ಪುರಾಣ- ಪ್ರವಚನ ಶ್ರವಣದಿಂದ ಜೀವನ ಪಾವನಃ ಶ್ರೀ ಶ್ರದ್ದಾನಂದ ಮಹಾಸ್ವಾಮೀಜಿಗಳು.

ವಿಜಯಪುರ, ಜು.31-ಪುರಾಣ ಪ್ರವಚನದಲ್ಲಿ ಅಡಕವಾದ ಜೀವನ ಮೌಲ್ಯಗಳನ್ನು ಅನುಸರಿಸಿ ಶ್ರಾವಣ ಮಾಸದಲ್ಲಿ.ಶ್ರವಣ- ಸಂಕೀರ್ತನೆ ಮಾಡುವುದರಿಂದ ಮಾನವ ಜೀವನ ಪಾವನವಾಗುವದೆಂದು ಜ್ಞಾನ ಯೋಗಾಶ್ರಮದ ಪೂಜ್ಯರಾದ ಶ್ರೀ ಶ್ರದ್ದಾನಂದ ಮಹಾಸ್ವಾಮೀಜಿ ಅವರು ಹೇಳಿದರು.
ಕಾಳಿಕಾ ನಗರದ ವಿಜಯಪುರ ತಾಲೂಕ ವಿಶ್ವಕರ್ಮ ಸಮಾಜ ವಿಕಾಸ ಸಂಸ್ಥೆಯವರು ಏರ್ಪಡಿಸಿದ. ಜಗದ್ಗುರು ಶ್ರೀ ಮೌನೇಶ್ವರ ದೇವಸ್ಥಾನದಲ್ಲಿ ದಿನಾಂಕ 28-072022 ರಿಂದ 25-08-2022 ರವರೆಗೆ ಪರಮ ಪೂಜ್ಯ ಲಚ್ಯಾಣ ಶಿದ್ದಪ್ಪ ಮಹಾರಾಜರ ಪ್ರವಚನ ಕಾರ್ಯಕ್ರಮವನ್ನು ಜ್ಯೋತಿ ಪ್ರಜ್ವಲಿಸಿ ಉದ್ಘಾಟನೆಗೈದು ಮಾತನಾಡಿದ ಅವರು. ಭಾರತೀಯ ಪರಂಪರೆಯಲ್ಲಿ ಚಿಶ್ರಾವಣ ಮಾಸ ಅತ್ಯಂತ ಶ್ರೇಷ್ಠ ಮಾಸವಾಗಿದ್ದು.ಈ ಮಾಸದಲ್ಲಿ ಪೂಜೆ -ಪುರಸ್ಕಾರ. ದ್ಯಾನ-.ಮೌನ. ದಾನ- ಧರ್ಮ ಮಾಡಿ ಪುಣ್ಯವಂತ ರಾಗಬೇಕೆಂಗು ಕರೆ ನೀಡಿದರು.
ಮುಖ್ಯ ಅತಿಥಿಗಳಾಗಿ ಆಗಮಿಸಿದ್ದ ನಿವೃತ್ತ ಕನ್ನಡ ಉಪನ್ಯಾಸಕ. ಎಂ.ಅರ್. ಬಡಿಗೇರ ಮಾತನಾಡಿ. ಬದಲಾಗುತ್ತಿರುವ ಜಗತ್ತಿನಲ್ಲಿನ ಇಂದು.ಮಾನವ ಮಾನಸಿಕ ನೆಮ್ಮದಿ ಕಳೆದುಕೊಂಡು ನೋವು ಅನುಭವಿಸುತ್ತಿದ್ದಾನೆ. ಕಾರಣ ಶ್ರದ್ದಾ ಭಕ್ತಿಯ ಕೇಂದ್ರಗಳಾದ ಮಠ ಮಂದಿರ ಗಳಲ್ಲಿ ನಡೆಯುವ ಪುಣ್ಯ ಕಾರ್ಯದಲ್ಲಿ ಭಾಗವಹಿಸಿ ಮಾನಸಿಕ ನೆಮ್ಮದಿ ಕಂಡುಕೊಳ್ಳಬೇಕು.ಪುರಾಣ ಪುಣ್ಯ ಕಥೆಗಳನ್ನು ಆಲಿಸುವದರಿಂದ ಮಾನಸಿಕ ನೆಮ್ಮದಿ ಸಾದ್ಯ. ಮಾನವನ ಸಕಲ ಸಮಸ್ಯೆಗೆ ಇಲ್ಲಿ ಪರಿಹಾರ ದೊರೆಯುತ್ತದೆ ಕಾರಣ ಹೆಚ್ಚಿನ ಸಂಖ್ಯೆಯಲ್ಲಿ ಶ್ರದ್ಧಾಳುಗಳು ಭಾಗವಹಿಸಬೇಕೆಂದು ಕರೆ ನೀಡಿದರು.
ದಿವ್ಯ ಸಾನಿಧ್ಯ ವಹಿಸಿದ್ದ ಮೂರುಝಾವಾಧಿಶ್ವರ ಮಠದ ಶ್ರೀ ನಾಗಯ್ಯ ಮಹಾಸ್ವಾಮಿಗಳು ಆಶೀರ್ವಚನ ನೀಡಿ ಮಾನವರಂತೆ ಜನಿಸಿ ಮಹಾಮಾನವರಾಗಿ ಬೆಳಗಿ ಜನರ ಸಂಕಷ್ಟಗಳನ್ನು ನಿವಾರಿಸಿ ಲೋಕವನ್ನು ಉದ್ಧರಿಸಿದ ಕೀರ್ತಿ ಲಾಚ್ಯಾಣ ಸಿದ್ದಪ್ಪ ಮಹಾರಾಜರಿಗೆ ಸಲ್ಲುತ್ತದೆ. ಅಂಥ ಮಹನೀಯರ ಆದರ್ಶ ಬದುಕು ನಮಗೆ ದಾರಿ ದೀಪ. ಶ್ರಾವಣ ಮಾಸದ ಶುಭ ದಿನಗಳಲ್ಲಿ ಸದ್ಭಕ್ತರು ಅವರ ಪ್ರವಚನ ಆಲಿಸಿ ಪುನೀತರಾಗಿ ಎಂದರು.
ಪ್ರವಚನಕಾರರಾದ ಕನ್ನುರಿನ ಶ್ರೀ ಪ್ರಕಾಶ ಮಹಾರಾಜರು. ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಆದ್ಯಾತ್ಮಚಿಂತಕ ಶ್ರೀ ಎಸ್.ಎ ಪಂಚಾಳ ಮಾತನಾಡಿದರು. ವೇದಿಕೆಯಲ್ಲಿ ಉಪಸ್ಥಿರಿದ್ದ ನಿವೃತ್ತ ಪ್ರಾಚಾರ್ಯ ಆರ್. ಕೆ. ಪತ್ತಾರ ಅವರು ಸ್ವಾಗತಿಸಿ ಪ್ರಾಸ್ತಾವಕವಾಗಿ ಮಾತನಾಡಿದರು. ದಯಾನಂದ ಬಡಿಗೇರ ನಿರೂಪಿಸಿದರು. ನಾಗರಾಜ ಪತ್ತಾರ ವಂದಿಸಿದರು. ಸುಮಂಗಲೆಯರ ಆರತಿ ಮತ್ತು ಮಂಗಳ ಗೀತೆಯೊಂದಿಗೆ ಕಾರ್ಯಕ್ರಮ ಸಂಪನ್ನಗೊಂಡಿತು.
ವೇದಿಕೆ ಮೇಲೆ ನಿವೃತ್ತ ಉಪನ್ಯಾಸಕ ಡಾ. ಎನ್.ಬಿ. ಪಾಟೀಲ, ನಾಗಠಾಣ ಮತಕ್ಷೇತ್ರದ ಶಾಸಕರ ಆಪ್ತಸಹಾಯ ಆರ್. ವಸಂತಕುಮಾರ, ಯುವ ಧುರೀಣ ಶಿವು ಕೋಳಿ, ರವಿ ಸೋನಾರ, ವಿಜಯಕುಮಾರ ಪಾಠಕ, ಕಟ್ಟೆಪ್ಪ ಬಡಿಗೇರ, ದಾನೇಶ ಅವಟಿ ಮುಂತಾದವರು ಉಪಸ್ಥಿತರಿದ್ದರು.