ಪುರಾಣ ಪ್ರವಚನದಿಂದ ಬದುಕು ಸಾರ್ಥಕ: ಡಾ ಮಲ್ಲಿಕಾರ್ಜುನ ಶ್ರೀಗಳು

ಶಹಾಪೂರ:ಜ.17:ಇಂದಿನ ದಿನಮಾನಗಳಲ್ಲಿ ಗ್ರಾಮಗಳಲ್ಲಿ ಸಾಮರಸ್ಯದಿಂದ ಬದುಕಲು ಪುರಾಣ ಪ್ರವಚನಗಳು ತುಂಬಾ ಅವಶ್ಯಕವಾಗಿದೆ ಎಂದು ಡಾ.ಮಲ್ಲಿಕಾರ್ಜುನ ಶ್ರೀಗಳು ಹೇಳಿದರು
ದಕ್ಷಿಣ ಶ್ರೀಶೈಲ ಶ್ರೀ ಮರಡಿ ಮಲ್ಲಿಕಾರ್ಜುನ ಶ್ರೀಗಿರಿ ಮಹಾಸಂಸ್ಥಾನ ಮಠ ಲಕ್ಷ್ಮಂಪುರ ,ಬಿಜಾಸಪುರ, ಮಠದ ಆವರಣದಲ್ಲಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಮಾತನಾಡಿದ ಡಾ.ಮಲ್ಲಿಕಾರ್ಜುನ ಶ್ರೀಗಳು ಪುರಾಣ ಪ್ರವಚನಗಳು ಇತಿಹಾಸದಿಂದಲು ಅದರದೇ ಆದ ಮಹತ್ವವಿದೆ ಅದಕ್ಕೆ ಗ್ರಾಮಗಳಲ್ಲಿ ಎಲ್ಲಾ ವರ್ಗದ ಜನರನ್ನು ಒಂದುಗೂಡಿಸಿ ಶಾಂತಿ ನೆಮ್ಮದಿಯಿಂದ ಬದುಕಲು ಪುರಾಣ ಪ್ರವಚನಗಳು ತಿಳಿಸಿ ಕೊಡುತ್ತವೆ ಅದಕ್ಕೆ ವರ್ಷದಲ್ಲಿ ಒಂದು ಬಾರಿಯಾದರೂ ಇಂತಹ ಸತ್ಕಾರಗಳು ನಡೆದಾಗ ಮಾತ್ರ ಜನರಲ್ಲಿ ಹೊಂದಾಣಿಕೆ ಶಾಂತಿ ಸಹನೆ ಪ್ರೀತಿ ವಾತ್ಸಲ್ಯದಿಂದ ಬದುಕಲು ಸಾಧ್ಯವಾಗುತ್ತದೆ ಎಂದು ಶ್ರೀಗಳು ಹೇಳಿದರು.ಮುಂದುವರೆದು ಮಾತನಾಡಿದ ಶ್ರೀಗಳು ಇಂದಿನ ದಿನಗಳಲ್ಲಿ ಗೋ ಶಾಲೆಗಳ ತೆರೆದು ಗೋವುಗಳನ್ನು ತಾಯಿಯಂತೆ ನೋಡಿಕೋಳ್ಳಬೇಕು ಯಾಕೆಂದರೆ ಗೋವುಗಳಲ್ಲಿ ಮುಕ್ಕೋಟಿ ದೇವತೆಗಳು ಇರುತ್ತಾರೆ ಅದಕ್ಕೆ ಎಲ್ಲಾರೂ ಗೋವುಗಳನ್ನು ರಕ್ಷಣೆ ಮಾಡುವುದು ಎಲ್ಲಾರ ಕರ್ತವ್ಯವಾಗಿದೆ ಎಂದು ಹೇಳಿದರು.
ಜಾತ್ರಾ ಮಹೋತ್ಸದಲ್ಲಿ ಹಲವಾರು ಧಾರ್ಮಿಕ ಕಾರ್ಯಕ್ರಮಗಳು ಜರುಗಲಿವೆ ಅದಕ್ಕೆ ಎಲ್ಲಾ ಭಕ್ತಾದಿಗಳು ಭಾಗವಹಿಸಬೇಕೆಂದು ಹೇಳಿದರು ದಿನಾಂಕ 2-1-2023 ಸೋಮವಾರದಿಂದ ದಿನಾಂಕ 23-1-2023 ರ ವರೆಗೆ ವರದಾನಿ ಗುಡ್ಡಾಪೂರದ ಶ್ರೀ ದಾನಮ್ಮದೇವಿ ಪುರಾಣ ಪ್ರವಚನ ಜರುಗಲಿದೆ ಮತ್ತು ದಿನಾಂಕ 17-1-2023 ಮಂಗಳವಾರ ಸಂಜೆ 5 ಗಂಟೆಗೆ ಶ್ರೀ ಮಠದ ದ್ವಾರ ಬಾಗಿಲಿನಿಂದ ಶ್ರೀಮಠದ ವರೆಗೆ ಕಾಶಿ ನೂತನ ಜಗದ್ಗುರುಗಳು ಅಡ್ಡ ಪಲ್ಲಕ್ಕಿ ಮಹೋತ್ಸವ ಜರುಗುವುದು ನಂತರ ಮುತ್ತೈದೆಯರಿಗೆ ಉಡಿತುಂಬುವ ಕಾರ್ಯಕ್ರಮ ನಡೆಯಲಿದೆ ಎಂದರು ಹಾಗೂ ದಿನಾಂಕ 24-1-2023 ಮಂಗಳವಾರ ಸಂಜೆ 5.40 ಕ್ಕೆ ಮಹಾರಥೋತ್ಸವ ಅದೇ ದಿನ ಸಂಜೆ 6.30 ಕ್ಕೆ ಲಕ್ಷ ದೀಪೆÇೀತ್ಸವ ನಡೆಯುತ್ತದೆ ದಿನಾಂಕ 25 -1-2023 ಬೆಳಿಗ್ಗೆ 10- .30 ರಿಂದ ಸಾಯಂಕಾಲ 5.00 ಗಂಟೆಯ ವರೆಗೆ ಉದ್ಯೋಗ ಮೇಳ ಹಾಗೂ 5 ದಿನಗಳ ಪಯರ್ಂತ ರೈತಪರ ದನಗಳ ಜಾತ್ರೆ ನಡೆಯುತ್ತದೆ ಮತ್ತು ದಿನಾಂಕ 18-2023 ರಂದು ಸಾಮೂಹಿಕ ವಿವಾಹ ಹಾಗೂ ಇನ್ನಿತರೆ ದಿನಾಂಕ 26-1-2023 ಗುರುವಾರ ಸಂಗ್ರಾಣಿ ಕಲ್ಲು ಎತ್ತುವ ಹಾಗೂ ಉಸುಕಿನ ಚೀಲ ಎತ್ತುವ ಸ್ಪರ್ಧೆಗಳು ಇರುತ್ತವೆ ಮತ್ತು ದಿನಾಂಕ 27 -2023 ಶುಕ್ರವಾರ ಜೋಡು ಎತ್ತುಗಳಿಂದ ಕಲ್ಲು ಎಳೆಯುವ ಸ್ಪರ್ಧೆ ಇರುತ್ತದೆ ಎಂದು ಮಂಠದ ಒಡೆಯರಾದ ಶ್ರೀ ಡಾ.ಮಲ್ಲಿಕಾರ್ಜುನ ಶ್ರೀಗಳು ಮಠದಿಂದ ನೆಡೆಯುವ ಕಾರ್ಯಕ್ರಮ ಬಗ್ಗೆ ವಿವರಿಸಿದರು ಎಲ್ಲಾ ಕಾರ್ಯಕ್ರಮಗಳಲ್ಲಿ ಬಿಜಾಸಪುರ ಮತ್ತು ಲಷ್ಮಂಪುರ ಹಾಗೂ ಸುತ್ತಮುತ್ತಲಿನ ಗ್ರಾಮಗಳ ಭಕ್ತಾದಿಗಳು ಭಕ್ತಾದಿಗಳು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಬೇಕೆಂದು ಎಂದು ಹೇಳಿದರು.