ಪುರಾತನ ದೇವಸ್ಥಾನಗಳಲ್ಲಿ ನಿಧಿ ಶೋಧನೆಗೆ ಹೊಂಚು ಹಾಕಿದ್ದ ಆರು ಜನರ ಬಂಧನ

ದಾವಣಗೆರೆ.ಜು.೨೪: ರಸ್ತೆ ಬದಿ ದರೋಡೆ, ಪುರಾತನ ದೇವಸ್ಥಾನಗಳಲ್ಲಿ ನಿಧಿ ಶೋಧನೆಗೆ ಹೊಂಚು ಹಾಕಿದ್ದ ಆರು ಜನರನ್ನು ಬಂಽಸಿರುವ ಜಗಳೂರು ಪೊಲೀಸರು ಕಾರು, ದರೋಡೆಗೆ ಬಳಸುತ್ತಿದ್ದ ಇತರೆ ವಸ್ತುಗಳನ್ನು ವಶಪಡಿಸಿಕೊಂಡಿದ್ದಾರೆ.ಜಗಳೂರು ಪಟ್ಟಣದ ಪಿ. ಕಲ್ಲೇಶಿ(೪೮), ದಾವಣಗೆರೆಯ ಆಜಾದ್ ನಗರದ ದಿವಾನ್‌ಸಾಬ್, ಹುಬ್ಬಳ್ಳಿಯ ಮಲ್ಲಿಕಾರ್ಜುನ ಅಲಿಯಾಸ್ ಮಲ್ಲೇಶಿ(೩೦), ಹನುಮಂತ(೩೩), ಅಮೀರ್‌ಖಾನ್ ಪಠಾಣ್(೩೦), ಇಳಕಲ್‌ನ ಮುರ್ತಾಜಸಾಬ್(೩೮) ಬಂಽತರು.ಜಗಳೂರು ಠಾಣಾ ಪಿಎಸ್‌ಐ ಎಸ್.ಡಿ. ಸಾಗರ್ ಮತ್ತವರ ತಂಡ ರಾತ್ರಿ ಗಸ್ತು ನಡೆಸುತ್ತಿದ್ದಾಗ ಲಿಂಗಣ್ಣಹಳ್ಳಿ ರಸ್ತೆಯಲ್ಲಿ  ರಸೆಯ ಬದಿಯಲ್ಲಿ ಜನವಸತಿ ಇಲ್ಲದ ಸ್ಥಳದಲ್ಲಿ ಅನುಮಾನಾಸ್ಪದವಾಗಿ ಇಬ್ಬರು ಕಾರು ನಿಲ್ಲಿಸಿಕೊಂಡು ನಿಂತಿದ್ದರು. ಪೊಲೀಸ್ ಜೀಪ್ ನೋಡಿ ಓಡಿಹೋಗಲು ಪ್ರಯತ್ನಿಸಿದವರನ್ನು ಬೆನ್ನತ್ತಿ ಹಿಡಿದು ವಿಚಾರಿಸಿದಾಗ ದರೋಡೆಗೆ ಹೊಂಚು ಹಾಕುತ್ತಿರುವ ವಿಷಯ ಗೊತ್ತಾಯಿತು. ಇಬ್ಬರು ನೀಡಿದ ಸುಳಿವಿನ ಮೇಲೆ ಇತರರನ್ನು ವಶಕ್ಕೆ ತೆಗೆದುಕೊಳ್ಳ ಲಾಯಿತು.ನಿಧಿ ಪತ್ತೆಗಾಗಿ ಬಂಧಿತ ಆರೋಪಿತರು ರಸ್ತೆ ದರೋಡೆ ಹಾಗೂ ಪುರಾತನ ದೇವಸ್ಥಾನಗಳನ್ನು ಪತ್ತೆಮಾಡಿ ನಿಧಿಗಾಗಿ ಶೋಧನಡೆಸಿ ದರೋಡೆ ಮಾಡಲು ಬಂದಿರುವುದು ಗೊತ್ತಾಯಿತು.ಜು. ೨೧ ರ ರಾತ್ರಿ ಜಗಳೂರು ತಾಲೂಕಿನ ಬಿದರಕೆರೆ-ಸಂತೆ ಮುದ್ದಾಪುರ ಗ್ರಾಮಗಳ ಮಧ್ಯದಲ್ಲಿ ಬರುವ ಬೇಡಿ ಆಂಜನೇಯಸ್ವಾಮಿ ಗುಡಿಯ ಮುಂಭಾಗದಲ್ಲಿರುವ ಬಸವಣ್ಣ ದೇವಸ್ಥಾನದಲ್ಲಿ ಬಸವಣ್ಣನಮೂರ್ತಿಯನ್ನು ಕಿತ್ತಿ ಪಕ್ಕದಲ್ಲಿಟ್ಟು ನಿಧಿಗಾಗಿ ಶೋಧನೆ ಮಾಡಿರುವುದನ್ನು ಒಪ್ಪಿ ಕೊಂಡಿದ್ದಾರೆ.ಆರೋಪಿತರಿಂದ ಕಾರು, ಕಬ್ಬಿಣದ ಸುತ್ತಿಗೆ, ಹ್ಯಾಂಡ್‌ಗ್ಲೌಸ್, ಕಟ್ಟಿಂಗ್ ಪ್ಲೇಯರ್,  ಕಬ್ಬಿಣದ ಪ್ಲಾಟ್ಚಿಸೆಲ್, ಪ್ಲಾಸ್ಟಿಕ್ ಹಗ್ಗ, ಗುಟಕಾ ಕಂಪನಿಯ ಖಾಲಿಬ್ಯಾಗ್, ಎರಡು ಪಾಕೇಟ್ ಕಾರದ ಪುಡಿ, ಮೂರು ಮೊಬಲ್, ೨ ಸಾವಿರ ನಗದು, ಟಾರ್ಚ್, ರೇಡಿಯಂ ಕಟ್ಟರ್ ಚಾಕು ವಶಪಡಿಸಿಕೊಳ್ಳಲಾಗಿದೆ.ಪ್ರಕರಣಕ್ಕೆ ಮತ್ತೊಬ್ಬ ಆರೋಪಿತ ಭರತೇಶ್ ಎಂಬು ವ್ಯಕ್ತಿ ಭಾಗಿಯಾಗಿರುವುದಾಗಿ ತಿಳಿದುಬಂದಿದ್ದು, ಪತ್ತೆ ಕಾರ್ಯ ಮುಂದುವರೆದಿರುತ್ತದೆ. ೬ ಜನ ಆರೋಪಿತರನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ.ಪ್ರಕರಣವನ್ನು ಭೇದಿಸುವಲ್ಲಿ ಯಶಸ್ವಿಯಾದ ಜಗಳೂರು ಪೊಲೀಸ್ ಠಾಣೆ ಪಿಐ ಎಂ. ಶ್ರೀನಿವಾಸರಾವ್, ಪಿಎಸ್‌ಐ ಎಸ್.ಡಿ. ಸಾಗರ್, ಸಿಬ್ಬಂದಿಗಳಾದ ನಾಗಭೂಷಣ. ಆರ್, ಪಂಪಾನಾಯ್ಕ, ಬಸವಂತಪ್ಪ, ಮಾರೆಪ್ಪ, ಬಸವರಾಜ, ದಿನೇಶ್, ಚಂದ್ರಶೇಖರ್, ರಾಜಪ್ಪ, ನಾಗರಾಜ, ಗಿರೀಶ್ ಅವರಿಗೆ ಜಿಲ್ಲಾ ರಕ್ಷಣಾಧಿಕಾರಿ ಡಾ.ಕೆ. ಅರುಣ್ ಪ್ರಶಂಸೆ ವ್ಯಕ್ತಪಡಿಸಿದ್ದಾರೆ