ಪುರಾತನ ವೆಂಕಟೇಶ್ವರ ದೇವಸ್ಥಾನದಲ್ಲಿ ರಥೋತ್ಸವ

ಸಿರವಾರ.ಅ.೨೫- ಪಟ್ಟಣದ ಪೋಸ್ಟ್ ಆಫೀಸ್ ಹತ್ತಿರದ ಪುರಾತನ ವೆಂಕಟೇಶ್ವರ ದೇವಸ್ಥಾನದಲ್ಲಿ ರಥೋತ್ಸವ ಮಂಗಳವಾರ ವಿಜೃಂಭಣೆಯಿಂದ ಜರುಗಿತು.
ನವರಾತ್ರಿಯ ಅಂಗವಾಗಿ ಪ್ರತಿನಿತ್ಯ ಬೆಳಗ್ಗೆ ದೇವಸ್ಥಾನದಲ್ಲಿ ಸುಪ್ರಭಾತ, ಪಂಚಾಮೃತ ಅಭಿಷೇಕ, ತುಳಸಿ ಅರ್ಚನೆ ಸೇವೆ ಹಾಗೂ ರಾತ್ರಿ ಭಜನೆ, ತೊಟ್ಟಲು ಸೇವೆ, ಪಲ್ಲಕ್ಕಿ ಸೇವೆ ಜರುಗುತ್ತ ಬಂದಿದ್ದು, ಕಡೆಯ ದಿನವಾದ ಇಂದು ಕಲ್ಯಾಣೋತ್ಸವದ ಜೊತೆಗೆ ವೆಂಕಟೇಶ್ವರ ರಥೋತ್ಸವ ವಿಜೃಂಭಣೆಯಿಂದ ಜರುಗಿತು.
ಪುರೋಹಿತರಾದ ಯಲಗುರ್ದಾರ ಜೋಷಿ, ನರಸಿಂಹಾಚಾರ ಜೋಷಿ, ಶ್ರೀನಿವಾಸ ಆಚಾರ, ಕುಪ್ಪಾಚಾರ ಜೋಷಿ, ಪರಮೇಶಶೆಟ್ಟಿ, ನಿಂಬಯ್ಯಸ್ವಾಮಿ, ವಾದಿರಾಜ, ವಸುದೇಂದ್ರ, ವಿಷ್ಣುತೀರ್ಥ, ಕೃಷ್ಣಾಜೀರಾವ್ ಸೂರ್ಯವಂಶಿ, ಗಿರಿರಾವ್ ಗುಂಜಳ್ಳಿ, ಹನುಮಂತರಾವ್ ಕಾನಿಹಾಳ, ಗೋಪಾಲದಾಸ್, ಅಮರೇಶ ನಂದರೆಡ್ಡಿ, ಶೇಷಯ್ಯ ಪೂಜಾರಿ, ಗುರುರಾಜ್‌ರಾವ್, ವಿಜಯರಾವ್, ಎಂ.ರಮೇಶಶೆಟ್ಟಿ, ಗೋಪಾಲ ಪೂಜಾರಿ ಇತರರು ಇದ್ದರು.