ಪುರಾಣ ಪ್ರವಚನದಿಂದ ಮನಸ್ಸಿಗೆ ನೆಮ್ಮದಿ

ಚಿಟಗುಪ್ಪ: ಫೆ.22:ಮನಸ್ಸಿನ ನೆಮ್ಮದಿ, ಶಾಂತಿಗಾಗಿ ಪುರಾಣ, ಪುಣ್ಯಕಥೆಗಳ ಅಗತ್ಯವಿದ್ದು, ಪುರಾಣದಲ್ಲಿರುವ ಒಳ್ಳೆಯ ಅಂಶಗಳನ್ನು ಜೀವನದಲ್ಲಿ ಅಳವಡಿಸಿಕೊಳ್ಳಬೇಕು ಎಂದು ಶರಣುಕುಮಾರ ಶಾಸ್ತ್ರಿಯವರು ಹೇಳಿದರು. ಪಟ್ಟಣದ ಶ್ರೀ ಮಾಕರ್ಂಡೇಶ್ವರ ದೇವಸ್ಥಾನದಲ್ಲಿ ಮಹಾಯೋಗಿ ಗುರುದೇವ ದತ್ತ ದಿನಗಂಬ ಮಾಣಿಕೇಶ್ವರರ ದಿವ್ಯ ರಥ ನಿರ್ಮಾಣದ ನಿಮಿತ್ಯ ಪರಮ ಪೂಜ್ಯ ಶ್ರೀ ಬಾಲಯೋಗಿ ಶರಣ ಶಂಕರಲಿಂಗ ಮಹಾರಾಜರ ದಿವ್ಯ ಸಾನಿಧ್ಯದಲ್ಲಿ ಜರುಗುತ್ತಿರುವ ಮಹಾ ದಾಸೋಹಿ ಕಲ್ಬುರ್ಗಿ ಶ್ರೀ ಶರಣ ಬಸವೇಶ್ವರರ ಪುರಾಣ ಪ್ರವಚನ ಕಾರ್ಯಕ್ರಮದಲ್ಲಿ ಬುಧವಾರ ಮಾತನಾಡಿದ ಅವರು ಮನುಷ್ಯ ತನ್ನ ಎಲ್ಲ ಅಗತ್ಯಗಳನ್ನು ಅಂತರ್ಜಾಲದ ಮೂಲಕ ಅಂಗೈಯಲ್ಲಿ ಪೂರೈಸಿಕೊಳ್ಳುತ್ತಿದ್ದಾನೆ. ಇದರಿಂದಾಗಿ ಮಾನಸಿಕ ನೆಮ್ಮದಿ ಹಾಳಾಗುತ್ತದೆ. ಹಿಂದೆ ಹಿರಿಯರು ಮಾನಸಿಕ ಸಮತೋಲನಕ್ಕಾಗಿ ಪುರಾಣ, ಪುಣ್ಯ ಕಥೆಗಳನ್ನು ರಚಿಸಿದ್ದಾರೆ ಎಂದರು. ಮಲ್ಲಯ್ಯಾ ಸ್ವಾಮಿ ಐನೋಳ್ಳಿ ಸಂಗೀತ, ಷಣ್ಮುಖಯ್ಯಾ ಸ್ವಾಮಿ ತಬಲ ಸೇವೆಗೆ ಸಾಥ್ ನೀಡಲಿದ್ದಾರೆ ಮಾರ್ಚ 1ರ ವರೆಗೆ ಪುರಾಣ ಪ್ರವಚನ ನಡೆಯಲಿದೆ ಎಂದರು. ಪ್ರವಚನ ಕಾರ್ಯಕ್ರಮದಲ್ಲಿ ಪಟ್ಟಣದ ಹಿರಿಯರು, ಯುವಕರು, ಮಹಿಳಾ ತಾಯಿಯಂದಿಯರು, ಮಕ್ಕಳು ಕನ್ನಡ ಸೇನೆಯ ಕಾರ್ಯಕರ್ತರು ಇದ್ದರು.