಿನಗಳಲ್ಲಿ ಬಂದ್ ಆಗಲಿದೆ.

ಒಡಿಶಾದಲ್ಲಿ ಕೊರೊನಾ ಪ್ರಕರಣಗಳು ಹೆಚ್ಚಿತ್ತಿರುವ ಹಿನ್ನೆಲೆಯಲ್ಲಿ ಸರ್ಕಾರದ ಹೊಸ ಮಾರ್ಗಸೂಚಿ ಪುರಿ ಜಗನ್ನಾಥ ದೇವಾಲಯಕ್ಕೂ ಅನ್ವಯಸಲಿದೆ. ಹಾಗಾಗಿ ಇದೇ ತಿಂಗಳ ೧೯ರಿಂದ ಅದು ಜಾರಿಗೆ ಬರಲಿದೆ ಎಂದು ದೇವಾಲಯದ ಆಡಳಿತ ಮಂಡಳಿ ತಿಳಿಸಿದೆ. ಶನಿವಾರ ಮತ್ತು ಭಾನುವಾರದಂದು ಪುರಿ ಜಗನ್ನಾಥನ ಸಾರ್ವಜನಿಕ ದರ್ಶನಕ್ಕೆ ಅವಕಾಶ ಇರುವುದಿಲ್ಲ ಎಂದು ಹೇಳಿದೆ.

ದೇವಾಲಯಕ್ಕೆ ಬರುವ ಭಕ್ತರು ಕಡ್ಡಾಯವಾಗಿ ೯೬ ಗಂಟೆಗಳ ಮುನ್ನ ಕೋವಿಡ್ ಟೆಸ್ಟ್ ಮಾಡಿಸಿಕೊಂಡಿರಬೇಕು. ಇಲ್ಲದ ಭಕ್ತರಿಗೆ ಜಗನ್ನಾಥದ ದರ್ಶನ ಲಭಿಸದು . ಯಾವುದೇ ಕಾರಣಕ್ಕೂ ಸರ್ಕಾರದ ನಿರ್ಬಂಧನೆಗಳನ್ನು ಉಲ್ಲಂಘಿಸುವುದಿಲ್ಲ ಎಂದು ದೇವಾಲಯದ ಆಡಳಿತ ಮಂಡಳಿ ತಿಳಿಸಿದೆ.

ಈ ನಡುವೆಯೇ ಒಡಿಶಾದಲ್ಲಿ ೧೩,೮೩೭ ಕೋವಿಡ್ ಸಕ್ರಿಯ ಪ್ರಕರಣಗಳಿವೆ ಎಂದು ಕೇಂದ್ರ ಆರೋಗ್ಯ ಸಚಿವರು ಹೇಳಿದ್ದಾರೆ. ಈವರೆಗೂ ಒಡಿಶಾದಲ್ಲಿ ೩,೪೨,೭೫೦ ಪ್ರಕರಣಗಳು ದಾಖಲಾಗಿವೆ ಎಂದು ತಿಳಿಸಿದ್ದಾರೆ.