ಪುರಾತನ ರಾಮಮಲಿಂಗ ದೇವಸ್ಥಾನ ಜಿರ್ಣೋದ್ದಾರಕ್ಕೆ ಒತ್ತಾಯ

ಆಳಂದ ;ಮಾ.25: ತಾಲೂಕಿನ ಖಜೂರಿ ಗ್ರಾಮದಲ್ಲಿ ಇರುವ ರಾಮಲಿಂಗ ದೇವಸ್ಥಾನವನ್ನು ಜಿರ್ಣೊದ್ದಾರ ಮಾಡಲು ಶ್ರೀ ಕೋರಣೇಶ್ವರ ಸ್ವಾಮಿಜಿಗಳ ನೇತೃತ್ವದಲ್ಲಿ ಪೂರ್ವ ಭಾವಿ ಸಭೆ ಕರೆಯಲಾಯಿತು.
ಸಭೆಯಲ್ಲಿ ಮಾತನಾಡಿದ ಶ್ರೀಗಳು ಗ್ರಾಮದ ರಾಮಲಿಂಗ ದೇವಸ್ಥಾನ 900 ವರ್ಷಗಳ ಪುರಾತನ ದೇವಸ್ಥಾನವಾಗಿದೆ ನಿರ್ಲಕ್ಷದಿಂದ ಇದನ್ನು ಜಿರ್ಣೊದ್ದಾರವಾಗಿದೆ ಹಾಗೆ ಉಳಿದಿದೆ ಇದಕ್ಕೆ ಜಿರ್ಣೊದ್ದಾರ ಮಾಡಬೇಕಾಗಿದೆ ಅದಕ್ಕಾಗಿ ಧಾರ್ಮಿಕ ದತ್ತಿ ಇಲಾಖೆ ಹಾಗೂ ಸ್ಥಳಿಯ ಶಾಸಕರಾದ ಸುಭಾಷ ಆರ್ ಗುತ್ತೇದಾರವರಿಗೆ ಮನವಿ ನೀಡಿ ರಾಮಲಿಂಗ ದೇವಸ್ಥಾನವನ್ನು ಜಿರ್ಣೊದ್ದಾರ ಮಾಡಲು ಅನುದಾನ ನೀಡಬೇಕೆಂದು ಮನವಿ ಮಾಡಲು ಸಭೆಯಲ್ಲಿ ತಿರ್ಮಾನಿಸಲಾಯಿತು. ಸಭೆಯಲ್ಲಿ ಗ್ರಾಮದ ಕಾಶಿನಾಥ ಡಗೆ ನಾಗೇಂದ್ರ ಗುಗರೆ ಕರಿಬಸಪ್ಪ ನಾಗೂರೆ ಲಕ್ಷಮಿಪುತ್ರ ಹುಳ್ಳೆ ಲೋಕೆಶ ಘಂಟೆ ಗುರುಲಿಂಗಪ್ಪ ಡಗೆ ನಿಲಪ್ಪ ಆಳಂಗೆ ವಿಜಯ ಪುಜಾರಿ ಬಸವಂತಪ್ಪ ಶಿಲವಂತ ಇತರರು ಇದ್ದರು.