ಪುರಾಣ ಮಂಗಲೋತ್ಸವ


ಅಣ್ಣಿಗೇರಿ,ನ29 : ಪಟ್ಟಣದ ಪುರಧೀರೇಶ್ವರ ದೇವಸ್ಥಾನ ಟ್ರಸ್ಟ್ ಮಂಡಳಿ ಕಾರ್ತಿಕ ಮಾಸದ 13ನೇ ವರ್ಷದ ಅಧ್ಯಾತ್ಮಿಕ ಪ್ರವಚನದ ನಿಮಿತ್ಯ ಹಮ್ಮಿಕೊಂಡ ಶ್ರೀ ಅಲ್ಲಮಪ್ರಭು ಜೀವನ ಚರಿತ್ರೆ ಪುರಾಣ ಮಂಗಲೋತ್ಸವ ಕಾರ್ಯಕ್ರಮ ಜರುಗಿತು.
ಸಾನಿಧ್ಯವಹಿಸಿದ ಮಣಕವಾಡದ ಅನ್ನದಾನೇಶ್ವರ ಮಠದ ಅಭಿನವ ಮೃತ್ಯುಂಜಯ ಶ್ರೀಗಳು ಮಾತನಾಡಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಶ್ರೀ ಪುರಧೀರೇಶ್ವರ ದೇವಸ್ಥಾನ ಟ್ರಸ್ಟ್ ಕಮಿಟಿ ಅಧ್ಯಕ್ಷ ಶಿವಯೋಗಿ ಸುರಕೋಡ ಅಧ್ಯಕ್ಷತೆವಹಿಸಿದ್ದರು. ಉಪಾಧ್ಯಕ್ಷ ಈಶ್ವರಪ್ಪ ಉಳ್ಳಾಗಡ್ಡಿ, ದೇವರಾಜ್ ಧಾಡಿಬಾವಿ ಶೇಖಪ್ಪ ಸೊಟಕನಾಳ, ಚಂದ್ರಣ್ಣ ಕೊಟ್ಟೂರ, ನಿಜಲಿಂಗಪ್ಪ ಅಕ್ಕಿ, ವೀರೇಶ ಕುಬಸದ, ಸುರೇಶ ಜಿ.ಹಿರೇಮಠ, ಪುರದರ ಮುಂಡಾಸದ, ಗುರುಬಸಪ್ಪ ಕಲ್ಲೂರ, ಶಿವರಾಜ ಮುಂಡರಗಿ, ರಾಘವೆಂದ್ರ ಮುಂಡರಗಿ, ಪ್ರವೀಣ ಹಾಳದೋಟರ, ಉಪಸ್ಥಿತರಿದ್ದರು.ವಿ.ಎಮ್.ಹಿರೇಮಠ ಸ್ವಾಗತಕೋರಿದರು. ಎಮ್.ವಿ.ಮುತ್ತಲಗೇರಿ ನಿರೂಪಿಸಿದರು.