ಪುರಾತನ ದೇವಾಲಯಗಳ ಅಭಿವೃದ್ಧಿ, ಸಮಾಜಕ್ಕೆ ಕೊಡುಗೆ

ಚಿಕ್ಕಬಳ್ಳಾಪುರ.ನ೨೮:ನಿರ್ಲಕ್ಷಿಸಲ್ಪಟ್ಟಿರುವ ಪುರಾತನ ದೇವಾಲಯಗಳನ್ನು ಅಭಿವೃದ್ಧಿ ಪಡಿಸಿದರೆ ಸಮಾಜಕ್ಕೆ ಒಂದು ಉತ್ತಮ ಸಂದೇಶ ಮತ್ತು ಒಂದು ಉತ್ತಮ ಕೊಡುಗೆ ನೀಡಿದಂತಾಗುತ್ತದೆ ಎಂದು ಜೈ ಫೌಂಡೇಶನ್ ಸಂಸ್ಥಾಪಕ ಜಯಕುಮಾರ್ ತಿಳಿಸಿದರು.
ಅವರು ಕಾರ್ತಿಕ ಮಾಸದ ಎರಡನೇ ಸೋಮವಾರ ವಾದ ನೆನ್ನೆ ತಮ್ಮ ಸಂಸ್ಥೆಯ ವತಿಯಿಂದ ಪುನರುದ್ಧರಣೆಗೊಂಡ ತನಕ ನಂದೀಶ್ವರ ದೇವಾಲಯಕ್ಕೆ ಆಗಮಿಸಿ ದೇವರಿಗೆ ಪೂಜೆ ಸಲ್ಲಿಸಿ, ನಂತರ ಮಾತನಾಡಿದರು.
ಸ್ಥಾನಕ್ಕ ನಂದೀಶ್ವರ ದೇವಾಲಯದ ಪುನರುದ್ದಿಕರಣ ಮಾಡಬೇಕೆಂದು ನಾರಾಯಣಸ್ವಾಮಿ ರವರು ತಮ್ಮ ಕಚೇರಿಗೆ ಆಗಮಿಸಿ ಮನವಿ ದೇವಾಲಯಕ್ಕೆ ಆಗಮಿಸಿ ಇಲ್ಲಿನ ದುಷ್ಥಿತಿಯನ್ನು ಗಮನಿಸಿ ಕಾರ್ಯಪ್ರವೃತ್ತರಾಗಿ ಕೇವಲ ೪೫ ದಿನಗಳಲ್ಲಿ ದೇವಾಲಯವನ್ನು ಅತ್ಯಂತ ಸುವ್ಯವಸ್ಥಿತ ರೀತಿಯಲ್ಲಿ ಪುನರುದ್ರಿಕರಣ ಗೊಳಿಸಿರುವ ತೃಪ್ತಿ ನಮ್ಮದಾಗಿದೆ ಎಂದರು.
ಜಿಲ್ಲೆಯಲ್ಲಿ ಇಂತಹ ಹಲವಾರು ದೇವಾಲಯಗಳು ಪ್ರಸ್ತುತಿಯಲ್ಲಿದೆ ಆದರೆ ಎಲ್ಲಾ ದೇವಾಲಯಗಳನ್ನು ನಾವೇ ಮಾಡಲ್ ಮಾಡಲು ನಮಗೆ ಭಗವಂತ ಶಕ್ತಿ ನೀಡಲಿ ಎಂದರು ಇಲ್ಲದಿದ್ದರೆ ಆಯಾ ದೇವಾಲಯಗಳ ಸಮೀಪವಿರುವ ಗ್ರಾಮಸ್ಥರು ತಮ್ಮ ಪುರಾತನ ಕಾಲದವರು ನಿರ್ಮಿಸಿರುವ ದೇವಾಲಯಗಳನ್ನು ಅವರೇ ರಕ್ಷಿಸಿಕೊಂಡರೆ ಸಮಾಜಕ್ಕೆ ಒಂದು ಉತ್ತಮ ಕೊಡುಗೆ ಆಗುತ್ತದೆ ಎಂದು ಹಿತವಚನ ನೀಡಿದರು.
ಈ ಸ್ಥಾನಕ್ಕೆ ನಂದೀಶ್ವರ ಸ್ವಾಮಿ ದೇವಾಲಯಕ್ಕೆ ಒಂದು ಅದ್ಭುತವಾದ ಚರಿತ್ರೆ ಇದ್ದು ಈ ದೇವಾಲಯದಲ್ಲಿ ಈ ಹಿಂದೆ ಬೃಹತ್ ಗಣಪತಿಗಳನ್ನು ಇಟ್ಟು ಪೂಜಿಸುತ್ತಿದ್ದರು. ಈ ದೇವಾಲಯಕ್ಕೆ ರಾಜ್ಯ ಮತ್ತು ರಾಷ್ಟ್ರದ ಪ್ರಸಿದ್ಧ ಕಲಾವಿದರುಗಳು ಆಗಮಿಸಿ ತಮ್ಮ ಕಲಾ ಪ್ರದರ್ಶನಗಳನ್ನು ತೋರಿಸುತ್ತಿದ್ದರು ಅವರುಗಳಲ್ಲಿ ಗುರುರಾಜುಲು ನಾಯ್ಡು, ಬೇಲೂರು ಸಹೋದರರು ಮಾಲೂರು ಸಣ್ಣಪ್ಪದಾಸ್ ವೀಣಾಣಾವದ ನ ಚತುರ ನಟರಾಜ್ ರಾಜ್ಯದಲ್ಲಿ ಖ್ಯಾತ ವೀಣಾ ವಾದನ ಕಲಾವಿದೆ ವೀಣಾ ವರುಣಿ ಮುಂತಾದವರನ್ನು ನೆನಪು ಮಾಡಿಕೊಂಡರು.
ಬಹುಭಾಷಾ ಚಿತ್ರಗಳ ಅನುವಾದಿತ ಚಿತ್ರ ಸಾಹಿತಿ ವರದರಾಜು ಸ್ಥಾನಕ್ಕೆ ನಂದೀಶ್ವರ ಸ್ವಾಮಿ ದೇವಾಲಯದ ಮೆಕಾನಿಕ್ ನಾರಾಯಣಸ್ವಾಮಿ ಜೈ ಫೌಂಡೇಶನ್ ಸಂಸ್ಥೆಯ ಸಾರ್ವಜನಿಕ ಸಂಪರ್ಕ ಅಧಿಕಾರಿ ಮುಬಾರಕ್ ದೇವಾಲಯದ ಪ್ರಧಾನ ಅರ್ಚಕರು ಒಳಗೊಂಡಂತೆ ಮತ್ತಿತರರು ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.