
ರಾಯಚೂರು,ಆ.೨೧-
ಬಿ.ಯದ್ಲಾಪೂರು ಗ್ರಾಮದ ಪುರಾತನ ಊರಭಾವಿ ತೆರವುಗೊಳಿಸದವರ ವಿರುದ್ಧ ಸೂಕ್ತ ಕಾನೂನು ಕ್ರಮ ಜರುಗಿಸುವಂತೆ ಆಗ್ರಹಿಸಿ ಗ್ರಾಮಸ್ಥರು ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಿ ಒತ್ತಾಯಿಸಿದರು.
ತಾಲೂಕಿನ ಬಿಚ್ಚಾಲಿ ಗ್ರಾಮ ಪಂಚಾಯತಿ ವ್ಯಾಪ್ತಿಯಲ್ಲಿ ಬರುವ ಬಿ.ಯದ್ಲಾಪೂರು ಗ್ರಾಮದ ಶ್ರೀ ಆಂಜನೇಯ ದೇವಸ್ಥಾನದ ಹತ್ತಿರ ಹಾಗೂ ಪಂಚಾಯತಿ ಕಟ್ಟೆಯ ಪಕ್ಕದಲ್ಲಿರುವ ಊರಭಾವಿ ಪುರಾತನವಾಗಿದ್ದು, ಸದರಿ ಊರಭಾವಿಯನ್ನು ಆಗಸ್ಟ್ ೧೯ ರಂದು ಗ್ರಾಮ ಪಂಚಾಯತಿ ಅಧಿಕಾರಿಗಳ ನಿರ್ಲಕ್ಷ್ಯ ಹಾಗೂ ಕೆಲವು ಕಿಡಿಗೇಡಿಗಳ ಕುಮ್ಮಕ್ಕಿನಿಂದ ಈ ಐತಿಹಾಸಿಕ ಭಾವಿಯನ್ನು ತೆರವು ಮಾಡಲಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.ಈ ಭಾವಿಗೆ ಐತಿಹಾಸಿಕ ಹಿನ್ನೆಲೆವುಳ್ಳ ಕಾರಣ, ಬಿ. ಯದ್ಲಾಪೂರು ಗ್ರಾಮಸ್ಥರ ಧಾರ್ಮಿಕ ಭಾವೈಕ್ಯತೆಗೆ ಧಕ್ಕೆವುಂಟಾಗಿರುತ್ತದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಪುರಾತನ ಭಾವಿ ತೆರವಿಗೆ ಕಾರಣರಾದ ಗ್ರಾಮ ಪಂಚಾಯತಿ ಅಧಿಕಾರಿ ಹಾಗೂ ಕಿಡಿಗೇಡಿಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಂಡು ಅವರನ್ನು ಕಠಿಣ ಶಿಕ್ಷೆಗೊಳಪಡಿಸಬೇಕು ಮತ್ತು ಐತಿಹಾಸಿಕ ಹಿನ್ನೆಲೆವುಳ್ಳ ಈ ಭಾವಿಯ ಜೀರ್ಣೋದ್ದಾರ ಮಾಡಬೇಕೆಂದು ಒತ್ತಾಯಿಸಿದರು.
ಈ ಸಂದರ್ಭದಲ್ಲಿ ಬಸವಣ್ಣ, ಭೀಮಣ್ಣ, ಗೋಪಾಲ, ಮಲ್ಲೇಶಪ್ಪ, ವಿಷ್ಣುವರ್ಧನ್, ಸೇರಿದಂತೆ ಉಪಸ್ಥಿತರಿದ್ದರು.