ಪುರಾಣ ಶ್ರವಣದಿಂದ ಪುಣ್ಯ ಪ್ರಾಪ್ತಿ

ಲಕ್ಷ್ಮೇಶ್ವರ,ಅ27 ‘ಪುರಾಣ ಪುಣ್ಯ ಕಥೆಗಳಲ್ಲಿ ಬದುಕಿನ ಮೌಲ್ಯಗಳು ಅಡಗಿದ್ದು ಅವುಗಳನ್ನು ಆಲಿಸುವುದರಿಂದ ನಮಗೆ ಪುಣ್ಯ ಲಭಿಸುತ್ತದೆ’ ಎಂದು ಶಿಕ್ಷಕ ಈಶ್ವರ ಮೆಡ್ಲೇರಿ ಹೇಳಿದರು.
ನವರಾತ್ರಿ ಅಂಗವಾಗಿ ಇಲ್ಲಿನ ಕೆಂಚಲಾಪುರದ ದುರ್ಗಾದೇವಿ ದೇವಸ್ಥಾನದಲ್ಲಿ ಸೋಮವಾರ ಮಂಗಲಗೊಂಡ ಪುರಾಣ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು ಎಎಸ್‍ಆಯ್ ನಿಂಗೋಜಿ ಮಾತನಾಡಿ ‘ಮೊಬೈಲ್ ಗೀಳಿನಿಂದಾಗಿ ಇಂದು ಯುವ ಜನತೆ ನಮ್ಮ ಪರಂಪರೆ, ಸಂಸ್ಕøತಿ ಮರೆಯುತ್ತಿರುವುದು ವಿಷಾದನೀಯ. ಮಕ್ಕಳಲ್ಲಿ ಒಳ್ಳೆಯ ಗುಣಗಳನ್ನು ಬೆಳೆಸುವ ಜವಾಬ್ದಾರಿ ತಂದೆ ತಾಯಿಗಳ ಮೇಲಿದೆ’ ಎಂದರು.
‘ಎಲ್ಲ ಧರ್ಮಗಳ ಸಾರ ಒಂದೇ. ಬದುಕು ಮತ್ತು ಆಧ್ಯಾತ್ಮ ಒಂದೇ ನಾಣ್ಯದ ಎರಡು ಮುಖಗಳು. ಪ್ರತಿಯೊಬ್ಬರೂ ಆಧ್ಯಾತ್ಮದ ಚಿಂತನೆ ಅಳವಡಿಸಿಕೊಂಡರೆ ಜೀವನದಲ್ಲಿ ಸುಖ ಲಭಿಸುತ್ತದೆ’ ಎಂದು ಕಥೆಗಾರ ನಾಗರಾಜ ಹಣಗಿ ಹೇಳಿದರು.
ಪುರಾಣ ಪಠಣ ಮಾಡಿದ ಹನಮಂತಸಾ ಚೌಧರಿ, ಪ್ರವಚನ ನೀಡಿದ ಜಿ.ಎಂ. ಪೂಜಾರ ಮತ್ತು ಹಾರ್ಮೋನಿಯಂ ಸಾಥ್ ನೀಡಿದ ಎಲ್.ಆರ್. ಮಲ್ಲಸಮುದ್ರ ಅವರನ್ನು ದೇವಸ್ಥಾನದ ಪರವಾಗಿ ಸನ್ಮಾನಿಸಲಾಯಿತು.
ಈ ಸಂದರ್ಭದಲ್ಲಿ ಮಂಜುನಾಥ ಮಾಗಡಿ, ಪುರಸಭೆ ಸದಸ್ಯ ಸಾಯಿಬ್‍ಜಾನ್ ಹವಾಲ್ದಾರ, ಗಂಗಾಧರ ಗುಡಗೇರಿ, ತಿಪ್ಪಣ್ಣ ರೊಟ್ಟಿಗವಾಡ, ನಿಂಗಪ್ಪ ಕೋಳೂರ, ಪ್ರಕಾಶ ಗುತ್ತಲ, ಮಲ್ಲೇಶಪ್ಪ ಚಿಕ್ಕೇರಿ, ಮಾಂತೇಶ ಕೊಡ್ಲಿ, ಹನಮಂತ ಚೌಧರಿ, ಎಲ್.ಆರ್. ಮಲ್ಲಸಮುದ್ರ ಇದ್ದರು.
**