ಪುರಾಣ-ಪ್ರವಚನ ಆಲಿಸುವದರಿಂದ ಮನಸ್ಸಿಗೆ ನೆಮ್ಮದಿ

ಕೆಂಭಾವಿ:ಜ.1:ಪುರಾಣ-ಪ್ರವಚನ ಆಲಿಸುವದರಿಂದ ಮನಸ್ಸಿಗೆ ನೆಮ್ಮದಿ ದೊರಕುತ್ತದೆ ಎಂದು ಮುದನೂರ ಶ್ರೀ ಕೋರಿಸಿದ್ದೇಶ್ವರ ಶಾಖಾ ಮಠದ ಪೂಜ್ಯ ಷ.ಬ್ರ.ಸಿದ್ದ ಚೆನ್ನಮಲ್ಲಿಕಾರ್ಜುನ ಶಿವಾಚಾರ್ಯರು ಹೇಳಿದರು.

ಪಟ್ಟಣದ ಸಮೀಪ ಮುದನೂರ ಶ್ರೀ ಕೋರಿಸಿದ್ದೇಶ್ವರ ಪಲ್ಲಕ್ಕಿ ಉತ್ಸವ, ಹನುಮಂತ ದೇವರ 22 ವರ್ಷದ ಜಾತ್ರಾ ಮಹೋತ್ಸವದ ಅಂಗವಾಗಿ ಆರಂಭವಾದ ಪ್ರವಚನ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು. ಪ್ರಸ್ತುತ ಸನ್ನಿವೇಶದಲ್ಲಿ ಪ್ರತಿಯೊಬ್ಬರ ಮನಸ್ಸು ಕೆಟ್ಟ ವಿಚಾರಗಳಿಂದ ಕಲುಷಿತವಾಗಿದೆ. ಎಲ್ಲರೂ ನಕಾರಾತ್ಮವಾಗಿಯೆ ಯೋಚಿಸುತ್ತಿದ್ದಾರೆ. ಇಂತಹ ಸಂದರ್ಭದಲ್ಲಿ ಆಧ್ಯಾತ್ಮೀಕದ ಅವಶ್ಯಕತೆ ಅತ್ಯವಶ್ಯವಾಗಿದೆ. ಪ್ರತಿಯೊಬ್ಬರೂ ಸಂಸಾರದ ಜಂಜಾಟದಲ್ಲಿ ಸಮಯ ಮಾಡಿಕೊಂಡು ಕಡ್ಡಾಯವಾಗಿ ಪುರಾಣ ಪ್ರವಚನಗಳನ್ನು ಆಲಿಸಬೇಕು. ಕೆಟ್ಟ ವಿಚಾರಗಳನ್ನು ಒಳ್ಳೆಯ ವಿಚಾರಗಳನ್ನಾಗಿ ಪರಿವರ್ತಿಸುವ ಶಕ್ತಿ ಆಧ್ಯಾತ್ಮಕ್ಕೆ ಇದೆ ಎಂದು ಹೇಳಿದರು.

ಕಾರ್ಯಕ್ರಮದಲ್ಲಿ ಎಪಿಎಮ್‍ಸಿ ಅಧ್ಯಕ್ಷ ದೇವಣ್ಣ ಮಲಗಲದಿನ್ನಿ, ಭೀಮರಾಯ ಸಾಹು ಹೊಟ್ಟಿ, ಮಲ್ಲಯ್ಯಸ್ವಾಮಿ ವಡಗೇರಿ, ಬಸವರಾಜ ಬಂಟನೂರ, ಯಮನೇಶ ಯಾಳಗಿ, ಗೌಡಪ್ಪಗೌಡ ರಸ್ತಾಪುರ, ವೀರೇಶರೆಡ್ಡಿ ಮುದನೂರ, ನಾಡಗೌಡ ಕಾಚಾಪುರ, ನಿರ್ಮಲ್ ಬಂಡಿ, ರಮೇಶ ಚೌದ್ರಿ ಸೇರಿದಂತೆ ಇತರರು ಭಾಗವಹಿಸಿದ್ದರು.