ಪುರಾಣ ಪ್ರವಚನದಿಂದ ಮನಸ್ಸಿಗೆ ನೆಮ್ಮದಿ:ಚಂದ್ರಶೇಖರ್ ಹಿರೇಮಠ ಕರೆ

ಕಲಬುರಗಿ:ಸೆ.15:ಜೀವನದಲ್ಲಿ ಏನೇ ಒತ್ತಡ ಇದ್ದರೂ ಮನುಷ್ಯನ ಜೀವನಕ್ಕೆ ನೆಮ್ಮದಿ ಅನ್ನೋದು ಬಹಳ ಅವಶ್ಯಕತೆ ಇದೆ ಎಂದು ಹೋರಾಟಗಾರರಾದ ಶ್ರೀ ಚಂದ್ರಶೇಖರ್ ಹಿರೇಮಠ ಅವರು ಕರೆ ನೀಡಿದರು.
ಅವರು ಕಲಬುರ್ಗಿ ನಗರದ ಮಕ್ತಂಪೂರ ಬಡಾವಣೆಯಲ್ಲಿರುವ ಶ್ರೀ ರಾಚೋಟಿ ವೀರಭದ್ರೇಶ್ವರ ದೇವಸ್ಥಾನದಲ್ಲಿ ಹಮ್ಮಿಕೊಂಡ ಶ್ರೀ ಸಿದ್ಧಾಂತ ಶಿಖಾಮಣಿ ಪ್ರವಚನ ವೇದಿಕೆ ಕೇಂದ್ರ ಸಮಿತಿ ಕಲ್ಬುರ್ಗಿಯವರು ಶ್ರಾವಣ ಮಾಸದ ಅಂಗವಾಗಿ ನಡೆದ ಭಕ್ತರ ಮನೆಮನೆ ಶ್ರೀ ಸಿದ್ಧಾಂತ ಶಿಖಾಮಣಿ ಜ್ಞಾನಜ್ಯೋತಿ ಕಾರ್ಯಕ್ರಮ ಮಹಾಮಂಗಲ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದರು.
ಪವಿತ್ರ ಶ್ರಾವಣ ಮಾಸದ ಅಂಗವಾಗಿ ಶ್ರೀ ಸಿದ್ಧಾಂತ ಶಿಖಾಮಣಿಯವರು ಒಳ್ಳೆಯ ಕಾರ್ಯಕ್ರಮ ಮಾಡುತ್ತಾ ಧರ್ಮ ಗ್ರಂಥದ ಬಗ್ಗೆ ಭಕ್ತರ ಮನೆ ಮನೆಗೆ ಹೋಗಿ ಅದರ ಬಗ್ಗೆ ವಿಸ್ತಾರವಾಗಿ ತಿಳಿಸಿರುವುದು ನೋಡಿದರೆ ಬಹಳ ಹೆಮ್ಮೆ ಅನಿಸುತ್ತದೆ ವೀರಶೈವ ಧರ್ಮದ ಗ್ರಂಥ ಸಿದ್ಧಾಂತ ಶಿಖಾಮಣಿ ಪ್ರತಿಯೊಬ್ಬರು ಅದರ ಬಗ್ಗೆ ಅಧ್ಯಯನ ಮಾಡುವುದು ಬಹಳ ಅವಶ್ಯಕತೆ ಇದೆ ಸಮಾಜವನ್ನು ಒಳ್ಳೆ ಮಾರ್ಗದತ್ತ ಕೊಂಡೊಯ್ಯುವುದು ಅವಶ್ಯಕತೆ ಇದೆ ಎಂದು ಅವರು ತಿಳಿಸಿದರು. ಶ್ರೀ ಸಿದ್ದಾನಂದ ಶಿವಯೋಗಿಗಳು ಅವರ ಅಮೃತವಾಣಿಯಿಂದ ಒಂದು ತಿಂಗಳ ವರೆಗೆ ಶ್ರೀ ಸಿದ್ಧಾಂತ ಶಿಖಾಮಣಿ ಬಗ್ಗೆ ವಿಶೇಷ ಉಪನ್ಯಾಸ ನೀಡಿದರು ಈ ಸಂಸ್ಥೆ ಇನ್ನೂ ಉತ್ತಮ ಮಟ್ಟದಲ್ಲಿ ಬೆಳೆಯಲೆಂದು ಹಾರಿಸುವೆ. ವೇದಿಕೆ ಮೇಲೆ ಉಪನ್ಯಾಸಕರಾದ ಶ್ರೀ ಸಿದ್ದಾನಂದ ಶಿವಯೋಗಿಗಳು ವಿಶೇಷ ಉಪನ್ಯಾಶ ನೀಡಿದರು ಭಗವಂತ ಶರಣರು. ಗುರುದೇವ ಶರಣರು. ಅಧ್ಯಕ್ಷರಾದ ರಾಜಶೇಖರ್ ಪಾಟೀಲ್ ಶ್ರೀ ಶಿವಾನಂದ ಕಶೆಟ್ಟಿ ಶಿವರಾಯ ಮುಲಗೆ. ವಿಶ್ವನಾಥ ವಾಗಣಗೇರಿ. ಮಹಾದೇವಪ್ಪ ಆಲಗೂಡಕರ್. ಬಸಯ್ಯಸ್ವಾಮಿ ಕೊಡದೂರ ಈರಣ್ಣ ಪಾಟೀಲ್ ಹಾಗೂ ಇತರರಿದ್ದರು.